Government Employees: ಆ.17ರಂದು ರಾಜ್ಯ ಸರ್ಕಾರಿ ನೌಕರರಿಗೆ ಸಾಂದರ್ಭಿಕ ರಜೆ, ಸಿಎಂಗೆ ಅಭಿನಂದನಾ ಕಾರ್ಯಕ್ರಮ
ಬೆಂಗಳೂರು, ಆಗಸ್ಟ್ 14: ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಪೂರಕವಾದ ಏಳನೇ ವೇತನ ಆಯೋಗ (7th Pay Commission) ಜಾರಿ ಮಾಡಿದ ಬೆನ್ನಲ್ಲೆ, ಸರ್ಕಾರಿ ನೌಕರರಿಗೆ ಆಗಸ್ಟ್ 17ರಂದು ಸಾಂದರ್ಭಿಕ ರಜೆ ಘೋಷಿಸಿ (Special Casual Leave) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ.ಬಿ ಸುತ್ತೋಲೆ ಹೊರಡಿಸಿದ್ದಾರೆ. ಅಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ಕಾರಿ ನೌಕರರಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಮನವಿ ಮೇರೆಗೆ ರಾಜ್ಯ ಸರ್ಕಾರಿ ನೌಕರರಿಗೆ ರಜೆ ಮಂಜೂರು ಮಾಡಿ ಆದೇಶಿಸಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಿ ನೌಕರರಿಗೆ (Government Employees) ಸಿಹಿ ಸುದ್ದಿ ನೀಡಿದ್ದು, ಏಳನೇ ವೇತನ ಆಯೋಗ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವೃಂದ ಸಂಘಗಳು ತೀರ್ಮಾನಿಸಿವೆ. ಈ ಕಾರ್ಯಕ್ರಮವನ್ನು ಆಗಸ್ಟ್ 17ರಂದು ಅರಮನೆ ಮೈದಾನದಲ್ಲಿ ಆಯೋಜಿಸಿದ್ದಾರೆ. ಅಂದು ಬೇಡಿಕೆ ಈಡೇರಿಕೆಯ ಸಂತದಲ್ಲಿರುವ ನೌಕರರು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಲಿದ್ದಾರೆ.

ಈ ಕುರಿತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವೃಂದ ಸಂಘಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಒಂದು ದಿನದ ಸಾಂಧರ್ಬಿಕ ರಜೆ (Special Casual Leave) ನೀಡುವಂತೆ ಮನವಿ ಮಾಡಿತ್ತು.
ಇದಕ್ಕೆ ಒಪ್ಪಿದ ಸಾಂದರ್ಭಿಕ ರಜೆ ಘೋಷಿಸಿರುವ ಇಲಾಖೆ ಷರತ್ತು ವಿಧಿಸಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಕುರಿತು ಅಧಿಕೃತ ಹಾಜರಾತಿ ಪತ್ರವನ್ನು ನೌಕರರಾದವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಥವಾ ಸಂಬಂಧಿಸಿದ ನಾಮನಿರ್ದೇಶಿತ ವ್ಯಕ್ತಿಗಳಿಂದ ಪಡೆದು ಅದನ್ನು ನೀಡುವುದು ಕಡ್ಡಾಯಗೊಳಿಸಿದೆ. ಇದನ್ನು ಒಪ್ಪಿ ಅಂದು ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಜಿಲ್ಲೆ ಹಾಗೂ ಇತರ ಜಿಲ್ಲೆಗಳ ಸರ್ಕಾರಿ ನೌಕರರು ಹಾಜರಾಗಲು ಒಂದು ದಿನದ ಸಾಂದರ್ಭಿಕ ರಜೆ ಘೋಷಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ
ಇನ್ನೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಗೆ ಸಂಬಂಧಿಸಿದಂತೆ ಇದೇ 2023-2024ನೇ ಸಾಲಿನ ರಾಜ್ಯಮಟ್ಟದ ಕ್ರೀಡಾಕೂಟವನ್ನು ಆಗಸ್ಟ್ 17ರಿಂದ ಆಗಸ್ಟ್ 19ರವರೆಗೆ ಆಯೋಜಿಸಬೇಕು. ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ (State Level Government Employees Sports) ಆಯೋಜಿಸಲು ನಿರ್ಧರಿಸಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ನಿರ್ದೇಶಿಸಿದೆ. ಇದರ ಬೆನ್ನಲ್ಲೆ ನೌಕರರು ಕ್ರಿಡಾಕೂಟಕ್ಕೆ ಅಗತ್ಯ ತಯಾರಿ ನಡೆಸಿದ್ದಾರೆ..












Click it and Unblock the Notifications