ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸಿಗೆ-ದಿಂಬು ಖರೀದಿ ಹಗರಣ, ಮೆತ್ತಗಾದ ಸರ್ಕಾರ

|
Google Oneindia Kannada News

ಬೆಳಗಾವಿ, ಜುಲೈ 09 : ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಹಾಸಿಗೆ-ದಿಂಬು ಖರೀದಿ ಮಾಡುವಾಗ 19 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೂಲಕ ತನಿಖೆ ನಡೆಸಲು ಸರ್ಕಾರ ಒಪ್ಪಿಗೆ ನೀಡಿದೆ.

ವಿಧಾನ ಪರಿಷತ್ತಿನಲ್ಲಿ ಎರಡು ದಿನಗಳ ಕಾಲ ಹಾಸಿಗೆ-ದಿಂಬು ಖರೀದಿ ಬಗ್ಗೆ ಚರ್ಚೆ ನಡೆಯಿತು. ಅವ್ಯವಹಾರದ ಪ್ರಕರಣವನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಮೂಲಕ ತನಿಖೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಬುಧವಾರದ ಕಲಾಪದಲ್ಲಿ ಪ್ರಕಟಿಸಿದರು. [ವಿಧಾನ ಪರಿಷತ್ತಿನಲ್ಲಿ ಹಾಸಿಗೆ, ದಿಂಬು ಖರೀದಿ ಬಗ್ಗೆ ಚರ್ಚೆ]

legislative council

ಸರ್ಕಾರದ ನಿರ್ಧಾರವನ್ನು ಒಪ್ಪಿಕೊಂಡ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮಂಗಳವಾರದಿಂದ ನಡೆಸುತ್ತಿದ್ದ ಧರಣಿಯನ್ನು ವಾಪಸ್ ಪಡೆದರು. ತನಿಖೆಯ ಪ್ರಾಥಮಿಕ ವರದಿಯನ್ನು ಮುಂಗಾರು ಅಧಿವೇಶನದಲ್ಲಿಯೇ ಮಂಡಿಸಲಾಗುತ್ತದೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ['ಸಿದ್ದರಾಮಯ್ಯ ಕಾಂಗ್ರೆಸ್ಸಿನ ಕೊನೆ ಮುಖ್ಯಮಂತ್ರಿ']

ಸಚಿವರು ನೀಡಿದ ಉತ್ತರ : ಹಾಸಿಗೆ-ದಿಂಬು ಖರೀದಿ ಹಗರಣದ ಬಗ್ಗೆ ಉತ್ತರ ನೀಡಿದ ಸಚಿವ ಎಚ್. ಆಂಜನೇಯ ಅವರು, 'ಹಗರಣವನ್ನು ಸ್ವತಃ ನಾನೇ ಪರಿಶೀಲನೆ ನಡೆಸಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಸೂಕ್ತ ತನಿಖೆ ಕೈಗೊಳ್ಳುವಂತೆ ಅವರು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ' ಎಂದು ಹೇಳಿದರು.

ಶರವಣ ದಿಂಬು ಹೊತ್ತು ಬಂದರು : ಹಾಸಿಗೆ-ದಿಂಬು ಖರೀದಿ ಹಗರಣದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜೆಡಿಎಸ್ ಸದಸ್ಯ ಶರವಣ ಅವರು ತಲೆಯ ಮೇಲೆ ದಿಂಬು ಹೊತ್ತು ಪರಿಷತ್ತಿಗೆ ಆಗಮಿಸಿದ್ದರು. ಇದಕ್ಕೆ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಡಿ.ಎಚ್.ಶಂಕರಮೂರ್ತಿ ಗರಂ : ಶರವಣ ವರ್ತನೆಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರು ಇಂಥ ವರ್ತನೆ ತೋರಿದರೆ ಹೇಗೆ? ಎಂದು ಪ್ರಶ್ನಿಸಿದರು. ಸದನದಲ್ಲಿ ಪ್ರತಿಭಟನೆ ನಡೆಸಲು ಹಲವಾರು ಮಾರ್ಗಗಳಿವೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಿಗೆ ಖರೀದಿ ಮಾಡಿರುವ ದಿಂಬು, ಹಾಸಿಗೆ ಬಗ್ಗೆ ವಿಧಾನಷರಿಷತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಎರಡು ದಿನ ಮಾತಿನ ಚಕಮಕಿ ನಡೆದಿತ್ತು. 19 ಕೋಟಿಯ ಅವ್ಯವಹಾರದ ತನಿಖೆಯನ್ನು ಸದನ ಸಮಿತಿಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದವು.

English summary
Belagavi assembly session : In legislative council Social Welfare minister H.Anjaneya said, Additional Chief Secretary will probe the mattresses and pillows scam. Government will take appropriate action against the guilty officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X