• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ತು ಕೊಟ್ಯಂತರ ಹಣ-ಆಸ್ತಿ

By Manjunatha
|

ಬೆಂಗಳೂರು, ಮಾರ್ಚ್ 22: ಎಸಿಬಿ ತಂಡವು ಮಾರ್ಚ್‌ 20 ರಂದು ರಾಜ್ಯದ 6 ವಿವಿಧ ಸರ್ಕಾರಿ ನೌಕರರು ತಮ್ಮ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಮೇರೆಗೆ ನಡೆಸಿದ್ದ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿರುವ ಮೊತ್ತವನ್ನು ಎಸಿಬಿ ಹಂಚಿಕೊಂಡಿದೆ.

ಎಸಿಬಿಯು ಆರು ಸರ್ಕಾರಿ ನೌಕರರ ವಿರುದ್ಧ ಪ್ರಕರಣ ದಾಖಲಿಸಿ ಅವರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಅವರಿಗೆ ಸಂಬಂಧಿಸಿದ 24 ಸ್ಥಳಗಳ ಮೇಲೆ ದಾಳಿ ನಡೆಸಲಾಗಿರುತ್ತದೆ. ಶೋಧನಾ ಕಾರ್ಯವು ಇನ್ನೂ ಮುಂದುವರೆದಿದ್ದು ಈವರೆಗೆ ಶೋಧನೆ ನಡಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಪತ್ತೆಯಾದ ಆರೋಪಿತ ಸರ್ಕಾರಿ ನೌಕರರ ಚರ ಮತ್ತು ಸ್ಥಿರ ಆಸ್ತಿಗಳ ವಿವರ ಈ ಕೆಳಕಂಡಂತಿರುತ್ತವೆ.

ಎಸಿಬಿ ದಾಳಿ : ಸರ್ಕಾರಿ ನೌಕರರ ಬಳಿ ಸಿಕ್ಕದ್ದು ಕೋಟ್ಯಾಂತರ ಹಣ-ಆಸ್ತಿ

ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ.

ಒಂದು ಕೆಜಿ ಚಿನ್ನ, 48.59 ಲಕ್ಷ ನಗದು ವಶ

ಒಂದು ಕೆಜಿ ಚಿನ್ನ, 48.59 ಲಕ್ಷ ನಗದು ವಶ

ಗೋಪಾಲಕೃಷ್ಣ, ಜಂಟಿ ನಿರ್ದೇಶಕರು, ದಾವಣಗೆರೆ ಹರಿಹರ ನಗರ ನಗರಾಭಿವೃದ್ದಿ ಪ್ರಾಧಿಕಾರ, ಹೆಚ್ಚುವರಿ ಪ್ರಭಾರ ಆಯುಕ್ತರು ದಾವಣಗೆರೆ ನಗರ ಮಹಾನಗರ ಪಾಲಿಕೆ, ದಾವಣಗೆರೆ. ದಾವಣಗೆರೆಯಲ್ಲಿ 2 ವಾಸದ ಮನೆ, 3 ನಿವೇಶನ, ವಿವಿಧ ಸರ್ವೆ ನಂಬರ್ ಗಳಲ್ಲಿ ಒಟ್ಟು 3 ಎಕರೆ 11 ಗುಂಟೆ ಜಮೀನು, ಚಿನ್ನ 1 ಕೆ.ಜಿ, ಬೆಳ್ಳಿ 760 ಗ್ರಾಂ, 1 ಸ್ವಿಫ್ಟ್ಟ್ ಕಾರ್ ಹಾಗೂ 2 ದ್ವಿಚಕ್ರ ವಾಹನಗಳು ಮತ್ತು ಸುಮಾರು? 48.59 ಲಕ್ಷ ಬ್ಯಾಂಕ್ ಠೇವಣಿ ಪತ್ತೆಯಾಗಿರುತ್ತದೆ.

2 ಮನೆ, 24 ನಿವೇಶನ, 10 ಎಕರೆ ಜಮೀನು!

2 ಮನೆ, 24 ನಿವೇಶನ, 10 ಎಕರೆ ಜಮೀನು!

