84,000 ಕರ್ನಾಟಕದ ಈ ಸಿಟಿಯಲ್ಲಿದೆ ಖಾಲಿ ಸೈಟ್... ಈ ಕಾರಣಕ್ಕೆ ಹೊಸ ತಲೆನೋವು!
ಕರ್ನಾಟಕದ ಈ ಸಿಟಿಯಲ್ಲಿ ಬರೋಬ್ಬರಿ 84,000 ಖಾಲಿ ಸೈಟುಗಳಿದ್ದು ಹೊಸ ತಲೆನೋವು ಶುರುವಾಗಿದೆ. ಹೌದು ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಹಾಗೂ ಅವಳಿ ನಗರವೊಂದರಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಇದೀಗ ಈ ಆಸ್ತಿದಾರರಿಗೆ ಕೆಲವೊಂದು ಪ್ರಮುಖ ನಿರ್ದೇಶನ ನೀಡುವುದಕ್ಕೂ ಪಾಲಿಕೆ ಮುಂದಾಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದ ಪ್ರಮುಖ ಪಾಲಿಕೆಗಳಲ್ಲಿ ಒಂದಾಗಿರುವ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ಹೊಸದೊಂದು ಸಮಸ್ಯೆ ಎದುರಾಗಿದೆ. ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರೋಬ್ಬರಿ 84,೦೦೦೦ ಸಾವಿರ ಆಸ್ತಿ ಅಥವಾ ಖಾಲಿ ನಿವೇಶನಗಳಿದ್ದು ಇದು ಹೊಸ ತಲೆನೋವಿಗೆ ಕಾರಣವಾಗಿದೆ. ಇನ್ನು ಸಚಿವ ಸಂತೋಷ್ ಲಾಡ್ ಅವರು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರದಕ್ಷಿಣೆ ಮಾಡಿದಾಗ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.

ನಗರದ ಸೌಲಭ್ಯಗಳ ಸುಧಾರಣೆ, ಸ್ವಚ್ಛತೆಗೆ ಸ್ವತಃ ಜಿಲ್ಲಾ ಉಸ್ತವಾರಿ ಸಚಿವರಿಂದ ಕಾರ್ಯಾಚರಣೆ ನಡೆದಿದೆ. ಈ ವೇಳೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 82 ಸಾವಿರ ಖಾಲಿ ಸೈಟುಗಳ ಬಗ್ಗೆ ಚರ್ಚೆ ಆಗಿದೆ. ನಗರ ಅಂದಗೆಡುವಲ್ಲಿ ನಗರದಲ್ಲಿ ಖಾಲಿ ಸೈಟ್ ಹೊಂದಿರುವ ಮಾಲೀಕರು ತಪ್ಪೂ ಇದೆ. ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಅಂದಾಜು 82 ಸಾವಿರ ಖಾಲಿ ಸೈಟ್ ಗಳಿವೆ. ಅವುಗಳಲ್ಲಿನ ಬಹುತೇಕ ಸೈಟ್ ಗಳಿಗೆ ಕಂಪೌಂಡ್ ಇಲ್ಲ, ತಂತಿ ಬೇಲಿ ಇಲ್ಲ, ಸ್ವಚ್ಛತೆ ಇಲ್ಲ. ಗಿಡಗಂಟಿ ಬೆಳೆದು ನಿಂತಿವೆ. ಬೇರೆಯವರು ತಮ್ಮ ಮನೆಯ ಕಸ ತಂದು ಅದರಲ್ಲಿ ಎಸೆಯುತ್ತಾರೆ. ಇದರಲ್ಲಿ ವಿಷ ಜಂತುಗಳು, ಹಂದಿಗಳು ವಾಸಿಸುತ್ತಿವೆ ಎಂದರು.
ಇದನ್ನು ಪಾಲಿಕೆ ಆಯುಕ್ತರು ಗಂಭೀರವಾಗಿ ಪರಿಗಣಿಸಿ, ಈ ಕುರಿತು ಸಾರ್ವಜನಿಕ ಪ್ರಕಟಣೆ ನೀಡಿ, ಸೈಟ್ ಮಾಲೀಕರು ಒಂದು ವಾರದೊಳಗೆ ತಮ್ಮ ಸೈಟ್ ಸ್ವಚ್ಛಗೊಳಿಸಲು ನಿರ್ದೇಶನ ನೀಡಬೇಕು. ಕ್ರಮವಹಿಸದೇ ಇರುವ ಸೈಟ್ ಮಾಲೀಕರಿಗೆ ನಿಯಮಾನುಸಾರ ಹೆಚ್ಚಿನ ದಂಡ ವಿಧಿಸಬೇಕು. ದಂಡ ಕಟ್ಟಿಯೂ ಸುಧಾರಿಸದ ಮತ್ತು ಪಾಲಿಕೆ ಆದೇಶ ಪಾಲಿಸದ ಮಾಲೀಕರ ಸೈಟ್ ಗಳನ್ನು ಕಾನೂನಾತ್ಮಕ ಕ್ರಮ ಕೈಗೊಂಡು ಅವುಗಳನ್ನು, ಪಾಲಿಕೆಗೆ ಜಪ್ತಿ ಮಾಡಿಕೊಳ್ಳಬೇಕು ಎಂದು ಸಚಿವರು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರಿಗೆ ಸೂಚನೆ ನೀಡಿದ್ದಾರೆ.
