Actress Ramya: ಇಂಡಿಯಾಗೆ ಭಾರತ್‌ ಎಂದು ಮರುನಾಮಕರಣ; ಹೆಸರಲ್ಲೇನಿದೆ? ಎಂದ ರಮ್ಯಾಗೆ ನೆಟ್ಟಿಗರು ಹೇಳಿದ್ದೇನು?

ಬೆಂಗಳೂರು, ಸೆಪ್ಟೆಂಬರ್‌ 06: ಇಂಡಿಯಾ ಹೆಸರನ್ನು ಭಾರತ್‌ ಎಂದು ಮರುನಾಮಕರಣ ಮಾಡುವ ಕುರಿತು ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಗೆ ವಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ, ಇತ್ತ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪರೋಕ್ಷವಾಗಿ ಕೇಂದ್ರ ಸರ್ಕಾರದ ನಡೆ ವಿರುದ್ಧ ಕಿಡಿಕಾರಿದ್ದಾರೆ

ಹೌದು, ಕುರಿತು ಟ್ವೀಟ್‌ ಮಾಡಿರುವ ಮಾಜಿ ಸಂಸದೆ ರಮ್ಯಾ, ಹೆಸರಲ್ಲೇನಿದೆ? ಆದರೂ ಸಾಕಷ್ಟು ನಡೆಯುತ್ತಿದೆ (What's in a name? A lot, apparently)ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರ.

Actress Ramya Says What’s In A Name A Lot Apparently

ಇನ್ನೂ ಮಾಜಿ ಸಂಸದೆ ರಮ್ಯಾ ತಮ್ಮ ಟ್ವೀಟ್‌ ನಲ್ಲಿ ಇಂಡಿಯಾ ಅಥವಾ ಭಾರತ್‌ ಎಂಬ ಯಾವ ಹೆಸರನ್ನು ಉಲ್ಲೇಖಿಸದ ರಮ್ಯಾ ಪರೋಕ್ಷವಾಗಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಕನ್ನಡದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ರಮ್ಯಾ ಅವರಿಗೂ ಎರಡು ಹೆಸರಿರುವುದನ್ನು ಪ್ರಸ್ತಾಪಿಸಿದ್ದಾರೆ. ರಮ್ಯಾ ಅವರು ದಿವ್ಯಾ ಎಂದು ಬದಲಾಯಿಸಿದ್ದು ಏನು? ಯಾವುದಾದರೂ ವಾಸ್ತು ಸಮಸ್ಯೆ? ಎಂದು ಪ್ರಶ್ನಿಸಿದ್ದಾರೆ. ನಟಿಯರಿಗೆ ಎರಡು ಹೆಸರು ಯಾಕೆ..! ತಂದೆ ತಾಯಿ ಇಟ್ಟಿರೊ ನಾಮವೊಂದೇ ಸಾಕಲ್ವಾ..! ಎಂದು ಟಾಂಗ್‌ ನೀಡಿದ್ದಾರೆ. ಅಲ್ಲದೇ ನೀನು ಯಾರು? ದಿವ್ಯ ಸ್ಪಂದನಾ ಅಥವಾ ರಮ್ಯಾ ? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಬೆಂಗಳೂರ ನ ಬೆಂಗಳೂರೂ ಎಂದು ಏಕೆ ಬದಲಾವಣೆ ಮಾಡಿದರು? ಗುಲ್ಬರ್ಗವನ್ನು ಕಲ್ಬುರ್ಗಿ ಎಂದು ಏಕೆ ಮರುನಾಮಕರಣ ಮಾಡಿದರು? ಸೋನಿಯಾ ಗಾಂಧಿ ಎಂದು ಏಕೆ ಮರುನಾಮಕರಣ ಮಾಡಿದ್ದರು? ಪ್ರಶ್ನಿಸಿದ್ದಾರೆ. ಅಲ್ಲದೇ ಅಲ್ಲಿನ ಪ್ರಜೆಗಳ ಭಾವನೆಗಳನ್ನು ನೀವು ಗೌರವಿಸದಿದ್ದರೆ ದೇಶಭಕ್ತಿಗೆ ಅರ್ಥವೇ ಇರುವುದಿಲ್ಲ ಎಂದು ಕೆಲವೊಬ್ಬರು ಹೇಳಿದ್ದು, ಹೆಸರಲ್ಲೇನಿದೆ ಎಂಬುದಕ್ಕೆ ಅಲ್ಲವೇ ನಿಮಗೆ ಎರಡು ಹೆಸರು ಇರುವುದು ಎಂದು ರಮ್ಯಾ ಅವರ ಕಾಲೆಳೆದಿದ್ದಾರೆ. ಅದಲ್ಲದೇ ಕೆಲವರು ಎಲ್ಲಿದ್ದೆ ಇಲ್ಲಿ ತನಕ ಎಂದು ಟ್ವೀಟ್‌ ಮಾಡಿದ್ದು, ಮತ್ತೊಂದಿಷ್ಟು ಜನ ಸಿನಿಮಾಕ್ಕಾಗಿ ರಮ್ಯಾ, ಮತ್ತೊಂದಕ್ಕಾಗಿ ದಿವ್ಯ ಹೆಸರಿನ ರೀತಿಯಲ್ಲ ಇದು ಎಂದು ಟಾಂಗ್‌ ನೀಡಿದ್ದಾರೆ.

ಇನ್ನು, ಕೆಲವೊಂದಿಷ್ಟು ಜನ ಹೆಸರಲ್ಲೇನಿದೆ ಎಂದು ಕೇಳುವ ನೀವು ನಿಮ್ಮ ಸಿನಿಮಾ ತೆರೆ ಮೇಲೆ ಬರುವ ಹೆಸರನ್ನು ದಿವ್ಯ ಸ್ಪಂದನದಿಂದ ರಮ್ಯಾ ಎಂದು ಏಕೆ ಬದಲಾಯಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. UPA ಅನ್ನು I.N.D.I.A ಗೆ ಬದಲಾಯಿಸುವುದು ಸಮಸ್ಯೆಯಾಗಿರಲಿಲ್ಲ ನಂತರ ಇಂಡಿಯಾವನ್ನು ಭಾರತಕ್ಕೆ ಬದಲಾಯಿಸುವುದು ಸಮಸ್ಯೆಯಾಗಬಾರದು ..ನೀವು ಹೇಳಿದಂತೆ.. wats In a name ? ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾರತವು ಭಾರತವಾಗಿ ಉಳಿಯಬೇಕು ಮತ್ತು ಅದನ್ನು ಭಾರತ್ ಎಂದು ಬದಲಾಯಿಸಬಾರದು .. ನಮ್ಮ ಹೃದಯದಲ್ಲಿ ನಾವು ಯಾವಾಗಲೂ ಹಿಂದೂಸ್ತಾನಿಗಳು ವಿ ಆರ್.. ಭಾರತ್ ಮಾತಾ ಕೀ ಜೈ .. ಎಂದು ಟ್ವೀಟ್‌ ಮಾಡಿದ್ದಾರೆ.

ಏನಿದು ವಿವಾದ?

ರಿಪಬ್ಲಿಕ್‌ ಆಫ್‌ ಇಂಡಿಯಾ ಎಂಬ ಹೆಸರನ್ನು ರಿಪಬ್ಲಿಕ್‌ ಆಫ್‌ ಭಾರತ್‌ ಎಂದು ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಈ ಬಗ್ಗೆ ದೇಶಾದ್ಯಂತ ವಿರೋಧ ಪಕ್ಷಗಳು ಸಾಕಷ್ಟು ವಿರೋಧವನ್ನ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿಯೇ ಸೆಪ್ಟೆಂಬರ್‌ 18ರಿಂದ ಸಂಸತ್‌ನ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇತ್ತ ಜಿ20 ಶೃಂಗಸಭೆ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣ್ಯರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. ಈ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್‌ ಆಫ್‌ ಭಾರತ್‌ ಎಂದು ಉಲ್ಲೇಖಿಸಿರುವುದು ವಿವಾದಕ್ಕೆ ಪ್ರಮುಖ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+