Belagavi: ಜೀವಂತ ಹುಲಿಯೊಂದಿಗೆ ಪ್ರಚಾರ ಮಾಡಿ ಹೆಸರಾದ ಗಟ್ಟಿಗಿತ್ತಿ
ಬೆಂಗಾವಿ ಏಪ್ರಿಲ್ 21: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಮುಗಿದಿದ್ದು ಈಗೇನಿದ್ರು ಪ್ರಚಾರದ ಭರಾಟೆ ಶುರುವಾಗಿದೆ. ಬೆಳಗಾವಿ ಜಿಲ್ಲೆಯಲ್ಲೂ ಚುನಾವಣೆ ರಂಗೇರುತ್ತಿದೆ. ಚುನಾವಣೆಯ ವಿಚಾರದಲ್ಲಿ ಬೆಳಗಾವಿ ಅಂದ ಕೂಡಲೇ ಮೊದಲು ನೆನಪಾಗೋದು ಆ ಒಬ್ಬ ಮಹಿಳೆ. ಅವರೇ ಪ್ರತಿಭಾ ವಸಂತರಾವ್ ಪಾಟೀಲ್.
1989 ರಲ್ಲಿ ಬೆಳಗಾವಿ ಜಿಲ್ಲೆಯ ಅರಬಾವಿಯಲ್ಲಿ ಪ್ರತಿಭಾ ವಸಂತರಾವ್ ಪಾಟೀಲ್ ಅವರು ನಡೆಸಿದ ಪ್ರಚಾರ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವಾದದ್ದು. ಯಾಕೆಂದರೆ ಚುನಾವಣೆಯಲ್ಲಿ ಹುಲಿ ಚಿಹ್ನೆಯನ್ನು ಪಡೆದುಕೊಂಡಿದ್ದ ಸ್ವತಂತ್ರ ಅಭ್ಯರ್ಥಿ ಪ್ರತಿಭಾ ವಸಂತರಾವ್ ಪಾಟೀಲ್ ತಮ್ಮ ಪ್ರಚಾರಕ್ಕೆ ಜೀವಂತ ಹುಲಿಯನ್ನು ತಂದು ಎರಡು ವಾರಗಳ ಕಾಲ ಇಟ್ಟುಕೊಂಡಿದ್ದರು. ಮಾತ್ರವಲ್ಲದೆ ಇದನ್ನು ಪ್ರಚಾರಕ್ಕೂ ಕರೆದುಕೊಂಡು ಹೋಗಿ ಈಗಲೂ ಜನಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.

ದಿ. ವಸಂತರಾವ್ ಪಾಟೀಲ್ ಅವರ ಪುತ್ರಿ ದಿ. ಪ್ರತಿಭಾ ಪಾಟೀಲ್ ಅರಬಾವಿ ಕ್ಷೇತ್ರದಿಂದ 1989ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಪ್ರಚಾರದ ಸಂದರ್ಭದಲ್ಲಿ ಇವರು ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದ್ದರು.
ಕಾಂಗ್ರೆಸ್ನಲ್ಲಿದ್ದ ದಿ. ವಸಂತರಾವ್ ಪಾಟೀಲ್ 1967, 1972ರಲ್ಲಿ ರಾಯಬಾಗ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದಿದ್ದರು. ಸಚಿವರಾಗಿಯೂ ಕೆಲಸ ಮಾಡಿ, ಜಿಲ್ಲೆಯಲ್ಲಿ ಪ್ರಬಲ ಹಿಡಿತವನ್ನು ಹೊಂದಿದ್ದರು. ಬಳಿಕ ಕುಟುಂಬವನ್ನು ರಾಜಕೀಯದಲ್ಲಿ ಕಟ್ಟಿಹಾಕಲು ರಾಯಬಾಗ ಕ್ಷೇತ್ರವನ್ನು ಮೀಸಲು ಎಂದು ಘೋಷಣೆ ಮಾಡಲಾಯಿತು.
ದಿ. ವಸಂತರಾವ್ ಪಾಟೀಲ್ ಪುತ್ರಿ ದಿ. ಪ್ರತಿಭಾ ಪಾಟೀಲ್ ಅರಭಾವಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಮುಂದಾಗಿದ್ದರು. ಮೂರು ಸಲ ಅರಬಾವಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋತರು. ಆದರೂ 1989ರಲ್ಲಿ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದರು.