ಸಚಿವ ಸಂತೋಷ ಲಾಡ್ ಅವರು, ಭಾನುವಾರ ಬೆಳಿಗ್ಗೆ ಹುಬ್ಬಳ್ಳಿ ನಗರದ ಸಿದ್ದಾರೂಢ ಮಠ, ಆರೂಢ ನಗರ, ಗಣೇಶನಗರ, ಆನಂದನಗರ ಸರ್ಕಲ್, ರಾಮಲಿಂಗೇಶ್ವರ ನಗರ, ಗಾಂಧಿವಾಡ, ಕೇಶ್ವಾಪುರ ಸೇರಿದಂತೆ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಇಂದಿನ ಈ ಕಾರ್ಯಕ್ರಮ ಪೋಜ್ ಕೊಡಲು ಅಥವಾ ಪಿಕನಿಕ್ ಅಲ್ಲ; ನಾಗರಿಕರಿಗೆ ಪರಿಸರ, ಸ್ವಚ್ಛತೆ, ನೈರ್ಮಲ್ಯದ ಜಾಗೃತಿ ಮೂಡಿಸಲು ಮತ್ತು ಪಾಲಿಕೆ ಸಿಬ್ಬಂದಿಗಳು ಆತ್ಮಸಾಕ್ಷಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಮಾಡುವದಾಗಿದೆ ಎಂದು ನೆರೆದವರಿಗೆ ನೇರವಾಗಿ ತಿಳಿಸಿದರು.
ಸ್ವಚ್ಛತಾ ಅಭಿಯಾನಕ್ಕೆ ನಾಗರಿಕರು ಕೈ ಜೋಡಿಸಿ: ನಮ್ಮ ನಗರ, ಸ್ವಚ್ಛ ನಗರ ಎಂಬ ಅಭಿಮಾನ, ನಾಗರಿಕ ಪ್ರಜ್ಞೆ ನಗರದ ಪ್ರತಿ ನಾಗರಿಕರಲ್ಲಿ ಇರಬೇಕು. ಅಂದಾಗ ಮಾತ್ರ ನಗರದ ಅಂದ, ಚಂದ, ಸೌಂದರ್ಯ ಹೆಚ್ಚಿಸಲು ಮತ್ತು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಹಾನಗರ ಪಾಲಿಕೆಯಿಂದ ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರೂ ಕೈ ಕೋಡಿಸುವ ಅಗತ್ಯವಿದೆ. ನಗರವಾಸಿಗಳು ಸಕ್ರಿಯವಾಗಿ ಭಾಗವಹಿಸಿದರೆ, ನಗರ ಸ್ವಚ್ಛತೆ ಕಾಪಾಡಬಹುದು. ಅಧಿಕಾರಿಗಳು ಬರೀ ತಮ್ಮ ಕಾರು, ಕಚೇರಿಯಲ್ಲಿ ಕಾಲ ಕಳೆಯದೇ ಸ್ಪಾಟ್ ವಿಜಿಟ್, ಕ್ಷೇತ್ರ ಭೇಟಿ ನೀಡಬೇಕು. ತಮ್ಮವ್ಯಾಪ್ತಿಯ ಪ್ರದೇಶದ ಬಗ್ಗೆ, ಅಲ್ಲಿನ ಸಮಸ್ಯೆಗಳ ಬಗ್ಗೆ ಪ್ರತಿದಿನ ಮಾಹಿತಿ ಹೊಂದಿರಬೇಕು ಎಂದು ಸೂಚನೆ ನೀಡಿದ್ದಾರೆ.
ಲೋಕೇಷನ್ ಟ್ರ್ಯಾಕ್: ಕ್ಷೇತ್ರದ ಸಮಸ್ಯೆ ತಿಳಿಯುವಲ್ಲಿ ವಿಫಲತೆ ಮತ್ತು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದೆ, ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಬರೀ ಅಂಕಿಅಂಶ, ಮಾಹಿತಿ ನೀಡುವ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ಮತ್ತು ಕಾಲಮಿತಿಯಲ್ಲಿ ನಿರ್ವಹಿಸುತ್ತಿಲ್ಲ ಎಂಬುದು ಇಂದು ಸಾರ್ವಜನಿಕರು ನನಗೆ ನೀಡಿದ ದೂರುಗಳಿಂದ ಖಾತರಿ ಆಗಿದೆ.
ಪ್ರತಿ ದಿನ ಬೆಳಿಗ್ಗೆ ಕನಿಷ್ಠ 2 ಗಂಟೆಗಳ ಕಾಲ, ಪಾಲಿಕೆಯ ಆಯುಕ್ತರಾದಿಯಾಗಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕ ಸಮಸ್ಯೆಗಳು, ಅಲ್ಲಿನ ಸ್ವಚ್ಛತೆ, ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು. ಪರಿಹರಿಸಲು ಸಂಬಂದಪಟ್ಟವರಿಗೆ ಮಾಹಿತಿ ನೀಡಿ, ಅದನ್ನು ಪಾಲೋ ಅಪ್ ಮಾಡಬೇಕು. ಇದಕ್ಕೆ ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಿ, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು, ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications