Aadhar Card Big Update: ಆಧಾರ್ ಕಾರ್ಡ್ ತಿದ್ದುಪಡಿಗೆ ಗಡುವು ಮುಕ್ತಾಯ ಸಮೀಪ, ತಪ್ಪಿದರೆ ಶುಲ್ಕವೆಷ್ಟು ?
ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಮಹತ್ವದ ಅಪ್‌ಡೇಟ್ಸ್‌ವೊಂದು ಬಂದಿದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಯಾವುದಾದರೂ ಬದಲಾವಣೆ ಮಾಡಿಕೊಳ್ಳಬೇಕೆಂದರೆ ಇರುವ ಗಡುವು ಮುಕ್ತಾಯವಾಗುತ್ತಿದ್ದು, ಇದಕ್ಕೆ ಇಂದು ಮಾತ್ರ ಅವಕಾಶವಿದೆ. ಇಂದಿನ ಒಳಗಾಗಿ ನೀವು ಆಧಾರ್ ಕಾರ್ಡ್‌ನಲ್ಲಿ ಜನ್ಮದಿನಾಂಕ, ವಿಳಾಸ ಹಾಗೂ ಹೆಸರು ಸೇರಿದಂತೆ ಪ್ರಮುಖ ತಿದ್ದುಪಡಿಗಳನ್ನು ಮಾಡಿಕೊಳ್ಳದೆ ಇದ್ದರೆ ಉಚಿತವಾಗಿ ತಿದ್ದುಪಡಿ ಮಾಡಿಕೊಳ್ಳುವ ಅವಕಾಶ ಮುಕ್ತಾಯವಾಗಲಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಕೊಟ್ಟಿರುವ ಗಡುವು ಮುಗಿಯಲಿದೆ. ಇದಾದ ಮೇಲೆ ನೀವು ಶುಲ್ಕ ಪಾವತಿ ಮಾಡಿ ತಿದ್ದುಪಡಿ ಅಥವಾ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಡಿಸೆಂಬರ್ 14 ಕೊನೆಯ ದಿನವಾಗಿದೆ.
ಆಧಾರ್ ಕಾರ್ಡ್‌ನಲ್ಲಿ ಇರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರವು ಈಗಾಗಲೇ ಹಲವು ಬಾರಿ ಗಡುವು ನೀಡಲಾಗಿತ್ತು. ಈಗಾಗಲೇ ಕಳೆದ ಒಂದು ವರ್ಷದಿಂದಲೂ ಆಧಾರ್ ಕಾರ್ಡ್‌ನ ತಿದ್ದುಪಡಿಗೆ ಸಂಬಂಧಿಸಿದಂತೆ ಇರುವ ಸಮಯವನ್ನು ವಿಸ್ತರಿಸಿಕೊಂಡೇ ಬರಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದಂತೆ ಕೊಟ್ಟಿರುವ ಗಡುವು ಮುಕ್ತಾಯವಾಗುತ್ತಿದ್ದು, ನಾಳೆಯ ಒಳಗಾಗಿ ನೀವು ಇದನ್ನು ಸರಿಪಡಿಸಿಕೊಳ್ಳದೆ ಇದ್ದರೆ ದಂಡ ಪಾವತಿ ಮಾಡಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬೇಕಾಗುತ್ತದೆ.

