Bengaluru-Mysuru Expressway ಸೇರಿದಂತೆ 6 ಹೆದ್ದಾರಿಗಳಲ್ಲಿ ಎ.ಐ ಕ್ಯಾಮೆರಾ ಕಣ್ಗಾವಲು
ಬೆಂಗಳೂರು, ಅಕ್ಟೋಬರ್, 04: ಇತ್ತೀಚಿನ ದಿನಗಳಲ್ಲಿ ಹೆದ್ದಾರಿಗಳಲ್ಲೇ ಹೆಚ್ಚಾಗಿ ಅಪಘಾತಗಳಿ ನಡೆಯುತ್ತಿವೆ. ಆದ್ದರಿಂದ ಈ ಅಪಘಾತಗಳನ್ನು ನಿಯಂತ್ರಿಸಲು ಸಾರಿಗೆ ಇಲಾಖೆ ಪ್ಲಾನ್ ಒಂದನ್ನು ಮಾಡಿದೆ. ವಾಹನಗಳ ಅತಿ ವೇಗ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಗಾವಲು ಇಡಲು ರಾಜ್ಯದ ಪ್ರಮುಖ 6 ಹೆದ್ದಾರಿಗಳಲ್ಲಿ ಎ.ಐ.ಕ್ಯಾಮೆರಾ ಅಳವಡಿಕೆ ಮಾಡಲಿ ನಿರ್ಧಾರ ಮಾಡಿದೆ.
ಅಕ್ಟೋಬರ್ ಅಂತ್ಯದ ವೇಳೆಗೆ ಈ 6 ಹೆದ್ದಾರಿಗಳಲ್ಲಿ ಎ.ಐ ಕ್ಯಾಮೆರಾ ಅವಳಡಿಕೆಯ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಸಂಚಾರ ನಿಯಮ ಉಲ್ಲಂಘಿಸಿದ್ದರೆ ವಾಹನದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.

6 ಹೆದ್ದಾರಿಗಳಲ್ಲಿ ಎ.ಐ ಕ್ಯಾಮೆರಾ ಅವಳಡಿಕೆ
1. ಬೆಂಗಳೂರು-ಮೈಸೂರು ಹೆದ್ದಾರಿ,
2. ರಾಷ್ಟ್ರೀಯ ಹೆದ್ದಾರಿ 4ರ ಪಾರ್ಲೆ-ಜಿ ಕಾರ್ಖಾನೆ ಬಳಿ
3. ತುಮಕೂರಿನ ಕ್ಯಾತ್ಸಂದ್ರದ ಬಳಿ
4. ರಾಷ್ಟ್ರೀಯ ಹೆದ್ದಾರಿ 7ರ ದೇವನಹಳ್ಳಿ ಟೋಲ್‌ಗೇಟ್
5. ಹೊಸೂರು ರಸ್ತೆಯ ಅತ್ತಿಬೆಲೆ
6. ರಾಷ್ಟ್ರೀಯ ಹೆದ್ದಾರಿ 73ರ ಹಿಟ್ನಾಳ ಟೋಲ್‌ಗೇಟ್ ಬಳಿ ಎ.ಐ ಕ್ಯಾಮೆರಾ ಅಳವಡಿಸಲು ಇಲಾಖೆ ನಿರ್ಧಾರ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾಹನಗಳ ಅತಿಯಾದ ವೇಗದಿಂದ ಸಾವು ಸಂಭವಿಸಲಿಕ್ಕೆ ಕಾರಣ ಎನ್ನುವುದು ಕೂಡ ವರದಿಯಾಗುತ್ತಿದೆ. ಆದ್ದರಿಂದ ವಾಹನಗಳ ವೇಗ ತಗ್ಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಅದರಲ್ಲೂ ವಾಹನ ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತಗಳ ಪ್ರಕರಣ ಹೆಚ್ಚಿರುವ ಹೆದ್ದಾರಿಗಳಲ್ಲಿ ಎಐ ಕ್ಯಾಮೆರಾವನ್ನು ಅಳವಡಿಕೆಗೆ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಎ.ಐ.ಕ್ಯಾಮೆರಾ ಅಳವಡಿಕೆ ಕಾರ್ಯ ಆರಂಭ ಆಗಿದ್ದು, ಇದರಿಂದ ಅಪಘಾತಗಳ ಪ್ರಮಾಣ ತ್ಗ್ಇದರೆ, ರಾಜ್ಯಾದ್ಯಂತ ಅಪಘಾತ ವಲಯಗಳಲ್ಲಿ ಕ್ಯಾಮೆರಾ ಅಳವಡಿಸುವ ಆಲೋಚನೆಯಲ್ಲಿ ಸಾರಿಗೆ ಇಲಾಖೆ ಇದೆ.
ವಾಹನಗಳ ವೇಗದ ವಿವರದ ಪ್ರದರ್ಶನಕ್ಕೆ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನ ವ್ಯವಸ್ಥೆ ಮಾಡಲಾಗುವುದು. ಈ ಕ್ಯಾಮೆರಾಗಳು ವಾಹನಗಳ ವೇಗ, ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದೃಶ್ಯಾವಳಿಯನ್ನು ಸೆರೆ ಹಿಡಿಯಲಿವೆ. 200 ಮೀಟರ್ ದೂರದವರೆಗಿರುವ ದೃಶ್ಯವೂ ಈ ಕ್ಯಾಮೆರಾಗಳಲ್ಲಿ ಸೆರೆ ಆಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಎ.ಐ. ಕ್ಯಾಮೆರಾಗಳನ್ನು ಸಾರಿಗೆ ಇಲಾಖೆಯ ವೆಬ್ ಆಧಾರಿತ ಸಾರಥಿ-4 ಮತ್ತು ವಾಹನ್-4 ತಂತ್ರಾಂಶದ ಜೊತೆ ಜೋಡಣೆ ಮಾಡಲಾಗುವುದು. ನಿಯಮ ಉಲ್ಲಂಘನೆ ಆಗಿದ್ದರೆ ವಾಹನದ ನೋಂದಣಿ ಸಂಖ್ಯೆ ಕ್ಯಾಮೆರಾದಲ್ಲಿ ಸೆರೆ ಆಗಲಿದೆ. ಇಲಾಖೆ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಒಟ್ಟಿನಲ್ಲಿ ಈ ಒಂದು ಯೋಜನೆಯು ಫಲ ನೀಡಿದರೆ ಅಪಘಾತಗಳ ಸಂಖ್ಯೆಯೂ ಕಡಿಮೆಯಾದಂತಾಗುತ್ತದೆ. ಹಾಗೆಯೇ ಇನ್ನುಳಿದ ಕಡೆಯು ಈ ಮಾದರಿಯನ್ನು ಅನುಸರಿಸಲು ನೆರವಾದಂತಾಗುತ್ತದೆ.












Click it and Unblock the Notifications