Darshan: ನ್ಯಾಯಾಂಗ ವ್ಯವಸ್ಥೆ ಜೊತೆ ಆಟವಾಡಿದ್ರಾ ದರ್ಶನ್?: ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇಕೆ?
ಬೆಂಗಳೂರು, ಆಗಸ್ಟ್ 29: ಕೊಲೆ ಪ್ರಕರಣದಲ್ಲಿ ಕಳೆದ ಎರಡು ತಿಂಗಳಿಂದ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಜೈಲಿನಲ್ಲಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ತೂಕ ಕಳೆದುಕೊಂಡಿದ್ದಾರೆ. ಜೈಲಿನ ಆಹಾರ ಸೇರುತ್ತಿಲ್ಲ ಎನ್ನಲಾಗಿತ್ತು. ಈ ಸಂಬಂಧವೇ ನಟ ದರ್ಶನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ರಾಜ್ಯದ ಜನರೆಲ್ಲರು ನಂಬಿಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ಹಾಗಾದರೆ ನಟ ದರ್ಶನ್ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಆಟವಾಡಿದರೇ, ಅರ್ಜಿ ಸಲ್ಲಿಸಿ ಜನರನ್ನು ನಂಬಿಸಿ ಮೂರ್ಖರನ್ನಾಗಿ ಮಾಡಿದರೇ? ಇಲ್ಲಿದೆ ಮಾಹಿತಿ.
ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ 12 ದಿನ ಪೊಲೀಸ್ ವಿಚಾರಣೆ ಎದುರಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿತ್ತು. ಅದರಿಂದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿದ್ದರು. ಈ ವೇಳೆ ದರ್ಶನ್ ಗೆ ನೆಲದ ಮೇಲೆ ನಿದ್ದೆ ಬರುತ್ತಿಲ್ಲ. ಊಟದ ಸಮಸ್ಯೆ ಆಗುತ್ತಿದೆ. ಇನ್ನಿತರ ಆರೋಗ್ಯ ಸಮಸ್ಯೆ ಎಂದೆಲ್ಲ ಹೇಳಲಾಗಿತ್ತು.

ರಾಜ್ಯದ ಜನರ ನಂಬಿಸಲು ಕೋರ್ಟ್‌ಗೆ ದರ್ಶನ್ ಅರ್ಜಿ
ಜೈಲಿನ ಊಟ ಸರಿ ಹೋಗುತ್ತಿಲ್ಲ. ತೂಕ ಇಳಿಕೆ ಆಗಿದೆ ಎಂದು ನೆಪ ಹೇಳಿ, ಮನೆ ಊಟಕ್ಕಾಗಿ ನಟ ದರ್ಶನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯು ಹೈಕೋರ್ಟ್ ಹಾಗೈ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಆದರೆ ಅರ್ಜಿ ಪುರಸ್ಕೃತಗೊಳ್ಳಲಿಲ್ಲ. ದರ್ಶನ್‌ಗೆ ಮನೆಯಿಂದ ಊಟದ ಬೇಡಿಕೆ ಈಡೇರಲಿಲ್ಲ.
ಇದೆಲ್ಲ ಬೆಳವಣಿಗೆ ನೋಡಿದ ಮೇಲೆ ನಟ ದರ್ಶನ್ ಒಳಗಡೆ ಸಾಮಾನ್ಯ ಖೈದಿಯಂತೆ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಜೈಲಿನೊಳಗೆ ಜೀವಾವಧಿ ಶಿಕ್ಷೆ ಪಡೆದ ಆರೋಪಿ, ರೌಡಿ ಶೀಟರ್ ಜೊತೆಗೆ ದರ್ಶನ್ ಆರಾಮಾಗಿ ಕುಳಿತ ದೃಶ್ಯಗಳು ವೈರಲ್ ಆದವು.