UIDAI ನೀಡಿರುವ ಗಡುವು ನಾಳೆಯೇ ಮುಕ್ತಾಯವಾಗಲಿದ್ದು, ಇದಾದ ಮೇಲೆ ನೀವು ತಿದ್ದುಪಡಿ ಮಾಡಿಸಿಕೊಳ್ಳಬೇಕಾದರೆ 50 ರೂಪಾಯಿ ದಂಡ (ಸೇವಾ ಶುಲ್ಕ) ಪಾವತಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಪ್ರಮುಖ ದಾಖಲೆಯಾಗಿದೆ. ಪ್ರಮುಖ ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಇನ್ನು ಆಧಾರ್ ಕಾರ್ಡ್‌ಗೆ ಸಂಬಂಧಸಿದ ಯಾವುದೇ ತಿದ್ದುಪಡಿಯನ್ನಾದರೂ ನೀವು ಮೊಬೈಲ್‌ನಲ್ಲೇ ಮಾಡಿಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ತಿದ್ದುಪಡಿಗಳನ್ನಾದರೂ, ನಾಳೆಯ ಒಳಗೆ ಅಂದರೆ, ಡಿಸೆಂಬರ್ 14ರ ಒಳಗಾಗಿ ಮಾಡಿಸಿಕೊಳ್ಳಬೇಕಾಗಿದೆ. ಆಧಾರ್ ತಿದ್ದುಪಡಿಯನ್ನು ಆಧಾರ್‌ನ ಅಧಿಕೃತ ವೆಬ್‌ಸೈಟ್ ಇಲ್ಲ MyAadhaar ಪೋರ್ಟಲ್‌ನಲ್ಲಿ ಫ್ರೀಯಾಗಿ ನವೀಕರಣ ಮಾಡಿಕೊಳ್ಳಲು ಅವಕಾಶ ಇರಲಿದೆ. ಆದರೆ, ಇದಾದ ಮೇಲೆ ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಳ್ಳಬೇಕಾದರೆ ನೀವು ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ಸ್ ಮಾಡಿಕೊಳ್ಳುವ ಸರಳ ವಿಧಾನ ಇಲ್ಲಿದೆ
ಆಧರ್ ಕರೆಕ್ಷನ್ ಮಾಡುವುದು ಹೇಗೆ: ನೀವು ಮನೆಯಲ್ಲೇ ಕುಳಿತು ನಿಮ್ಮ ಆಧಾರ್ ಕಾರ್ಡ್‌ಗಳನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಸರಳ ವಿಧಾನಗಳಲ್ಲಿ ನೀವು ಆಧಾರ್ ಅಪ್ಡೇಟ್ಸ್ ಮಾಡಿಕೊಳ್ಳುವುದಕ್ಕೆ ಅವಕಾಶ ಇರಲಿದೆ.
ಆಧಾರ್ ಕಾರ್ಡ್ ಅಧಿಕೃತ ವೆಬ್‌ಸೈಟ್ UIDAI myaadhaar.uidai.gov.inಗೆ ಮೊದಲು ಭೇಟಿ ನೀಡಬೇಕು
ನಂತರ ಆಧಾರ್ ಕಾರ್ಡ್‌ನ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಮಾಡಬೇಕು. ನೀವು ಆಧಾರ್ ಕಾರ್ಡ್‌ನೊಂದಿಗೆ ಜೋಡಿಸಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
ಇದಾದ ಮೇಲೆ ಆಧಾರ್ ಅಪ್ಡೇಟ್ಸ್ ಎನ್ನುವ ಆಯ್ಕೆಯನ್ನು ಒತ್ತಿ.
ಮುಂದುವರಿದು ಆಧಾರ್ ಕಾರ್ಡ್‌ನಲ್ಲಿ ಯಾವ ತಿದ್ದುಪಡಿ ಮಾಡಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.
ತಿದ್ದುಪಡಿ ಮಾಡಬೇಕಿರುವ ಮಾಹಿತಿಯನ್ನು ಸೇರಿಸಿ
ತಿದ್ದುಪಡಿ ಯಾವ ವಿಷಯದ ಬಗ್ಗೆ ಇದೆ ಎನ್ನುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಲ್ಲಿ ಅಪ್‌ಲೋಡ್ ಮಾಡಿ
ಕೊನೆಯದಾಗಿ ನೀವು ನಮೂದಿಸಿರುವ ಎಲ್ಲಾ ದಾಖಲೆಗಳು ಸರಿ ಇದೆಯೇ ಎಂದು ನೋಡಿಕೊಳ್ಳಿ. ಅಂತಿಮವಾಗಿ ಚೆಕ್‌ಬಾಕ್ಸ್ ಎಂದು ತೋರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈ ಪ್ರಕ್ರಿಯೆಗಳು ಮುಕ್ತಾಯವಾದ ಮೇಲೆ ನಿಮಗೆ 14 ಸಂಖ್ಯೆಗಳ ಸ್ಲಿಪ್ ಸಿಗಲಿದೆ.












Click it and Unblock the Notifications