ಚುನಾವಣೆಯಲ್ಲಿ ಹುಲಿ ಚಿಹ್ನೆಯನ್ನು ಪಡೆದುಕೊಂಡಿದ್ದ ಪ್ರತಿಭಾ ಪ್ರಚಾರಕ್ಕಾಗಿ ನಿಜವಾದ ಹುಲಿಯನ್ನು ತಂದು ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದ ಗಟ್ಟಿಗಿತ್ತಿ. ದೆಹಲಿಯ ಸರ್ಕಸ್ ಕಂಪನಿಯಿಂದ ಬಾಡಿಗೆ ಆಧಾರದ ಮೇಲೆ ಹುಲಿಯನ್ನು ತಂದಿದ್ದರು. ಜೊತೆಗೆ ಅದನ್ನು ಬೋನ್ನೊಳಗೆ ಇರಿಸಿ ಅದನ್ನು ತೆಗೆದುಕೊಂಡು ಪ್ರಚಾರ ಕೂಡ ಮಾಡಿದ್ದರು. ಕ್ಷೇತ್ರದಲ್ಲಿ ಇದು ದೊಡ್ಡ ಸಂಚಲನ ಮೂಡಿಸಿತ್ತು. ಮಾತ್ರವಲ್ಲದೆ ರಾಯಬಾಗ ಅಭಿಯಾನದ ಮೇಲುಸ್ತುವಾರಿ ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳಿಗೆ ಇದು ದುಸ್ವಪ್ನವಾಗಿತ್ತು.
ಚುನಾವಣೆ ಕಚೇರಿಗೂ ಹುಲಿಯ ಜೊತೆಗೆ ಪ್ರತಿಭಾ ಪಾಟೀಲ್ ಬಂದಿದ್ದು ಮತ್ತೊಂದು ವಿಶೇಷ. ಇದನ್ನು ನೋಡಿದ ಅಧಿಕಾರಿಗಳು ಗಾಬರಿಯಾಗಿದ್ದರು. ಪ್ರತಿಸ್ಪರ್ಧಿಗಳು ಹುಲಿಯನ್ನು ಬ್ಯಾನ್ ಮಾಡುವಂತೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಬಳಿಕ ಹುಲಿಯೊಂದಿಗೆ ಪ್ರಚಾರವನ್ನು ಬ್ಯಾನ್ ಮಾಡಲಾಯಿತು.
ಅಲ್ಲಿಂದ ಜೀವಂತ ಪ್ರಾಣಿಗಳ ಜೊತೆಗೆ ಚುನಾವಣೆ ಪ್ರಚಾರವನ್ನು ದೇಶದಲ್ಲಿ ನಿಷೇಧಿಸಲಾಯಿತು. ಈ ಚುನಾವಣೆಯಲ್ಲಿ ಅಪಾರ ಜನಸ್ತೋಮವನ್ನು ಸೆಳೆದರೂ ಎಂ.ಎಸ್.ಪಾಟೀಲರಿಗೆ ಅಷ್ಟೊಂದು ಮತಗಳು ಬರಲಿಲ್ಲ. ಅದಾಗ್ಯೂ ಅರಬಾವಿ ಚುನಾವಣೆಯಲ್ಲಿ ದಿ. ಪ್ರತಿಭಾ ಪಾಟೀಲ್ ಸೋತರು.
ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಅಮರಸಿಂಹ ಪಾಟೀಲ್ಗೆ ಟಿಕೆಟ್ ಕೊಡಲಿಲ್ಲ ಎಂದು ದಿ. ವಸಂತರಾವ್ ಪಾಟೀಲ್ ಸಿಟ್ಟಾಗಿದ್ದರು. ಅದೇ ಸಂದರ್ಭದಲ್ಲಿ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಬಾಗಲಕೋಟೆಯಿಂದ ಸರ್ಧೆ ಮಾಡಿದ್ದು ಅವರನ್ನು ಸೋಲಿಸಲು ವಿಎಲ್ ಪಾಟೀಲ್ ದೊಡ್ಡ ಪ್ರಯತ್ನ ಮಾಡಿ ಕೊನೆಗೆ ಯಶಸ್ವಿಯಾಗಿದ್ದರು.












Click it and Unblock the Notifications