2500 ಕೋಟಿ ಸೂಟಕೇಸ್ ಹಿಡಿದು ಬಿಜೆಪಿಯಲ್ಲಿ 8 ಜನ ಸಿಎಂ ಆಗಲು ರೆಡಿ ಇದ್ದಾರೆ: ಮುಖ್ಯಮಂತ್ರಿ ಚಂದ್ರು

ಕಾಂಗ್ರೆಸ್ ಪಕ್ಷದವರು ಖದೀಮರು, ದರೋಡೆಕೋರರು.‌ ಬಿಜೆಪಿಯವರು ಭ್ರಷ್ರರು,ಭಂಡರು ಎಂದು ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.

ಕೊಪ್ಪಳ,ಫೆಬ್ರವರಿ25: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಆಮ್ ಆದ್ಮಿ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 2500 ಕೋಟಿ ಇದ್ದ 8 ಜನರು ಮುಖ್ಯಮಂತ್ರಿ ಆಗಲು ಸೂಟಕೇಸ್ ಹಿಡಿದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ, ಅಶ್ವಥ ನಾರಾಯಣ, ಆರ್ ಅಶೋಕ್, ಸುಧಾಕರ್ ಸೇರಿದಂತೆ ಮುರುಗೇಶ್ ನಿರಾಣಿ ಸೇರಿದಂತೆ ಹಲವರು ಸಿದ್ದವಾಗಿದ್ದಾರೆ.

8 People Are Standing With Suitcases To Become Cm In BJP Says Mukhyamantri Chandru

ಇನ್ನೂ ದೇವೇಗೌಡರ ಕುಟುಂಬದಲ್ಲಿ ಕಿಂಗ್ ಮೇಕರ್ ಆಗಲು ಹೊರಟಿದ್ದಾರೆ. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಲು ಸಿದ್ದವಾಗಿಲ್ಲ. ರೇವಣ್ಣನನ್ನು ಸಿಎಂ ಮಾಡಬೇಕು ಎಂದಿದ್ದಾರೆ. ಈಗಾಗಲೇ ಅವರ ಕುಟುಂಬದಲ್ಲಿ ಹಲವರು ಅಧಿಕಾರದಲ್ಲಿದ್ದಾರೆ, ದೇವೇಗೌಡರ ನೂರು ವರ್ಷ ಬದುಕಲಿ ಆದರೆ ರಾಜಕೀಯ ರಿಟೈರ್ಡ್ ಆಗಲಿ ಎಂದು ಹೇಳಿದರು.

ರಾಜ್ಯದಲ್ಲಿ ಈಗ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ರಾಜಕಾರಣಿಗಳು ತಿಂದಿದ್ದೆ ಹೇಸಿಗೆಯಾಗಿದೆ. ಸ್ವಚ್ಛ ಆಡಳಿತಕ್ಕಾಗಿ ಬೇರೆ ಬೇರೆ ಪಕ್ಷಗಳಿಂದ ಜನ ಹೊರಬರುತ್ತಾರೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷದವರು ಖದೀಮರು, ದರೋಡೆಕೋರರು.‌ ಬಿಜೆಪಿಯವರು ಭ್ರಷ್ರರು,ಭಂಡರು. ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಅಗಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಲ್ ಸಂತೋಷ ಹಾಗೂ ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿದೆ ಎಂದು ಹೇಳಿದ ಅವರು, ಜೆಡಿಎಸ್ ಯಾರೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಬೇಕು ಎಂದು ಚಿಂತಿಸುತ್ತಿದೆ ಎಂದು ಹೇಳಿದರು.

8 People Are Standing With Suitcases To Become Cm In BJP Says Mukhyamantri Chandru

ಮೂರು ಪಕ್ಷಗಳು ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ.‌ ಚುನಾವಣೆಯಲ್ಲಿ ದುಡ್ಡು ಯಾರು ಕೊಟ್ಟರೂ ತೆಗೆದುಕೊಳ್ಳಿ.‌ ಆದರೆ ಅವರು ಕೊಡುವ ಐದು ವರ್ಷಕ್ಕೆ ಆಗುತ್ತಾ? ಮತದಾರ ವಿಚಾರ ಮಾಡಬೇಕು ಅದಕ್ಕಾಗಿ ಜನರ ಕಲ್ಯಾಣ ಮಾಡುವ ಪಕ್ಷ ಬೆಂಬಲಿಸಬೇಕು ಎಂದುಜನರಲ್ಲಿ ಮನವಿ ಮಾಡಿದರು.

