7ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಅನಿವಾರ್ಯ?
ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಸದ್ಯಕ್ಕೆ ಈಡೇರುವ ಲಕ್ಷಣ ಕಾಣುತ್ತಿಲ್ಲ. ವೇತನ ಏರಿಕೆಗಾಗಿ & ಹಲವು ಸೌಲಭ್ಯ ನೀಡುವಂತೆ ಸರ್ಕಾರಿ ನೌಕರರು ಪದೇ ಪದೇ ಬೇಡಿಕೆಗಳನ್ನ ಇಡುತ್ತಿದ್ದಾರೆ. ಈ ಹಿಂದೆ ಕೂಡ ಬಿಜೆಪಿ ಸರ್ಕಾರ ಇದ್ದಾಗ ಸರ್ಕಾರಿ ನೌಕರರು ಹಲವಾರು ಬೇಡಿಕೆ ಇಟ್ಟಿದ್ದರು. ಪ್ರತಿಭಟನೆ ನಡೆಸಿದರೂ ಅದು ವರ್ಕೌಟ್ ಆಗಲೇ ಇಲ್ಲ, ಹೀಗಿದ್ದಾಗ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿಸುತ್ತಿದೆ!
ಅಂದಹಾಗೆ ಇದೀಗ ಕೆ. ಸುಧಾಕರ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಅವಧಿ ಮುಗಿದು ಹೋಗುತ್ತಿದೆ. ಕರ್ನಾಟಕ ಸರ್ಕಾರಿ ನೌಕರರು ಆಯೋಗದಿಂದ ವರದಿಯನ್ನು ಪಡೆದು ಅದನ್ನು ಅನುಷ್ಠಾನ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಇದ್ಯಾವುದೂ ವರ್ಕೌಟ್ ಆಗುತ್ತಿಲ್ಲ. ಅದರಲ್ಲೂ ಲೋಕಸಭೆ ಚುನಾವಣೆ ಹತ್ತಿರವೇ ಇರುವಾಗ, ಗುಡ್ ನ್ಯೂಸ್ ಸಿಗುತ್ತೆ ಅಂತಾ ಸರ್ಕಾರಿ ನೌಕರರು ಕಾಯುತ್ತಿದ್ದರು. ಹೀಗಿದ್ದಾಗ ಸಿಹಿಸುದ್ದಿ ಸಿಗುವುದು ಅನುಮಾನವೇ ಆಗುತ್ತಿದೆ. ಹೀಗಾಗಿ ಸರ್ಕಾರಿ ನೌಕರರು ತಮ್ಮ ತಮ್ಮ ಬೇಡಿಕೆ ಈಡೇರಿಕೆಗೆ ಹೋರಾಟದ ಮಾರ್ಗ ಹಿಡಿಯುತ್ತಾರಾ? ಎಂಬ ಪ್ರಶ್ನೆ ಮೂಡಿದೆ.

