ಪತ್ನಿ ನೀಡುತ್ತಿದ್ದ ಮಾನಸಿಕ ಹಿಂಸೆ ತಾಳಲಾರದೆ ಯೋಧ ಆತ್ಮಹತ್ಯೆ

ಚಿಕ್ಕಮಗಳೂರು,ಫೆಬ್ರವರಿ,02: ಪತ್ನಿ ಕೊಡುತ್ತಿದ್ದ ಮಾನಸಿಕ ಕಿರುಕುಳ ಸಹಿಸಿಕೊಳ್ಳಲಾಗದ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಕೋಟೆ ಬಡಾವಣೆ ನಿವಾಸಿ ಸಿ.ಟಿ ಪ್ರದೀಪ್ (26) ಆತ್ಮಹತ್ಯೆ ಮಾಡಿಕೊಂಡ ಯೋಧ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಮದ್ರಾಸ್ ರೆಜಿಮೆಂಟ್ ನಲ್ಲಿದ್ದರು. ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.[ಕಲಬುರ್ಗಿಯ ಯೋಧನೊಂದಿಗೇ ಬೂದಿಯಾದ ಸಾವಿನ ರಹಸ್ಯ]

A soldier commits suicide in Chikkamagaluru

ಪ್ರದೀಪ್ ಕೆಲವು ದಿನಗಳ ರಜೆ ಮೇಲೆ ಚಿಕ್ಕಮಗಳೂರಿನಲ್ಲಿರುವ ತನ್ನ ಮನೆಗೆ ಬಂದಿದ್ದಾರೆ. ಆಗ ಪತ್ನಿ ವಿದ್ಯಾ ಅವರು ಪ್ರದೀಪ್ ಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಬಹಳಷ್ಟು ನೊಂದ ಪ್ರದೀಪ್ ಸೋಮವಾರ ರಾತ್ರಿ ಡೆತ್ ನೋಟ್ ಬರೆದು ವಿಷ ಸೇವಿಸಿದ್ದಾರೆ. ತಕ್ಷಣ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.[ಯೋಧರ ಸ್ಮರಣಾರ್ಥ ರಾಷ್ಟ್ರೀಯ ಸ್ಮಾರಕ, ಮ್ಯೂಸಿಯಂ]

ಡೆತ್ ನೋಟ್ ಯೋಧ ಏನೆಂದು ಬರೆದಿದ್ದರು?

ಆತ್ಮಹತ್ಯೆ ಮಾಡಿಕೊಳ್ಳುವ ಡೆತ್ ನೋಟ್ ಬರೆದಿಟ್ಟ ಪ್ರದೀಪ್ ನನ್ನ ಸಾವಿಗೆ ನನ್ನ ಹೆಂಡತಿ ವಿದ್ಯಾ ಹಾಗೂ ಮಾವನವರೇ ಕಾರಣ ಎಂದು ಬರೆದಿಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಪತ್ನಿ ವಿದ್ಯಾಳನ್ನು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+