BREAKING: ಇಂದು ನಟ ದರ್ಶನ್ ನ್ಯಾಯಾಂಗ ಬಂಧನ ಅಂತ್ಯ: 17 ಆರೋಪಿಗಳು ಜಾಮೀನು ಅರ್ಜಿ ಸಲ್ಲಿಕೆ ಸಾಧ್ಯತೆ

ಬೆಂಗಳೂರು, ಸೆಪ್ಟಂಬರ್ 09: ಬಳ್ಳಾರಿ ಜೈಲಲ್ಲಿರುವ ಕೊಲೆ ಆರೋಪಿ ನಟ ದರ್ಶನ್ ಸೇರಿದಂತೆ 17 ಮಂದಿಯ ನ್ಯಾಯಾಂಗ ಬಂಧನ ಇಂದು ಸೆಪ್ಟಂಬರ್ 09ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆ ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಸ್ಯಾಂಡಲ್‌ವುಡ್ ಸ್ಟಾರ್‌ನಟರೊಬ್ಬರ ಬಂಧನವಾಗಿ ಬರೋಬ್ಬರಿ ಮೂರು ತಿಂಗಳು ಕಳೆದಿದ್ದು, ಇಂದು ಆರೋಪಿಗಳೆಲ್ಲರು ವಿಚಾರಣೆಗೆ ಹಾಜರಾಗಲಿದ್ದಾರೆ. ಜಾಮೀನಿಗಾಗಿ ನಟ ದರ್ಶನ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17ಮಂದಿ ಬಂಧಿಸಲಾಗಿತ್ತು. ಕಳೆದ ಬಾರಿ ನ್ಯಾಯಾಲಯವು 14ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶಿಸಿತ್ತು. ಮೂರು ತಿಂಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ನ್ಯಾಯಾಂಗ ಬಂಧನದ ಅವಧಿಯು ಮುಗಿದ ಹಿನ್ನೆಲೆಯಲ್ಲಿ ಇಂದು ಮತ್ತೆ ವಿಚಾರಣೆ ನಡೆಯಲಿದೆ.

Actor Darshan Judicial Custody Ends on September 9th 17 Accused will Apply for Bail Today

ಈವರೆಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸದ ನಟ ದರ್ಶನ್ ಚಾಜ್‌ ಶೀಟ್ ಸಲ್ಲಿಕೆ ಬೆನ್ನಲ್ಲೆ ವಕೀಲರೊಂದಿಗೆ ಕೆಲವು ವಿಷಯಗಳನ್ನು ಚರ್ಚಿಸಿದ್ದಾರೆ. ಇದೀಗ ನಟ ದರ್ಶನ್ ಹಾಗೂ ಸಹಚರರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆಂದು ತಿಳಿದು ಬಂದಿದೆ.

ಸದ್ಯ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ, ಪ್ರದೂಷ್ ಬೆಳಗಾವಿ ಜೈಲು ಸೇರಿದಂತೆ ಕೆಲವು ಆರೋಪಿಗಳು ಬೇರೆ ಬೇರೆ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದರು. ಪವಿತ್ರಾಗೌಡ ಸೇರಿದಂತೆ ಮತ್ತೆ ಕೆಲವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿಯೇ ಉಳಿದಿದ್ದರು. ಇಂದು ಅವರೆಲ್ಲರನ್ನು ಪೊಲೀಸರು ಜೈಲಿನಿಂದಲೇ ವಿಡಿಯೋ ಕಾನ್ಸ್‌ರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಪವಿತ್ರಾಗೌಡ ಅರ್ಜಿ ತಿರಸ್ಕೃತ ಇಂದು ಮತ್ತೆ ಅರ್ಜಿ ಸಲ್ಲಿಕೆ?

ಆರೋಪಿ ನಟ ದರ್ಶನ್ ಪ್ರೇಯಸಿ, ನಟಿ ಪವಿತ್ರಾಗೌಡ ಪ್ರಕರಣದಲ್ಲಿ A1 ಆರೋಪಿಯಾಗಿದ್ದು, ಇತ್ತೀಚೆಗೆ ಸಲ್ಲಿಸಿದ್ದ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೆ ಆಕೆಯು ಸಹ ಇಂದು ಮತ್ತೆ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.

ಚಾರ್ಜ್ ಶೀಟ್ ಸಲ್ಲಿಕೆ: ದರ್ಶನ್ ಮಾಹಿತಿ

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬರೋಬ್ಬರಿ 3991 ಪುಟಗಳ ಬೃಹತ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅಂದು ಬಳ್ಳಾರಿ ಜೈಲಿನಿಂದ ಪತ್ನಿ ವಿಜಯಲಕ್ಷ್ಮೀಗೆ ಕರೆ ಮಾಡಿದ್ದ ನಟ ದರ್ಶನ್ ಚಾರ್ಜ್ ಶೀಟ್, ಅಪ್ಡೇಟ್ ಮಾಹಿತಿ ಪಡೆದುಕೊಂಡಿದ್ದರು. ಅಲ್ಲದೇ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪತ್ನಿ ಹಾಗೂ ವಕೀಲರ ಬಳಿ ಮಾಹಿತಿ ಪಡೆದುಕೊಂಡಿದ್ದರು. ಇದೀಗ ನ್ಯಾಯಾಂಗ ಅವಧಿ ಅಂತ್ಯಗೊಂಡಿದ್ದು, ಜಾಮೀನಿಗಾಗಿ ದರ್ಶನ್ ಮತ್ತು ಸಹಚರರು ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಈವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೊಂಡಿತ್ತು. ಇದೀಗ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಆರೋಪಿಗಳಿಗೆ ಜಾಮೀನು ಸಿಗುತ್ತಾ? ಯಾರಿಗೆ ಸಿಗುತ್ತೆ? ಯಾರಿಗೆ ಸಿಗಲ್ಲ? ಏನೆಲ್ಲ ವಿಚಾರಣೆ ನಡೆಯಲಿದೆ?, ಏನು ಹೊರಬೀಳಲಿದೆ? ಎಂಬುದರ ಕುರಿತು ರಾಜ್ಯದ ಜನರ ಕುತೂಹಲ ಹೆಚ್ಚಾಗಿದ್ದು, ಇಂದು ಒಂದಷ್ಟು ಮಾಹಿತಿ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+