ಸಿದ್ದರಾಮಯ್ಯ ವಿರುದ್ಧ ಕೈ ಪಾಳಯದಲ್ಲೇ ಮಸಲತ್ತು; ʼಒಬ್ಬರಲ್ಲ, ಇಬ್ಬರಲ್ಲ 8 ಜನ ಮಂತ್ರಿಗಳು ಸಿಎಂ ಕುರ್ಚಿಗೆ ಟವಲ್‌ ಹಾಕಿದ್ದಾರೆʼ

ಚಿತ್ರದುರ್ಗ, ಅಕ್ಟೋಬರ್‌ 04: ವಿರೋಧ ಪಕ್ಷದ ನಾಯಕನಾಗಿ ನಾವು ಸರಕಾರ ಬೀಳಿಸುವ ಪ್ರಯತ್ನ ಮಾಡಲ್ಲ. ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿ ಅದೇ ಬೀಳಬೇಕು. ಮತ್ತೆ ಚುನಾವಣೆಗೆ ಹೋಗಿ ಗೆದ್ದು ಬರಬೇಕೆಂಬುದೇ ನಮ್ಮ ಉದ್ದೇಶವಾಗಿದೆ.ಆದರೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೊಂಡ ತಿರುಗುತ್ತಿದ್ದಾರೆ. ಮತ್ತೊಂದು ಕಡೆ 8 ಜನ ಮಂತ್ರಿಗಳು ನಾನು ಸಿಎಂ ಅಂತಾ ಟವಲ್‌ ಹಾಕಿ ಕೂತಿದ್ದಾರೆ ಎಂದು ಆರ್‌ ಅಶೋಕ್‌ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ಆಮಿಷ ತೋರಿಸಿ ಇಡಿ ದುರ್ಬಳಕೆ ವಿಚಾರಕ್ಕೆ ವಿಚಾರವಾಗಿ ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಾಗಿ ನಾವು ಸರ್ಕಾರವನ್ನು ಬೀಳಿಸುವುದಿಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿ ಅದೇ ಬೀಳಬೇಕು ಆ ಶಾಸಕರು ಯಾರು ದೂರು ಕೊಡಲಿ,ಲೋಕಾಯುಕ್ತ ಅಥವಾ ಸಿಬಿಐ ಗೆ ದೂರು ಕೊಡಲಿ ಎಂದರು.