ಜೈಲು ಒಳಗಿನ ಅಪರಾಧಿಯಿಂದಲೇ ಸುಮಾರು 06 ಲಕ್ಷ ರೂಪಾಯಿ ಬೆಳೆ ಬಾಳುವ ದುಬಾರಿ ಗಿಫ್ಟ್‌ಗಳನ್ನು ದರ್ಶನ್ ಪಡೆದಿದ್ದಾರೆ. ಟಿ, ಸಿಗರೇಟ್, ಮದ್ಯೆ ಎಲ್ಲವನ್ನು ಸೇವಿಸಿಕೊಂಡು ಮನ ಬದಂತೆ ಓಡಾಡಿಕೊಂಡು ಆರಾಮಾಗಿ ಇದ್ದಾರೆ. ಮನೆ ಹೊರಗಡೆ ಗಾರ್ಡನ್‌ನಲ್ಲಿ ಕುಳಿತ ಹಾಗೆ ಟಿಪಾಯಿ ಮುಂದೆ ಕುಳಿತಿದ್ದ ದರ್ಶನ್ ಹಾಗೂ ಇತರರ ಫೋಟೋ ವೈರಲ್ ಆದವು. ಜೈಲಿನೊಳಗಿನಿದ್ದೆ ದರ್ಶನ್ ಹೊರಗಿನವರ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದ ವಿಡಿಯೋ ಸಹ ರಾಜ್ಯದ ಜನರಿಗೆ ಕೈಗೆ ಸಿಕ್ಕಿತು.
ಹಾಗಾದರೆ ಜೈಲಿನೊಳಗೆ ಎಲ್ಲ ಸೌಲಭ್ಯ ಪಡೆದುಕೊಂಡು, ಹಣ ಬಲ, ಅಧಿಕಾರ ಬಲದಿಂದ ವಿಶೇಷ ಆತಿಥ್ಯದಲ್ಲಿ ವಾಸವಿದ್ದುಕೊಂಡು ಹೊರಗಡೆ ಮಾಧ್ಯಮದವರನ್ನು, ಅಭಿಮಾನಿಗಳು ಸೇರಿದಂತೆ ರಾಜ್ಯ ಜನರನ್ನು ನಂಬಿಸಲು ನ್ಯಾಯಾಯಲಯದ ಮೊರೆ ಹೋದರಾ ನಟ ದರ್ಶನ್ ಎಂಬ ಅನುಮಾನ ಮೂಡಿದೆ. ಈ ಕುರಿತು ಕೆಲವರು ದರ್ಶನ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.
ಜೈಲು ವ್ಯವಸ್ಥೆ ವಿರುದ್ಧ ಆಕ್ರೋಶ
ಜೈಲಿನ ಒಳಗಿದ್ದ ದರ್ಶನ್ ರಾಜಾತಿಥ್ಯದ ಫೋಟೋಗಳು ವೈರಲ್ ಆದ ಬಳಿಕ ದರ್ಶನ್ ಮೇಲೆ ಮತ್ತೆ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಇದೆಲ್ಲವು ರಾಜ್ಯ ಪೊಲೀಸ್ ಇಲಾಖೆ, ಜೈಲು ಸುಧಾರಣೆ ವ್ಯವಸ್ಥೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ದರ್ಶನ್‌ಗೆ ನಾಗನಿಂದ 6 ಲಕ್ಷ ರೂ.ಮೌಲ್ಯದ ದುಬಾರಿ ಗಿಫ್ಟ್
ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗನಿಂದ 20 ಸಾವಿರ ರೂ. ಶೂಗಳು, ಚಪ್ಪಳಿ, ಬ್ರಾಂಡೆಂಡ್ ಬಟ್ಟೆ ಸೇರಿದಂತೆ ಒಟ್ಟು 06 ಲಕ್ಷ ರೂಪಾಯಿ ವೆಚ್ಚದ ಗಿಫ್ಟ್‌ಗಳನ್ನು ನಟ ದರ್ಶನ್ ಪಡೆದಿದ್ದಾರೆ. ಇದೇ ಅವರಿಗೆ ಸಂಚಕಾರ ತಂದಿದೆ. ಜೈಲಿನ ಒಳಗೆ ಎಲ್ಲೆಂದರಲ್ಲಿ ಓಡಾಡಲು ಜೈಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಇದೆಲ್ಲ ಕಾರಣದಿಂದ ನಟ ದರ್ಶನ್ ಅನ್ನು ಇಂದು ಗುರುವಾರ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.












Click it and Unblock the Notifications