ರಾಮನಗರದಲ್ಲಿ ಎಸಿಬಿ ದಾಳಿ, ಇಬ್ಬರು ಬಲೆಗೆ
ರಾಮನಗರ, ಅಕ್ಟೋಬರ್ 17 : ರಾಮನಗರದ ಸಹಕಾರಿ ಸಂಘಗಳ ಹಾಗೂ ಲೇವಾದೇವಿಗಾರರ ಸಹಾಯಕ ನಿಬಂಧಕರ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು (ಎಸಿಬಿ) ಮಂಗಳವಾರ ದಾಳಿ ಮಾಡಿದ್ದಾರೆ.
ರಾಮನಗರದ ತಾಲೂಕು ಕಚೇರಿ ಹಿಂಭಾಗದ ಸ್ಪೂರ್ತಿ ಭವನದಲ್ಲಿರುವ ಕಚೇರಿಯಲ್ಲಿ ಸಹಾಯಕ ನಿಬಂಧಕ ರವಿ ಮತ್ತು ಮೋಹನ್ ಕುಮಾರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೃಷ್ಣಮೂರ್ತಿ ಎನ್ನುವರ ಬಳಿ ಸಂಘದ ಲೈಸೆನ್ಸ್ ನವೀಕರಣಕ್ಕೆ 5000 ಲಂಚ ಸ್ವೀಕರಿಸುತ್ತಿದ್ದ ವೇಳೆ ರಾಮನಗರ ಎಸಿಬಿ ಇನ್ಸ್ ಪೆಕ್ಟರ್ ಗೌತಮ್ ನೇತೃತ್ವದ ತಂಡ ದಾಳಿ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications