Darshan Thoogudeepa Case: ದೊಡ್ಮನೆ ಬಗ್ಗೆ ಕೀಳಾಗಿ ಮಾತನಾಡಿದ ದರ್ಶನ್ ಅಭಿಮಾನಿ; ಆಮೇಲೆ ಆಗಿದ್ದೇನು?
Actor Darshan Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಈ ಪ್ರಕರಣದ ತನಿಖೆಯನ್ನು ಪೊಲಿಸರು ಚುರುಕುಗೊಳಿಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಲಿದ್ದು, ಈ ನಡುವೆಯೇ ಈಗಾಗಲೇ ಅಂಧಾಭಿಮಾನ ಮೆರೆದವರನ್ನು ಹೆಡೆಮುರಿ ಕಟ್ಟಿದ್ದರು. ಇದೀಗ ಮತ್ತೊಬ್ಬ ವ್ಯಕ್ತಿಯೊಬ್ಬ ಅಂಧಾಭಿಮಾನ ಮೆರೆದು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಅಲ್ಲದೆ, ದರ್ಶನ್ ಪರ-ವಿರೋಧದ ಚರ್ಚೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿವೆ. ಇದ್ಯಾವುದಕ್ಕೂ ಕ್ಯಾರೆ ಅನ್ನದ ಪೊಲೀಸ್ ಪಡೆ ತನಿಕೆಯನ್ನು ಚುರುಕುಗೊಳಿಸಿ ದಿನಕ್ಕೊಂದು ಸಾಕ್ಷ್ಯಗಳನ್ನು ಕೆದಕುತ್ತಲೇ ಇದ್ದಾರೆ.

ಇನ್ನು ದರ್ಶನ್ ಅಭಿಮಾನಿಯೊಬ್ಬ ದೊಡ್ಮನೆ ಏನಿದ್ರೂ ತೂಗೂದೀಪ ಶ್ರೀನಿವಾಸ ಮನೆ ಅಂತಾ ಹೇಳಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಇನ್ನು ಕೊನೆಗೆ ಆತನೇ ಕ್ಷಮೆ ಕೇಳಿ ದೊಡ್ಮನೆ ಅಂದ್ರೆ ಅದು ರಾಜ್‌ಕುಮಾರ್ ಮನೆ ಮಾತ್ರ ಅಂತಾ ಕೈಮುಗಿಯುತ್ತಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಹಿರಿಯರು ಹೇಳುವ ಹಾಗೆ ತೂಗೂದೀಪ ಶ್ರೀನಿವಾಸ ಹಾಗೂ ರಾಜ್‌ಕುಮಾರ್ ಕುಟುಂಬಗಳು ತುಂಬಾ ಅನ್ಯೋನ್ಯತೆಯಿಂದ ಇದ್ದವು. ಆದರೆ, ಇದೀಗ ಅಂಧಾಭಿಮಾನಿಗಳು ಮಾತ್ರ ಮಾಡೋದಿಕ್ಕೆ ಕೆಲಸ ಇಲ್ಲದೆ, ಫ್ಯಾನ್ ವಾರ್ ಮಾಡುತ್ತಾ ತಂದಿಡುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ನೆಚ್ಚಿನ ನಟರ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಸಾಲದೆಂಬಂತೆ ಇದನ್ನು ಕೊನೆಗೆ ಮಾಧ್ಯಾಮದವರ ಮೇಲೆ ಎಳೆಯೋದು.. ಬರೀ ಇದೇ ಆಗಿಬಿಟ್ಟಿದೆ.
ಅಲ್ಲದೆ, ದರ್ಶನ್ ಬಂಧನ ಆದಾಗಿನಿಂದ ಕೆಲವು ದಿನಗಳವರೆಗೆ ಅಂಧಾಭಿಮಾನಿಗಳ ದರ್ಬಾರ್ ಮುಂದುವರೆದಿತ್ತು. ಪೊಲೀಸ್, ಕೋರ್ಟ್‌ನತ್ತ ಆಗಮನಿಸಿ ಡಿ ಬಾಸ್.. ಡಿ ಬಾಸ್ ಎಂದು ಕೂಗುವುದಲ್ಲದೇ, ಸಾರ್ಜನಿಕರು ಹಾಗೂ ವಾಹನ ಸವಾರರಿಗೆ ರಸ್ತೆಗಯಲ್ಲಿ ತೊಂದರೆ ಮಾಡಿದ್ದು, ಬಳಿಕ ಎಚ್ಚೆತ್ತ ಪೊಲೀಸರು ಇಂತಹ ಅಂಧಾಭಿಮಾನಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಿದರು.
ಹಾಗೆಯೇ ಇದೀಗ ಯಾವುದೋ ಥಿಯೇಟರ್‌ನಲ್ಲಿ ದರ್ಶನ್ ಅಭಿಮಾನಿಯೊಬ್ಬ ದೊಡ್ಮನೆ ಬಗ್ಗೆ ಕೀಳಾಗಿ ಮಾತನಾಡಿ ಕೊನೆ ಕೈಮುಗಿದು ಕ್ಷಮೆ ಕೇಳಿದ ಘಟನೆ ನಡೆದಿದೆ. ಇನ್ನು ನೆಟ್ಟಿಗರೊಬ್ಬರು ಕಾಮೆಂಟ್ ಬಾಕ್ಸ್‌ನಲ್ಲಿ "ಮೂವಿ ನೋಡೋಕೆ ಹೋದಮೇಲೆ, ಮೂವಿ ಬಗ್ಗೆ ಮಾತನಾಡುವುದು ಬಿಟ್ಟು ದೊಡ್ಮನೆ ವಿಷಯ ಯಾಕೆ ಬೇಕಾಗಿತ್ತು," ಎಂದು ತರಾಟೆ ತೆಗೆದುಕೊಂಡಿದ್ದಾರೆ.












Click it and Unblock the Notifications