Shocking News: ರಾಜ್ಯದಲ್ಲೂ ಎರಡು ಕಡೆ ಕಲಬೆರಕೆ ತುಪ್ಪ ಪತ್ತೆ.!
ಬೆಂಗಳೂರು, ಸೆಪ್ಟೆಂಬರ್, 27: ಈಗಾಗಲೇ ವಿಶ್ವಪ್ರಸಿದ್ಧಿ ಪಡೆದಿದ್ದ ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಿಕೆ ತುಪ್ಪ, ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಕೆ ವಿವಾದದ ಕೇಳಿಬಂದಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ತಯಾರಾಗುತ್ತಿರುವ ತುಪ್ಪದ ಮಾದರಿ ಪರೀಕ್ಷೆಗೆ ಸೂಚನೆ ನೀಡಿದ್ದು, ಇದೀಗ ಎರಡು ಘಟಕಗಳಲ್ಲಿ ತಯಾರಾಗುವ ತುಪ್ಪ ಕಲಬೆರಿಕೆಯಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದೆ.
ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಈ ವೇಳೆ ರಾಜ್ಯದ ಎರಡು ಕಡೆ ಕಲಬೆರಿಕೆ ತುಪ್ಪ ಕಂಡುಬಂದಿದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳ ಘಟಕಗಳಲ್ಲಿ ಕಲಬರಕೆ ತುಪ್ಪ ಕಂಡುಬಂದಿದೆ ಎಂದು ಇಲ್ಲಿ ತಿಳಿಯಿರಿ.

ಬೆಂಗಳೂರು & ಬಾಗಲಕೋಟೆಯ ಘಟಕದಲ್ಲಿ ತಯಾರಾಗುವ ತುಪ್ಪ ಸುರಕ್ಷಿತವಲ್ಲ ಎನ್ನುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಆಹಾರ ಇಲಾಖೆ ವರದಿ ಹಿನ್ನೆಲೆ ಎರಡೂ ಘಟಕಗಳಿಗೆ ನೋಟಿಸ್ ನೀಡಲಾಗಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಿದೆ. ಮೈಸೂರು ಲ್ಯಾಬ್‌ನಲ್ಲಿ ಇದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ತಿರುಪತಿ ಲಡ್ಡು ಪ್ರಸಾದ ತಯಾರಿಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಅಂಶಗಳು ಪತ್ತೆಯಾದ ಬಳಿಕ ರಾಜ್ಯಾದ್ಯಂತ ದೇವಾಲಯಗಳಲ್ಲಿ ನಂದಿನಿ ತುಪ್ಪ ಕಡ್ಡಾಯ ಮಾಡಿ ಕರ್ನಾಟಕ ಸರ್ಕಾರ ಅದೇಶ ಹೊರಡಿಸಿತ್ತು. ಅಲ್ಲದೇ ರಾಜ್ಯದಲ್ಲಿ ಬೇರೆ-ಬೇರೆ ಘಟಕಗಳಲ್ಲಿ ತಯಾರಾಗುವ ತುಪ್ಪದ ಗುಣಮಟ್ಟದ ಪರೀಕ್ಷೆಗೂ ಸೂಚನೆ ನೀಡುವ ಮೂಲಕ ಸಮರ ಸಾರಲು ಮುಂದಾಗಿತ್ತು.
ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು: ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ಬರೀ ದೇಶ ಅಲ್ಲದೆ, ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಇಂತಹ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗುತ್ತದೆ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಇನ್ನು ಇದೀಗ ಈ ವಿವಾದದ ವರದಿ ಕೊಡುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಗೆ ಇತ್ತೀಚೆಗಷ್ಟೇ ಕೇಳಿದ್ದರು.
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ಕೋಟ್ಯಂತರ ಭಕ್ತರಿಗೆ ನೀಡಲಾಗುವ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿನ ಪ್ರಾಣಿಗಳ ಕೊಬ್ಬನ್ನು ಹಾಕಲಾಗುತ್ತದೆ ಎನ್ನುವ ವಿವಾದ ಕೇಳಿಬಂದಿದೆ. ಇನ್ನು ಈ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಕೇಳಿದ್ದರು.
ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರದಲ್ಲಿದ್ದಾಗ ಬಳಸಿದ ತುಪ್ಪದ ಮಾದರಿಗಳಲ್ಲಿ ಗೋಮಾಂಸ ಟಾಲೋ, ಮೀನಿನ ಎಣ್ಣೆ ಮತ್ತು ಹಂದಿ ಕೊಬ್ಬು ಅಥವಾ ಹಂದಿ ಮಾಂಸದ ಕುರುಹುಗಳಿವೆ ಎಂದು ಗುಜರಾತ್ ಸರ್ಕಾರಿ ಪ್ರಯೋಗಾಲಯದ ವರದಿಯನ್ನು ನಾಯ್ಡು ಅವರ ತೆಲುಗು ದೇಶಂ ಪಕ್ಷ ಈ ವಾರ ಉಲ್ಲೇಖಿಸಿದೆ.
ಇನ್ನು ಈ ವಿವಾದ ಕ್ಷಣಕ್ಕೊಂದು ತಿರುವುಪಡೆದುಕೊಳ್ಳುತ್ತಿದೆ. ದನದ ಕೊಬ್ಬು ಮಾತ್ರವಲ್ಲದೆ, ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಕೆ ಮಾತ್ರವಲ್ಲದೆ, ಜೊಗೆತೆ ಇತರೆ ಕೊಬ್ಬಿನ ಅಂಶಗಳು ಸಹ ಬಳಕೆ ಆಗಿರುವುಂತಹ ಆಘಾತಕಾರಿ ಮಾಹಿತಿಯೊಂದ ಲ್ಯಾಬ್ ರಿಪೋರ್ಟ್ ವರದಿಯಿಂದ ಬಹಿರಂಗವಾಗಿದೆ.
ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶವಷ್ಟೇ ಅಲ್ಲದೇ ಇತರೆ ಕೊಬ್ಬಿನ ಅಂಶಗಳು ಪತ್ತೆಯಾಗಿರುವುದಾಗಿ ಲ್ಯಾಬ್ ವರದಿಯಿಂದ ತಿಳಿದುಬಂದಿದೆ. ಇದಕ್ಕೆ ಕಲಬೆರೆಕೆಯ ತುಪ್ಪ ಸರಬರಾಜು ಹಿನ್ನೆಲೆ ಎಂಬುದಾಗಿ ಟಿಟಿಡಿ ಕಾರ್ಯಕಾರಿ ಅಧಿಕಾರಿ ಶ್ಯಾಮಲಾ ರಾವ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿರುಪತಿ ತಿರುಮಲ ಪ್ರಸಾದವಾದಂತ ಲಡ್ಡು ತಯಾರಿಕೆಗಾಗಿ ಎಆರ್ ಡೈರಿಯಿಂದ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಕಲಬೆರೆಕೆಯಿಂದ ಕೂಡಿರುವ ಅನುಮಾನದಿಂದ ಗುಜರಾತ್‌ನಲ್ಲಿ ಸರ್ಕಾರಿ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು ಎಂದಿದ್ದಾರೆ.
ಲ್ಯಾಬ್ ರಿಪೋರ್ಟ್ ನೋಡಿ ನಮಗೆ ಶಾಕ್ ಆಗಿದೆ. ವರದಿಯಂತೆ ತಿರುಪತಿ ತಿರುಮಲ ಲಡ್ಡು ಪ್ರಸಾದಕ್ಕೆ ಎಆರ್ ಡೈರಿಯಿಂದ ಸರಬರಾಜಂತ ತುಪ್ಪವು ಕನಿಷ್ಠ ಮಟ್ಟದಿಂದ ಕೂಡಿದೆ. ಕಲಬೆರೆಕೆಯ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.












Click it and Unblock the Notifications