8 Ministers Have Put A Towel On The CM s Chair Says R Ashok

ಸಿದ್ದರಾಮಯ್ಯ ನಿಜವಾದ ವಿರೋಧಿ ಯಾರಾದ್ರೂ ಇದ್ರೆ, ಅದು ಅವರ ಪಾರ್ಟಿಯವರೇ, ಅವರ ಪಾರ್ಟಿಯಲ್ಲೇ ಮಸಲತ್ತು ನಡೀತಿದೆ, ಅವರ ಪಾರ್ಟಿಯಿಂದಲೇ ದಾಖಲೆ ವಿರೋಧ ಪಕ್ಷದ ಕೈ ಸೇರ್ತಿವೆ ಎಂದರು. ಇಷ್ಟೆಲ್ಲ ಮಾಡಿ ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುತ್ತಿದೆ. ಜನ ನಿಮಗೆ ಅಧಿಕಾರ ಕೊಟ್ಟು ಅಭಿವೃದ್ಧಿ ಮಾಡಿ ಎಂದಿದ್ದಾರೆ. ನಮ್ಮನ್ನ ವಿರೋಧ ಪಕ್ಷದಲ್ಲಿಟ್ಟು ಇದನ್ನ ನೋಡಿ ಅಂದಿದ್ದಾರೆ. ನಮ್ಮ ಕೆಲಸ‌ ನಮಗೆ ಮಾಡೋಕೆ ಬಿಡಿ, ಕಾಂಗ್ರೆಸ್ ಕಳೆದ 16 ತಿಂಗಳಲ್ಲಿ ಒಂದಾದ್ರೂ ಅಭಿವೃದ್ಧಿ ಮಾಡಿದೆಯಾ..? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರ ಬಂದ‌ ಮೇಲೆ ಇದ್ದಿದ್ದ ಡ್ಯಾಮ್ ಬಾಗಿಲು ಕಿತ್ಕೊಂಡು ಹೋಯ್ತು, 8 ಟಿಎಂಸಿ ನೀರು ಡ್ಯಾಮ್ ಆಚೆ ಹೊರಟುಹೋಯ್ತು ಡ್ಯಾಮ್ ಕಟ್ಟಿಲ್ಲ, ರಸ್ತೆ ಮಾಡಿಲ್ಲ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ, ಇತ್ತ ಕಮೀಶನ್ ಹೊಡೆಯೋಕೆ ಜನೌಷಧಿ ಕೇಂದ್ರ ಮುಚ್ಚಿ ಹಾಕಿದ್ರು, ಕೆಲಸ ಮಾಡೋದು ಬಿಟ್ಟು ಬರೀ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಸರಕಾರ ಬೀಳಸ್ತಾರೆ ಅಂತಾ ಡೈಲಾಗ್ ಹೊಡಿಯುತ್ತಾರೆ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮುಡಾ ಪ್ರಕರಣವನ್ನು ನಾವು ರೈಜ್ ಮಾಡಿದ್ವಿ, ಮುಡಾ ಅಧ್ಯಕ್ಷ ಮರಿಗೌಡ ಅವರು ಸಿಎಂಗೆ ರೈಟ್ ಹ್ಯಾಂಡ್ ಇದ್ದಾರೆ. ಮುಡಾದಲ್ಲಿ 2000 ರಿಂದ 3000 ಕೋಟಿ ಅವ್ಯವಹಾರ ಕುರಿತು ಪತ್ರ ಬರೆದಿದ್ದಾರೆ, ಪತ್ರ ಅವರ ಕೈಲಿ ಬರೆಸಿ ಬಿಜೆಪಿಯನ್ನು ಹಿಡ್ಕೋತಿದ್ದಾರೆ ಎಂದರು. ಮುಖ್ಯಮಂತ್ರಿ ತವರು ಜನರೇ ಅದನ್ನ ರೇಜ್ ಮಾಡಿದ್ದು, ಮೂಡ ಸೈಟು 5 ರಿಂದ 10 ಲಕ್ಷಕ್ಕಿಂತ ತಿಳ್ಕೊಂಡಿದ್ವಿ ಆದರೆ ಬೆಂಬಲಿಗನ ಮಾತು ಕೇಳಿ 62 ಕೋಟಿ ಎಂದಿದ್ದಾರೆ. ಪತ್ರ ಬರೆದವರು, ಸೈಟ್ ಬೆಲೆ ಕಟ್ಟಿದವರು ಸಿದ್ದರಾಮಯ್ಯನ ಬೆಂಬಲಿಗರೇ ಆಗಿದ್ದಾರೆ. ಎಂದರು.

ನಾಡಹಬ್ಬ ದಸರಾದಲ್ಲಿ ಕಾಂಗ್ರೆಸ್ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ ಅಶೋಕ್, ಈ ಬಾರಿಯ ದಸರಾದಲ್ಲಿ ತಾಯಿ ಚಾಮುಂಡೇಶ್ವರಿ ಗೆ ಅವಮಾನ ಮಾಡಿದ್ದಾರೆ. ದಸರಾದಲ್ಲಿ ಚಾಮುಂಡೇಶ್ವರಿ ವೈಭವೀಕರಣ ಮಾಡಬೇಕಿತ್ತು. ದಸರಾ ಉದ್ಘಾಟನೆಗೆ ಹೋದವರು ಸಾಹಿತಿನೋ ಏನೋ ಗೊತ್ತಿಲ್ಲ, ದಸರಾ ಹಬ್ಬದಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದ್ರು ಎಂದು ಸಾಹಿತಿ ಹಂಪ ನಾಗರಾಜಯ್ಯ ವಿರುದ್ಧ ಹೆಸರು ಹೇಳದೇ ಕಿಡಿಕಾರಿದರು.

ಈ ದಸರಾ ರಾಜಕೀಯದ ದಸರಾವಾಗಿದೆ. ಕಾಂಗ್ರೆಸ್ ಪಕ್ಷ ದಸರಾವನ್ನು ರಾಜಕೀಯ ದಸರಾ ಮಾಡಿತು.ಇದು ಕಾಂಗ್ರೆಸ್ ಚಾಮುಂಡೇಶ್ವರಿಗೆ ಮಾಡಿದ ಅವಮಾನ ತಾಯಿ ಚಾಮುಂಡೇಶ್ವರಿ ಇದಕ್ಕೆ ತಕ್ಕ ಶಿಕ್ಷೆ ಕೊಡ್ತಾಳೆ ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+