Acid Attack; ಆ್ಯಸಿಡ್ ದಾಳಿಕೋರರಿಗೆ ಗಲ್ಲು ಶಿಕ್ಷೆಯಾಗಬೇಕು: ಶೋಭಾ ಕರಂದ್ಲಾಜೆ
ಮೈನರ್ ಹುಡುಗಿಯರಿಗೆ ಹಿಂಸೆ, ಕಿರುಕುಳ ಕೊಟ್ಟವರಿ ಗಲ್ಲು ಶಿಕ್ಷೆ ಆಗುತ್ತೆ. ಆದರೆ, ಕಾನೂನು ಕಾನೂನಾಗಿಯೇ ಉಳಿದುಕೊಳ್ಳುತ್ತಾ ಅಂತ ಅನಿಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬೆಂಗಳೂರು,ಫೆಬ್ರವರಿ18: ಅಪ್ರಾಪ್ತ ಬಾಲಕಿ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಸಿಡ್ ದಾಳಿಕೋರರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ರಾಮನಗರದ ಕನಕಪುರದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಯುವಕನೊಬ್ಬ ಆ್ಯಸಿಡ್ ಎರಚಿದ್ದು, ಈ ಸಂಬಂಧ ಶನಿವಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ, ಸಂತ್ರಸ್ತ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ.

ಬಾಲಕಿಯ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ ಮುಂದುವರೆಯುತ್ತಿದೆ. ನಿರ್ಭಯಾ ಪ್ರಕರಣ ಬಳಿಕ ಕಾನೂನಿನಲ್ಲಿ ಹಲವು ಬದಲಾವಣೆ ಆಯ್ತು, ಮೈನರ್ ಹುಡುಗಿಯರಿಗೆ ಹಿಂಸೆ, ಕಿರುಕುಳ ಕೊಟ್ಟವರಿಗೆ ಗಲ್ಲು ಶಿಕ್ಷೆ ಆಗುತ್ತೆ. ಆದರೆ, ಕಾನೂನು ಕಾನೂನಾಗಿಯೇ ಉಳಿದುಕೊಳ್ಳುತ್ತಾ ಅಂತ ಅನಿಸುತ್ತಿದೆ. ಆಸಿಡ್ ದಾಳಿ ಮಾಡೋರಿಗೆ ಉಗ್ರ ಶಿಕ್ಷೆ ಆಗಬೇಕು. ಮೈನರ್ ರೇಪ್ ಕೇಸ್ ನಲ್ಲಿ ಗಲ್ಲು ಶಿಕ್ಷೆ ಆಗುತ್ತೆ, ಅದೇ ಥರ ಆಸಿಡ್ ಹಾಕುವವರಿಗೂ ಶಿಕ್ಷೆ ಆಗಬೇಕು ಎಂದು ಹೇಳಿದರು.
ಸಂತ್ರಸ್ತೆ ತಮ್ಮ ಆಸಿಡ್ ಎರಚಿದ್ದನ್ನು ಕಣ್ಣಾರೆ ನೋಡಿದಾನೆ. ಅವನ ಮನಸಿನ ಮೇಲೂ ಗುರುತರ ಪರಿಣಾಮ ಆಗಲಿದೆ, ಅವರಿಬ್ಬರೂ ಶಿಕ್ಷಣ ಎಲ್ಲಿ ಶಿಕ್ಷಣ ಮುಂದುವರೆಸಬೇಕು, ಯಾವ ಹಾಸ್ಟೆಲ್ ಬೇಕು ಅಂತ ಹೇಳ್ತಾರೋ ಅಲ್ಲಿ ಓದಿಸಲು ಸರ್ಕಾರ ಸಿದ್ಧವಿದೆ. ಬೇರೆ ಯಾರಿಗೂ ಆಸಿಡ್ ಹಾಕುವ ಧೈರ್ಯ ಆಗಬಾರದು, ಆ ತರ ಉಗ್ರ ಶಿಕ್ಷೆಯನ್ನು ಅಪರಾಧಿಗೆ ಕೊಡಬೇಕು ಎಂದು ಹೇಳಿದರು.

ಕಾಂಗ್ರೆಸ್ ನಿಂದ ಪೋಸ್ಟರ್ ಅಭಿಯಾನ ಕುರಿತು ಮಾತನಾಡಿದ ಅವರು, ಪ್ರಜಾತಂತ್ರದ ವ್ಯವಸ್ಥೆಗೆ ಕುಹಕ, ಅವಮಾನವನ್ನ ಕಾಂಗ್ರೆಸ್ ಮಾಡುತ್ತಿದೆ. ಕರ್ನಾಟಕ ಕಾಂಗ್ರೆಸ್‌ನವರು ತಮ್ಮ ಒಳ ಜಗಳ ಮುಚ್ಚಿ ಹಾಕಿಕೊಳ್ಳಲು ಈಥರ ನಾಟಕ ಆಡ್ತಿದಾರೆ, ಅವರ ನಾಟಕವನ್ನು ಜನ ನೋಡಿದಾರೆ. ಅವರು ಇದ್ದಾಗಲೇ ಅಭಿವೃದ್ಧಿ ಮಾಡಲಿಲ್ಲ ಯಾಕೆ? 2013 ರಲ್ಲಿ ಸರ್ಕಾರದಲ್ಲಿದ್ದವರೇ ಕಿವಿಗೆ ಹೂ ಮುಡ್ಕೊಂಡು ಬಂದಿದ್ರು. ಅವರ ಸರ್ಕಾರ ಇದ್ದಾಗ ಯಾರ ಕಿವಿಗೆ ಹೂ ಮುಡಿಸಿದ್ರು ಅಂತ ಹೇಳಲಿ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲೂ ಭಯ ಬಿದ್ದಿದ್ದಾರೆ, ಕರ್ನಾಟಕದಲ್ಲಿ ಐವತ್ತು ಅರವತ್ತು ವರ್ಷದಿಂದ ನಾಟಕ ಆಡ್ತಿದಾರೆ. ಜಾತಿ ಜಾತಿ, ಧರ್ಮ ಧರ್ಮ ಮಧ್ಯೆ ಒಡೆದಾಡುವ ನೀತಿ ತಂದರು, ಅವರಿಗೆ ಟಿಪ್ಪು ಜಯಂತಿ ಮಾಡಬೇಕು ಅಂತ ಅನಿಸ್ತು, ಒಡೆಯರ್ ಜಯಂತಿ ಆಚರಿಸಬೇಕು ಅಂತ ಅನಿಸ್ಲಿಲ್ಲ. ಇದಕ್ಕೆಲ್ಲ ಕಾಂಗ್ರೆಸ್‌ನವರು ಉತ್ತರ ಕೊಡಬೇಕಿದೆ ಎಂದರು.












Click it and Unblock the Notifications