• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ಅವಧಿಯಲ್ಲಿದ್ದ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ರಾಜೀನಾಮೆ

|

ಬೆಂಗಳೂರು, ಜುಲೈ 26: ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನೇಮಿಸಿದ್ದ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಉದಯ್ ಹೊಳ್ಳ ಅವರು, ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಸಿಎಂ ಆಗುವ ಮೊದಲೇ ಕುಮಾರಸ್ವಾಮಿ ಆದೇಶಗಳಿಗೆ ತಡೆ ನೀಡಿದ ಯಡಿಯೂರಪ್ಪಸಿಎಂ ಆಗುವ ಮೊದಲೇ ಕುಮಾರಸ್ವಾಮಿ ಆದೇಶಗಳಿಗೆ ತಡೆ ನೀಡಿದ ಯಡಿಯೂರಪ್ಪ

ಉದಯ್ ಹೊಳ್ಳ ಅವರು ಈ ಹಿಂದೆ ಮೂರು ಬಾರಿ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. ಕುಮಾರಸ್ವಾಮಿ ಅವಧಿಯಲ್ಲಿ ಅವರು ನಾಲ್ಕನೇ ಬಾರಿಗೆ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. ಆದರೆ ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೊದಲು ಬಾರಿಗೆ 2006ರ ಎ.10ರಿಂದ 2007ರ ಅ.29ರವರೆಗೆ, ಎರಡನೇ ಬಾರಿ 2007ರ ಅ.16ರಿಂದ 2007ರ ನವೆಂಬರ್ 22ರವರೆಗೆ, 2008ರ ಜೂನ್ 2ರಿಂದ 2009ರ ಜೂನ್ 24ರವರೆಗೆ ಉದಯ ಹೊಳ್ಳ ಅಡ್ವೋಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು.

ಸಿಎಂ ಆಗುತ್ತಿದ್ದಂತೆ ರೈತರಿಗೆ, ನೇಕಾರರಿಗೆ ಉಡುಗೊರೆ ಕೊಟ್ಟ ಯಡಿಯೂರಪ್ಪಸಿಎಂ ಆಗುತ್ತಿದ್ದಂತೆ ರೈತರಿಗೆ, ನೇಕಾರರಿಗೆ ಉಡುಗೊರೆ ಕೊಟ್ಟ ಯಡಿಯೂರಪ್ಪ

ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಮಹತ್ವದ ಆದೇಶವೊಂದನ್ನು ನೀಡಿದ್ದರು, ಜುಲೈ ತಿಂಗಳಲ್ಲಿ ಘೋಷಿಸಿದ್ದ ಕಾಮಗಾರಿಗಳನ್ನು, ಆದೇಶಗಳನ್ನು ತಡೆಹಿಡಿಯುವಂತೆ ಹೇಳಿದ್ದರು. ಈಗ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಕುಮಾರಸ್ವಾಮಿ ಅವಧಿಯಲ್ಲಿ ನೇಮಕವಾಗಿದ್ದ ಕೆಲವು ಅಧಿಕಾರಗಳ ಎತ್ತಂಗಡಿ ಆಗುವ ಸಾಧ್ಯತೆ ಇದೆ.

English summary
Advocate general of Karnataka Uday Holla resigned to his job after Yeddyurappa sworn in as Chief Minister of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X