ಇನ್ನೂ ಮಾರ್ಚ್ 4 ಸರಕಾರಿ ನಡೆಯಲಿದ್ದು, ಈ ಸಮಾವೇಶಲ್ಲಿ 50 ಸಾವಿರ ಜನ ಸೇರಲಿದ್ದಾರೆ. ಸಮಾವೇಶ ಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಅವರು ಆಗಮಿಸಲಿದ್ದಾರೆ.‌ ರಾಜಕೀಯ ಶುದ್ದಿಕರಣಕ್ಕಾಗಿ ಆಪ್ ಪಕ್ಷ ಕೆಲಸ ಮಾಡುತ್ತಿದೆ ಈ ಸಂದರ್ಭದಲ್ಲಿ ಆಪ್ ಪಕ್ಷಕ್ಕೆ ದಕ್ಷಿಣ ಭಾರತದ ಹೆಬ್ಬಾಗಿಲು ಆಗಲಿದೆ. ಎಲ್ಲಾ ಪಕ್ಷಗಳು ಚುನಾವಣೆ ಯ ಮುನ್ನ ಪ್ರಣಾಳಿಕೆ ಘೋಷಿಸಿ ಅವುಗಳ ಅನುಷ್ಠಾನ ತರೋದಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುತ್ತಾರೆ. ಆದರೆ ರಾಜಕೀಯವನ್ನು ಸ್ವಂತಕ್ಕೆ ಬಳಕೆಯಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಚಂದ್ರು ಬಣ್ಣ ಹಾಕಿ ಅಭಿನಯಿಸುವುದು ಬೇರೆ, ವಾಸ್ತವದಲ್ಲಿರುವುದು ಬೇರೆ. ಆದರೆ ರಾಜಕಾರಣಿಗಳು ಬಣ್ಣ ಹಾಕದೆ ಅಭಿನಯಿಸುತ್ತಿದ್ದಾರೆ. ಕಾಂಗ್ರೆಸ್ ಈಗ ಅಕ್ಕಿ, 2000 ರೂಪಾಯಿ ನೀಡುತ್ತೇವೆ ಎನ್ನುತ್ತಾರೆ. ಬಿಜೆಪಿಯು ಈಗ ಆರೋಗ್ಯ ಕ್ಲಿನಿಕ್ ತೆರೆಯುತ್ತವೆ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನೂ ನಮ್ಮ ಪಕ್ಷದಿಂದ 224 ಸ್ಥಾನಕ್ಕೆ ನಿಲ್ಲುತ್ತೇವೆ. ಹಣ ಬಲ, ತೋಳ ಬಲ ಜಾತಿಬಲ ಪ್ರಭಾವದ ಕಾಲದಲ್ಲಿ ನಾವು ಯಾವುದೇ ಖರ್ಚು ಇಲ್ಲದೆ ಚುನಾವಣೆ ಏದುರಿಸುತ್ತೇವೆ.

ರಾಮಮಂದಿರ ಅಭಿವೃದ್ದಿ ಮಾಡೋದು ಸರಿ. ಇದೇ ವೇಳೆ ನಮ್ಮೂರಿನಲ್ಲಯೂ ದೇವ ಮಂದಿರ ಏನು ಮಾಡಿವಿ. ನಮಗೆ ರಾಮಮಂದಿರ ಅಲ್ಲ ರಾಮ ರಾಜ್ಯ ಬೇಕು. ನಾನು ಚುನಾವಣೆಯಲ್ಲಿ ನಿಲ್ಲೋದಿಲ್ಲ.‌ ನಾನು ಒಮ್ಮೆ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ರಾಜಕಾರಣದಿಂದ ದೂರವಿಲ್ಲ ಆದರೆ ಚುನಾವಣೆ ರಾಜಕಾರಣದಿಂದ ದೂರವಿದ್ದೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+