Darshan: ಇಂದು ಮೈಸೂರಿಗೆ ತೆರಳಲಿದ್ದಾರೆ ನಟ ದರ್ಶನ್: ಕಾರಣ ಏನು ಗೊತ್ತಾ?

ಬೆಂಗಳೂರು, ಜೂನ್‌ 18: ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್​ ಇದೀಘ ಅಕ್ಷರಶಃ ವಿಲವಿಲ ಎನ್ನುವತ್ತಿದ್ದು, ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಪ್ರಕರಣದ ಕುರಿತು ತನಿಖೆಯಾದಷ್ಟು ಹಲವು ಹೆಸರುಗಳು ಕೇಳಿ ಬರುತ್ತಿವೆ.

ಹೌದು, ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಸ್ಟಾರ್ ಹೀರೋಗಳಿಗೆ ನೋಟಿಸ್ ನೀಡೋ ಕೆಲಸ ಆಗುತ್ತಿದೆ. ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ ಇದ್ದರು ಅನ್ನೋ ಕಾರಣಕ್ಕೆ ಅವರಿಗೂ ಚಿಕ್ಕಣ್ಣ ಅವರಿಗೂ ನೋಟಿಸ್ ಹೋಗಿದೆ.ಈ ಬಗ್ಗೆ ನಟ ಚಿಕ್ಕಣ್ಣ ಅವರೇ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಇನ್ನೂ ಇಂದು ನಟ ದರ್ಶನ್‌ ಅವರನ್ನ ಪೊಲೀಸರು ಮೈಸೂರಿಗೆ ಕರೆದುಕೊಂಡು ಹೋಗುವ ಸಿದ್ಧತೆಯನ್ನ ಮಾಡಿಕೊಂಡಿದ್ದಾರೆ.

Actor To Travel Mysore With Police For Enquiry

ರೇಣುಕಾ ಸ್ವಾಮಿ ಕೊಲೆ ಕೇಸ್‌ ಪ್ರಕರಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ದರ್ಶನ್‌ ಹಾಗೂ ಅವರ ಗ್ಯಾಂಗ್‌ನವರನ್ನ ವಿಚಾರಣೆ ನಡೆಸುತ್ತಿದ್ದು, ರೇಣುಕಾಸ್ವಾಮಿ ಅವರ ಕೊಲೆ ಬಳಿಕ ನಟ ದರ್ಶನ್‌ ಮೈಸೂರಿಗೆ ತೆರಳಿ, ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಈ ಪ್ರಕರಣದಲ್ಲಿ ಕೆಲವರು ಶರಣಾಗಲು ಒಪ್ಪದೇ ಇದ್ದಾಗ ಮೈಸೂರಿಗೆ ಕರೆಸಿ ಅವರ ಮನ ಒಲಿಸೋ ಪ್ರಯತ್ನವನ್ನು ದರ್ಶನ್ ಮಾಡಿದ್ದರು. ಹೀಗಾಗಿ ಅಲ್ಲಿಯೂ ವಿಚಾರಣೆ ಮುಖ್ಯ ಎಂದು ಪೊಲೀಸರು ಇಂದು ಮೈಸೂರಿಗೆ ದರ್ಶನ್‌ ಕರೆದುಕೊಂಡು ಹೋಗುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ ಜೊತೆಗೆ ಇಂದು (ಜೂನ್‌ 18) ಪವನ್, ನಾಗರಾಜ್, ನಂದೀಶ್, ಲಕ್ಷ್ಮಣ್, ದೀಪಕ್​ನನ್ನು ಮೈಸೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಮೈಸೂರಿನ ಖಾಸಗಿ ಹೋಟೆಲ್‌ ಸೇರಿದಂತೆ ಹಲವೆಡೆ ದರ್ಶನ್‌ ಉಳಿದುಕೊಂಡ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಕೊನೆ ಬಳಿಕ ರ್ಶನ್ ಮೈಸೂರಿನಲ್ಲಿ ಏನು ಮಾಡಿದರು, ಕೊಲೆಗೆ ಸಂಬಂಧಿಸಿ ಅವರು ಹೋಟೆಲ್​ನಲ್ಲಿ ಚರ್ಚೆ ಮಾಡಿದ್ದರೇ ಎನ್ನುವ ಕುರಿತು ತನಿಖೆ ನಡೆಸಲಿದ್ದಾರೆ.

ಜೂನ್ 11 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್ ಜೊತೆ ಪವಿತ್ರಾ ಗೌಡ, ಪವನ್, ವಿನಯ್ ಸೇರಿ 19 ಜನರ ಬಂಧನ ಆಗಿದೆ. ಅವರ ವಿಚಾರಣೆ ಪ್ರಗತಿಯಲ್ಲಿದೆ. ಈಗಾಗಲೇ ಪೊಲೀಸರು ಎರಡನೇ ಬಾರಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಇಂದು ನಟ ದರ್ಶನ ಮೈಸೂರಿನಲ್ಲಿ ಉಳಿದುಕೊಂಡ ಸ್ಥಳಗಳಿಗೆ ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+