ತಿಪ್ಪೇಸ್ವಾಮಿ ಸಹಾಯಕ ಆಯುಕ್ತರು, ತುಮಕೂರು ಉಪ ವಿಭಾಗ, ತುಮಕೂರು ಜಿಲ್ಲೆ. ಚಿತ್ರದುರ್ಗದಲ್ಲಿ 2 ವಾಸದ ಮನೆ, 24 ನಿವೇಶನಗಳು, ವಿವಿಧ ಸರ್ವೆ ನಂಬರ್‌ಗಳಲ್ಲಿ 10 ಎಕರೆ 20 ಗುಂಟೆ ಜಮೀನು, ಬೆಂಗಳೂರಿನಲ್ಲಿ 1 ಫ್ಲಾಟ್, ಚಿನ್ನ 495 ಗ್ರಾಂ, ಬೆಳ್ಳಿ 1 ಕೆಜಿ 914 ಗ್ರಾಂ, 1 ಇನ್ನೋವಾ ಕಾರ್, 1 ಸ್ವಿಫ್ಟ್ಟ್ ಡಿಸೈರ್ ಕಾರ್ ಹಾಗೂ 1 ಸ್ವಿಫ್ಟ್ ಕಾರ್, 2 ದ್ವಿಚಕ್ರ ವಾಹನಗಳು, ನಗದು ? 17.33 ಲಕ್ಷ ಮತ್ತು ಸುಮಾರು ? 11.82 ಲಕ್ಷ ಗೃಹ ಬಳಕೆ ವಸ್ತುಗಳು ಕಂಡುಬಂದಿರುತ್ತದೆ.

ಈತನ ಹೆಸರಲ್ಲಿದೆ 11 ಫ್ಲಾಟ್‌, 1 ಐಶಾರಾಮಿ ಮನೆ

ಈತನ ಹೆಸರಲ್ಲಿದೆ 11 ಫ್ಲಾಟ್‌, 1 ಐಶಾರಾಮಿ ಮನೆ

ವಿಜಯಕುಮಾರ್ ಮಾ ಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಾರಾಂಜ ಕಾಲುವೆ ಯೋಜನೆ ಉಪ ವಿಭಾಗ ಸಂಖ್ಯೆ-೦4, ಭಾಲ್ಕಿ ಕ್ಯಾಂಪ್ ಹುಮ್ನಾಬಾದ್ ಬೀದರ್ ಜಿಲ್ಲೆ, ಕಲಬುರ್ಗಿ 1 ಮನೆ, 2 ಫ್ಲಾಟ್, ಮುಚಾಳಾಂಬದಲ್ಲಿ 1 ಮನೆ, 2 ಫ್ಲಾಟ್, ಬೀದರ್‌ನಲ್ಲಿನ 3 ಫ್ಲಾಟ್, ಬಸವಕಲ್ಯಾಣದಲ್ಲಿ 2 ಫ್ಲಾಟ್, ಮುಂಬಯಿಯಲ್ಲಿ 1 ಫ್ಲಾಟ್, 1 ಮಹಿಂದ್ರಾ ಬೋಲೆರೋ ಜೀಪ್, 2 ದ್ವಿಚಕ್ರ ವಾಹನ, ಚಿನ್ನ 4 ಕೆಜಿ 99 ಗ್ರಾಂ, ಬೆಳ್ಳಿ 9 ಕೆಜಿ 492 ಗ್ರಾಂ, ಠೇವಣಿ ? 44.74 ಲಕ್ಷ, ನಗದು ? 47.02 ಲಕ್ಷ, ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ? 8 ಲಕ್ಷ ಮತ್ತು ಸುಮಾರು ? 27.99 ಲಕ್ಷ ಗೃಹ ಬಳಕೆ ವಸ್ತುಗಳು ಕಂಡುಬಂದಿರುತ್ತದೆ.

1 ಮನೆ, 3 ಫ್ಲಾಟ್, 3 ವಾಹನ

1 ಮನೆ, 3 ಫ್ಲಾಟ್, 3 ವಾಹನ

ಕಿರಣ್ ಸುಬ್ಬಾರಾವ್ ಭಟ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಬೆಳಗಾವಿ ಮಹಾನಗರ ಪಾಲಿಕೆ, ಹಾಲಿ ಕರ್ತವ್ಯ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ, ಬೆಳಗಾವಿ. ಬೆಳಗಾವಿಯಲ್ಲಿ 1 ವಾಸದ ಮನೆ, 1 ಫ್ಲಾಟ್, ಬೆಂಗಳೂರಿನಲ್ಲಿ 2 ಫ್ಲಾಟ್, 1 ಹೋಂಡಾ ಝಾಜ್ ಕಾರ್, 2 ದ್ವಿಚಕ್ರ ವಾಹನಗಳು, ಚಿನ್ನ 1 ಕೆಜಿ 261 ಗ್ರಾಂ, ಬೆಳ್ಳಿ 5 ಕೆಜಿ 826 ಗ್ರಾಂ, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿಗಳು ? 37.11 ಲಕ್ಷ ಮತ್ತು ಸುಮಾರು ? 10 ಲಕ್ಷ ಗೃಹ ಬಳಕೆ ವಸ್ತುಗಳು ಕಂಡುಬಂದಿರುತ್ತದೆ.

