7th pay commission: ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಎಷ್ಟಕ್ಕೆ ಏರಿಕೆಯಾಗಲಿದೆ?
ಬೆಂಗಳೂರು, ಏಪ್ರಿಲ್. 01: 7ನೇ ವೇತನ ಆಯೋಗದ ಜಾರಿಗಾಗಿ ರಾಜ್ಯ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿದ್ದಾರೆ. ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಆಯೋಗದ ವರದಿ ಜಾರಿಯಾಗಿಲ್ಲ. ಆದರೆ, ಮುಖ್ಯಮಂತ್ರಿಗಳ ಕೈಗೆ ವರದಿ ಸಲ್ಲಿಕೆಯಾಗಿದೆ.
ಏಳನೇ ವೇತನ ಆಯೋಗವು ತನ್ನ ವರದಿಯಲ್ಲಿ ವೇತನ ಭತ್ಯೆ, ತುಟ್ಟಿ ಭತ್ಯೆ, ಸೇವಾ ಭತ್ಯೆ ಸೇರಿ ಹಲವು ಶಿಫಾರಸುಗಳನ್ನು ಆಯೋಗ ಸಲ್ಲಿಕೆ ಮಾಡಿದೆ. ಇದರ ಜೊತೆಗೆ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಎಷ್ಟಕ್ಕೆ ಏರಿಕೆಯಾಗಬೇಕು ಎಂಬ ಬಗ್ಗೆಯು ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.

ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ
ದಿನಾಂಕ 01.07.2022 ರಲ್ಲಿ ಇದ್ದಂತೆ ಮೂಲ ವೇತನ, ಸದರಿ ದಿನಾಂಕಕ್ಕೆ ಇದ್ದ ಶೇಕಡಾ 31 ರಷ್ಟು ತುಟ್ಟಿ ಭತ್ಯೆ ಮತ್ತು ದಿನಾಂಕ 01.07.2022 ರಂದು ಇದ್ದಂತ ಮೂಲ ನಿವೃತ್ತಿ ಅಥವಾ ಕುಟುಂಬ ನಿವೃತ್ತಿ ವೇತನಕ್ಕೆ ಶೇಕಡಾ 27.50ರಷ್ಟು ಫಿಟ್ಟೆಂಟ್ ಸೌಲಭ್ಯ ಸಿಗಲಿದೆ.
ಒಟ್ಟಾರೆ, ಮೂಲ ವೇತನ, ಶೇಕಡಾ 31 ರಷ್ಟು ತುಟ್ಟಿ ಭತ್ಯೆ ಮತ್ತು ನಿವೃತ್ತಿ ವೇತನಕ್ಕೆ ಶೇಕಡಾ 27.50ರಷ್ಟು ಫಿಟ್ಟೆಂಟ್ ಸೌಲಭ್ಯ ಈ ಮೂರು ಒಟ್ಟು ಮೊತ್ತದ ನಿವೃತ್ತಿ ವೇತನ ಮಾಸಿಕ ಕನಿಷ್ಠ ರೂ.13500 ಮತ್ತು ಮಾಸಿಕ ಗರಿಷ್ಟ ರೂ.1,20,600 ಆಗಿದೆ. ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ಮಾಸಿಕ ಕನಿಷ್ಠ ರೂ.13500 ಮತ್ತು ಗರಿಷ್ಠ ರೂ.80,400 ಮಿತಿಗೆ ಒಳಪಟ್ಟಿರುತ್ತದೆ.

