Nikhil Kumaraswamy: ʼನಿಖಿಲ್ ಕುಮಾರಸ್ವಾಮಿ ಗೆದ್ದು ವಿಧಾನಸೌಧಕ್ಕೆ ಹೋಗೋದು ಗ್ಯಾರಂಟಿʼ
ರಾಮನಗರ, ನವೆಂಬರ್ 14: ನಿಖಿಲ್ ಕುಮಾರಸ್ವಾಮಿ ಅವರಿಗೆ ನೀವು MLA ಆಗ್ತೀರ ನಮಗೆ ನಂಬಿಕೆ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಲ್ಲಿ ಕಾರ್ಯಕರ್ತರು ಭರವಸೆ ಕೊಟ್ಟರು. ಇದೇ ವೇಳೆ ಮತದಾರರು ಗೆಲ್ತಾರಪ್ಪ ಗೆಲ್ತಾರೆ ನಿಖಿಲ್ ಅಣ್ಣ ಗೆಲ್ತಾರೆ ಎಂದು ಘೋಷಣೆ ಕೂಗಿದರು.
ಚನ್ನಪಟ್ಟಣದ ಕೆಲ ಗ್ರಾಮಗಳಿಗೆ ಭೇಟಿ ಕೊಟ್ಟಗ ಅಲ್ಲಿನ ಜನರು ನಿಖಿಲ್ ಕುಮಾರಸ್ವಾಮಿ ಅವರು ಜತೆ ಸೆಲ್ಫಿ ತೆಗೆದುಕೊಂಡು ನಮ್ಮ ಮತ ನಿಮಗೆ, ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತಿರ ನಮ್ಮ ಶಾಸಕರು ನೀವೇ ಎಂದು ಭರವಸೆಯನ್ನು ನೀಡಿದರು.

ಅಭಿಮಾನಿ ಯುವತಿಯೊಬ್ಬಳು ನಾವು ನಿಮ್ಮ ದೊಡ್ಡ ಅಭಿಮಾನಿ ನಮ್ಮ ಮನೇಗೆ ನೀವು ಬರಬೇಕು ಎಂದು ಯುವತಿ ಮನವಿ ಮಾಡಿದರು, ನಂತರ ಮನೆಗೆ ಭೇಟಿ ನೀಡಿದ ಅವರು ನಿಖಿಲ್ ಅವರು ಒಬ್ಬಟ್ಟು ಸವಿದರು.
ಚನ್ನಪಟ್ಟಣ ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ನಿಖಿಲ್ ಅಣ್ಣ ಅವರು ನೂರಕ್ಕೆ ನೂರರಷ್ಟು ಗೆಲುವು ನಿಶ್ಚಿತ, ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆಗೆ ಹೋಗುತ್ತಾರೆ. ಯುವ ಪೀಳಿಗೆಗೆ ನಿಖಿಲ್ ಅಣ್ಣ ಅಂತವರು ರಾಜಕೀಯದಲ್ಲಿ ಇರಬೇಕು, ವಿಧಾನ ಸಭೆಯಲ್ಲಿ ಅವರು ಯುವ ಸಮುದಾಯದ ಪರವಾಗಿ ಕೆಲಸ ಮಾಡ್ತಾರೆ ಎಂದು ಘೋಷಣೆ ಕೂಗಿದರು.
ಈ ವೇಳೆ ಎನ್ ಡಿ ಎ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ,ಚನ್ನಪಟ್ಟಣ ಜನರು ನನಗೆ ತೋರಿದ ಪ್ರೀತಿ ಮತ್ತು ವಾತ್ಸಲ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರ ಪ್ರೀತಿಗೆಅಭಿಮಾನಕ್ಕೆ ಕಾಣಿಕೆಯಾಗಿ ನಾನು ಇಲ್ಲಿ ಕೆಲಸ ಮಾಡಲಿದ್ದೇನೆ. ಅವರು ನನಗೆ ಅವಕಾಶವನ್ನು ನೀಡಲಿದ್ದಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.












Click it and Unblock the Notifications