10 ಸೈಟು, 45 ಎಕರೆ ಜಮೀನು, 1 ಮನೆ

10 ಸೈಟು, 45 ಎಕರೆ ಜಮೀನು, 1 ಮನೆ

ಶ್ರೀಪತಿ ದೊಡ್ಡಲಿಂಗಣ್ಣನವರ್, ಉಪ ಮುಖ್ಯ ಭದ್ರತೆ ಮತ್ತು ಜಾಗೃತಾಧಿಕಾರಿ, ಎನ್‌ಇ ಕೆಆರ್‌ಟಿಸಿ, ಕಲಬುರ್ಗಿ. ಧಾರವಾಡದಲ್ಲಿ 1 ವಾಸದ ಮನೆ, 2 ನಿವೇಶನಗಳು, ಡಿ.ಎನ್ ಕೊಪ್ಪದಲ್ಲಿ 3 ನಿವೇಶನಗಳು, ಹಾವೇರಿಯಲ್ಲಿ 5 ನಿವೇಶನಗಳು, ಕಲ್ಲಘಟಗಿಯಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 6 ಎಕರೆ 34 ಗುಂಟೆ ಕೃಷಿ ಜಮೀನು, ಹಿರೇಕೆರೂರುನಲ್ಲಿ 5 ಎಕರೆ 24 ಗುಂಟೆ ಜಮೀನು ಕಲ್ಲಘಟಗಿಯಲ್ಲಿ 2 ಎಕರೆ ಮತ್ತು ಬೆಳಗಾವಿಯಲ್ಲಿ 32.17 ಎಕರೆ ಕೃಷಿ ಜಮೀನಿಗೆ ಖರೀದಿಸುವ ಸಂಬಂಧ ಮುಂಗಡ ಹಣ ನೀಡಿರುತ್ತಾರೆ, 1 ಮಾರುತಿ 800 ಕಾರ್ ಚಿನ್ನ 136 ಗ್ರಾಂ, ಬೆಳ್ಳಿ 2 ಕೆಜಿ 146 ಗ್ರಾಂ, ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳಲ್ಲಿ ಹಾಗೂ ಠೇವಣೆಗಳು ? 12.47 ಲಕ್ಷ ಪತ್ತೆಯಾಗಿರುತ್ತದೆ.

1 ಐಶಾರಾಮಿ ಮನೆ, ವಿವಿಧ ಕಡೆ ಜಮೀನು

1 ಐಶಾರಾಮಿ ಮನೆ, ವಿವಿಧ ಕಡೆ ಜಮೀನು

ಕೀರ್ತಿ ಜೈನ್, ಕಂದಾಯ ನಿರೀಕ್ಷಕರು, ಕಳಸಾ ಹೋಬಳಿ, ಪ್ರಭಾರ ಉಪ ತಹಶೀಲ್ದಾರ್ ಕಳಸ, ಚಿಕ್ಕಮಗಳೂರು ಜಿಲ್ಲೆ. ಕಳಸಾದಲ್ಲಿ 1 ವಾಸದ ಮನೆ, ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 9 ಎಕರೆ 34 ಗುಂಟೆ ಜಮೀನು, ಸಂಸೆ ಗ್ರಾಮದಲ್ಲಿ ಒಟ್ಟು ೦.೦8 ಗುಂಟೆ ಜಮೀನು ಮತ್ತು ಮಳವಂತಿಗೆ ಗ್ರಾಮದಲ್ಲಿ 1.59 ಸೆಂಟ್ ಕೃಷ್ಟಿ ಜಮೀನು, ಚಿನ್ನ 200 ಗ್ರಾಂ, ಬೆಳ್ಳಿ 750 ಗ್ರಾಂ, 1 ಸ್ವಿಫ್ಟ್ಟ್ ಡಿಸೈರ್ ಕಾರ್ ಹಾಗೂ 1 ಮಾರುತಿ 800 ಕಾರ್ ಪತ್ತೆಯಾಗಿರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ACB raids on 6 government officers on march 20. ACB found crores of money, land, gold, vehicle, investments and etc. ACB registered cases on them and continued the investigation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more