ಹೀಗಾಗಿ 70 ರಿಂದ 80 ವರ್ಷಗಳ ವಯಸ್ಸಿನ ಸಮೂಹದ ಪಿಂಚಣಿದಾರರಿಗೆ ಶೇ.10ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ಪಾವತಿಸಲು ಏಳನೇ ವೇತನ ಆಯೋಗ ಶಿಫಾರಸ್ಸು ಮಾಡಿದೆ.
ರಜಾ ಪ್ರಯಾಣ ರಿಯಾಯಿತಿ:
7ನೇ ವೇತನ ಆಯೋಗವು 2 ಬಾರಿಯಿಂದ 03 ಬಾರಿಗೆ ರಜಾ ಪ್ರಯಾಣ ರಿಯಾಯಿತಿ (ಎಲ್‌ಟಿಸಿ)ಯ ಬಗ್ಗೆಯೂ ಶಿಫಾರಸ್ಸು ಮಾಡಿದೆ. ಮೊದಲನೇ ವರ್ಷದಿಂದ 10ನೇ ವರ್ಷದ ಸೇವಾವಧಿಗೆ 1ನೇ ಅವಧಿ. 11ನೇ ವರ್ಷದಿಂದ 20ನೇ ವರ್ಷದ ಸೇವಾವಧಿಗೆ 2ನೇ ಅವಧಿ ಮತ್ತು 21ನೇ ವರ್ಷದಿಂದ ಸೇವೆಯಿಂದ ನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದವರೆಗೆ 3ನೇ ಅವಧಿ ಮಾಡಬೇಕು ಎಂದು ಶಿಫಾರಸು ಮಾಡಿದೆ.
ಮಾತೃತ್ವ ರಜೆ:
ಸೇವೆಗೆ ಸೇರುವ 60 ದಿನಗಳ ಮೊದಲು ಮಗುವಿಗೆ ಜನ್ಮನೀಡಿದ ಮಹಿಳಾ ಸರ್ಕಾರಿ ನೌಕರರಿಗೆ 18 ವಾರಗಳ ಹೆರಿಗೆ ರಜೆಯನ್ನು ವಿಸ್ತರಿಸಲು 7ನೇ ವೇತನ ಆಯೋಗವು ಶಿಫಾರಸ್ಸು ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ ಹೆರಿಗೆ ರಜೆಯನ್ನು ವಿಸ್ತರಿಸಲು ಮನವಿ ಮಾಡಿತ್ತು. ಒದರ ಜೊತೆಗೆ ತಾಯ್ತನ ಹೊಂದಿರುವ ಮಹಿಳಾ ನೌಕರರಿಗೆ ಮಕ್ಕಳಿಗೆ ದಿನಕ್ಕೆ 2 ಬಾರಿ ಸ್ತನ್ಯಪಾನಕ್ಕಾಗಿ ಅವಕಾಶ ನೀಡಬೇಕು. ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿ ಮಹಿಳಾ ನೌಕರರಿಗೆ ಶಿಶುಪಾಲನಾ ಮತ್ತು ಹೆರಿಗೆ ರಜೆಗಳನ್ನು ಮಂಜೂರು ಮಾಡಬೇಕು ಎಂದು ಬೇಡಿಕೆ ಇಟ್ಟಿತ್ತು.
ವೇತನ ಆಯೋಗವು ಜೊತೆಗೆ ಸಮವಸ್ತ್ರ ಭತ್ಯೆ, ಪ್ರಯಾಣ ಭತ್ಯೆ, ವಾಹನ ಭತ್ಯೆ, ದಿನ ಭತ್ಯೆ, ವರ್ಗಾವಣೆ ಅನುದಾನ, ವಿಶೇಷ ಭತ್ಯೆ, ತರಬೇತಿ ವಿಶೇಷ ಭತ್ಯೆ ಇತರೆ ಗಳ ಕುರಿತು ಇನ್ನೂ ಅನೇಕ ಶಿಫಾರಸ್ಸು ಮಾಡಲಾಗಿದೆ. ಆಯೋಗದ ಅಂದಾಜಿನಂತೆ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷಕ್ಕೆ ರೂ. 17,440.15 ಕೋಟಿಗಳಷ್ಟು ಹೆಚ್ಚುವರಿ ವೆಚ್ಚ (ಮಧ್ಯಂತರ ಪರಿಹಾರದ ವೆಚ್ಚ ಸೇರಿಸಿ) ಆಗುವುದಾಗಿ ಏಳನೇ ವೇತನ ಆಯೋಗ ಅಂದಾಜು ಮಾಡಿದೆ.












Click it and Unblock the Notifications