ಲೋಕಸಭೆ ಚುನಾವಣೆ ಎಫೆಕ್ಟ್!
ಅಂದಹಾಗೆ ಈಗ 7ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರಿ ನೌಕರರ ಪರಿಸ್ಥಿತಿ ಅತ್ತ ಮುಳ್ಳು, ಇತ್ತ ಪ್ರಪಾತ ಎನ್ನುವಂತಾಗಿದೆ. ಯಾಕಂದ್ರೆ ಮಾರ್ಚ್ 10ರ ನಂತರ, ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ. ಹೀಗಿದ್ದಾಗ 7ನೇ ವೇತನ ಆಯೋಗದ ಅವಧಿ 15/3/2024ರ ತನಕ ಇದ್ದು, ಆಯೋಗ ತನ್ನ ವರದಿಯನ್ನ ಮಾರ್ಚ್ 15ಕ್ಕೆ ಸರ್ಕಾರಕ್ಕೆ ಸಲ್ಲಿಕೆ ಮಾಡುವ ನಿರೀಕ್ಷೆಯು ಇದೆ. ಅಕಸ್ಮಾತ್ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದರೆ, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ಆಗ ಸರ್ಕಾರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಡಲು ಆಗಲ್ಲ. ಹೀಗಾಗಿ ಆದಷ್ಟು ಬೇಗವೇ, ವೇತನ ಆಯೋಗದ ವರದಿ ಪಡೆದು ಅನುಷ್ಠಾನಗೊಳಿಸಲು ಆಗ್ರಹಿಸುತ್ತಿದ್ದಾರೆ ಸರ್ಕಾರಿ ನೌಕರರು.
ಪ್ರತಿಭಟನೆ ಹಾದಿ ಹಿಡಿಯುತ್ತಾರಾ?
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದಾಗ, ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ಕರ್ನಾಟಕದ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ್ದರು. ಈ ಮೂಲಕ 7ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಜಾರಿಗೆ ಒತ್ತಾಯಿಸಿದ್ದರು. ಆದರೆ ಆಗಲೂ ಸರ್ಕಾರ ನೌಕರರಿಗೆ ಮೂಗಿನ ಮೇಲೆ ತುಪ್ಪ ಸವರಿ ಕಳುಹಿಸಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ಮತ್ತೊಮ್ಮೆ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ನೌಕರರು ಪರದಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಸರ್ಕಾರಿ ನೌಕರರು ಹೋರಾಟದ ಹಾದಿಯನ್ನು ಹಿಡಿಯುತ್ತಾರಾ? ಎಂಬ ವಿಚಾರ ಭಾರಿ ಕುತೂಹಲ ಮೂಡಿಸಿದೆ.
12 ದಿನಕ್ಕೆ ಅವಧಿ ಮುಕ್ತಾಯ!
ಅಂದಹಾಗೆ 7ನೇ ರಾಜ್ಯ ವೇತನ ಆಯೋಗದ ಅವಧಿ 2023ರ ನವೆಂಬರ್ ತಿಂಗಳಲ್ಲಿಯೇ ಕೊನೆ ಆಗಬೇಕಿತ್ತು. ಕೆ. ಸುಧಾಕರ್ ನೇತೃತ್ವದ ತ್ರಿ ಸದಸ್ಯರ 7ನೇ ರಾಜ್ಯ ವೇತನ ಆಯೋಗದ ಅವಧಿನ ಅಂದಿನ ಸರ್ಕಾರ ಮುಂದೂಡಿಕೆ ಮಾಡಿತ್ತು. ಹೀಗೆ ವೇತನ ಆಯೋಗ ಮುಂದೂಡಿಕೆ ಆದ ನಂತರ, 7ನೇ ವೇತನ ಆಯೋಗ ಅವಧಿಯನ್ನ 15/3/2024ರ ತನಕ ವಿಸ್ತರಣೆ ಮಾಡಲಾಗಿತ್ತು. ಇದೀಗ ಇನ್ನೇನು ಕೇಲವೇ ದಿನದಲ್ಲಿ ವೇತನ ಆಯೋಗದ ಅವಧಿ ಮುಗಿಯಲಿದ್ದು, ವರದಿ ಸಲ್ಲಿಸುವ ನಿರೀಕ್ಷೆ ಇದೆ. ಆದರೆ ಅದಕ್ಕೂ ಮೊದಲೇ ಸರ್ಕಾರಿ ನೌಕರರ ಅಸಮಾಧಾನವೂ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ.

ಒಟ್ನಲ್ಲಿ ಲೋಕಸಭೆ ಚುನಾವಣೆಗೆ ಮೊದಲು 7ನೇ ವೇತನ ಆಯೋಗದ ವಿಚಾರ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಹೀಗಾಗಿ ಈ ಪ್ರಶ್ನೆಗಳಿಗೆ ಯಾವಾಗ ಉತ್ತರ ಸಿಗುತ್ತದೆ? ಲೋಕಸಭೆಗೆ ಚುನಾವಣೆ ಘೋಷಣೆ ಆಗುವ ಮೊದಲೇ ರಾಜ್ಯದಲ್ಲಿನ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗುತ್ತಾ? ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇದೀಗ, ಸರ್ಕಾರಿ ನೌಕರರ ಬೇಡಿಕೆ ಈಡೇರಿಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.
ಪ್ರತಿಭಟನೆ ಶುರುವಾದರೆ ಸಂಕಷ್ಟ?
ಅಕಸ್ಮಾತ್ ಮತ್ತೊಮ್ಮೆ ಸರ್ಕಾರಿ ನೌಕರರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಭಟನೆಯ ನಡೆಸಿದಂತೆ, ಮತ್ತೊಮ್ಮೆ ಈಗಲೂ ಸರ್ಕಾರದ ನಡೆ ವಿರುದ್ಧ ಹೋರಾಟ ಶುರು ಮಾಡಿದರೆ ಚುನಾವಣೆ ಸಮಯದಲ್ಲಿ ಸಮಸ್ಯೆ ಗ್ಯಾರಂಟಿ. ಹೀಗಾಗಿ ಸರ್ಕಾರ ಕೂಡ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಅವಲೋಕನ ಮಾಡುತ್ತಿದೆ. ಮತ್ತೊಂದು ಕಡೆ ನೌಕರರ ಸಂಘ ಕೂಡ ಇದೀಗ, ಸರ್ಕಾರದ ಮೇಲೆ ಒತ್ತಡ ಹಾಕಲು ಕೂಡ ಸಜ್ಜಾಗಿದೆ. ಆದರೆ ಇದೆಲ್ಲಾ ವರ್ಕೌಟ್ ಆಗುತ್ತಾ? ಕರ್ನಾಟಕದ ಸರ್ಕಾರಿ ನೌಕರರ ಬಹು ದಿನಗಳ ಕನಸು ಈಗಲಾದರೂ ಈಡೇರುತ್ತಾ? ಇದೆಲ್ಲ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದೆ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹಾಗೇ ಸರ್ಕಾರ, ಸರ್ಕಾರಿ ನೌಕರರು ಈ ಯಕ್ಷ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ ಮಾಡ್ತಿದ್ದಾರೆ.












Click it and Unblock the Notifications