7th Pay Commission: ಸರ್ಕಾರಿ ನೌಕರರ ಭತ್ಯೆ, ಮುಂಗಡದ ಶಿಫಾರಸುಗಳು
ಬೆಂಗಳೂರು, ಆಗಸ್ಟ್ 22: ಕರ್ನಾಟಕದ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿ, ಜಾರಿಗೊಳಿಸಿದೆ. ಇದರಿಂದಾಗಿ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಏರಿಕೆಯಾಗಿದೆ. ಆಯೋಗ ನೌಕರರ ಭತ್ಯೆ, ಮುಂಗಡ, ಇತರ ಸೌಲಭ್ಯಗಳನ್ನು ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ? ಎಂದು ವರದಿಯಲ್ಲಿ ಮಾಹಿತಿ ನೀಡಿದೆ. ಅಲ್ಲದೇ ಈ ಕುರಿತು ಹಲವು ಶಿಫಾರಸುಗಳನ್ನು ಸಹ ಮಾಡಿದೆ.
ಆಯೋಗ ತನ್ನ ವರದಿಯಲ್ಲಿ ವೇತನದ ಮೌಲ್ಯವನ್ನು ಹಣದುಬ್ಬರಿದಂದ ಕುಸಿಯುವುದನ್ನು ರಕ್ಷಿಸಲು ತುಟ್ಟಿ ಭತ್ಯೆಯಂತಹ ಭತ್ಯೆಗಳನ್ನು ಎಲ್ಲಾ ನೌಕರರಿಗೆ ಸಂದಾಯ ಮಾಡಲಾಗುತ್ತಿದ್ದರೆ, ಕೆಲವು ಭತ್ಯೆಗಳನ್ನು ಆತ ಅಥವಾ ಆಕೆ ನಿರ್ವಹಿಸುವ ಯಾವುದೇ ಹೆಚ್ಚುವರಿ ಅಥವಾ ವಿಶೇಷವಾಗಿ ಕಠಿಣವಾದ ಕಾರ್ಯನಿರ್ವಹಣೆಗಾಗಿ ಪಾವತಿಸಲಾಗುತ್ತದೆ ಎಂದು ಹೇಳಿದೆ. ರಾಜ್ಯ ಸರ್ಕಾರದ ಪ್ರಮುಖ ಭತ್ಯೆಗಳಲ್ಲಿ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರಭಾರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ ಪ್ರಯಾಣ ಭತ್ಯೆ ದಿನಭತ್ಯೆ ವರ್ಗಾವಣೆ ಭತ್ಯೆ ಹೊರ ರಾಜ್ಯ ಭತ್ಯೆ, ಸಮವಸ್ತ್ರ ಭತ್ಯೆ ಮತ್ತು ವಿಶೇಷ (ಕರ್ತವ್ಯ) ಭತ್ಯೆಗಳು ಒಳಗೊಂಡಿವೆ.

ಎಲ್ಲಾ ಇಲಾಖೆಗಳ ಪತ್ರಾಂಕಿತ ಆಪ್ತ ಸಹಾಯಕರು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಲಿಫ್ಟ್ ಅಟೆಂಡರ್ ಗಳಂತಹ ನಿರ್ದಿಷ್ಟ ಪ್ರವರ್ಗಗಳ ನೌಕರರಿಗೆ ನೀಡುವ ವಿಶೇಷ ಭತ್ಯೆಗಳಲ್ಲಿ ಏಕರೂಪತೆ ಇದೆ. ಪೊಲೀಸ್ ಇಲಾಖೆಯಲ್ಲಿ ನೀಡಲಾಗುತ್ತಿರುವ ಕಷ್ಟ ಪರಿಹಾರ ಭತ್ಯೆ, ಪಡಿತರ ಭತ್ಯೆ, ಸಾರಿಗೆ ಭತ್ಯೆ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿನ ಅಧಿಕಾರಿಗಳಿಗೆ ನೀಡಲಾತ್ತಿರುವ ಉಡುಪಿನ ಭತ್ಯೆ ಮತ್ತು ನಾನ್-ಪ್ರಾಕ್ಟಿಸಿಂಗ್ ಭತ್ಯೆಗಳಂತಹ ಇನ್ನು ಕೆಲವು ಭತ್ಯೆಗಳು ಕೆಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೀಮಿತ ವರ್ಗದ ನೌಕರರಿಗೆ ನಿರ್ದಿಷ್ಟವಾಗಿರುತ್ತದೆ.
ಸಾಮಾನ್ಯ ಪರಿಶೀಲನಾ ವಿಧಾನ: ಪ್ರಚಲಿತವಿರುವ ಭತ್ಯೆಯ ದರಗಳಲ್ಲಿ ಹೆಚ್ಚಳ, ಹೊಸ ಭತ್ಯೆಗಳ ಮಂಜೂರಾತಿ ಮತ್ತು ಜಾರಿಯಲ್ಲಿರುವ ಕೆಲವು ಭತ್ಯೆಗಳನ್ನು ಹೊಸ ವರ್ಗದ ನೌಕರರಿಗೆ ವಿಸ್ತರಿಸುವುದಕ್ಕಾಗಿ ಇಲಾಖೆಗಳ ಮುಖ್ಯಸ್ಥರಿಂದ, ನೌಕರರ ಸಂಘಗಳಿಂದ ಮತ್ತು ವೈಯಕ್ತಿಕವಾಗಿ ನೌಕರರಿಂದ ಹಲವಾರು ಕೋರಿಕೆ ಮತ್ತು ಮನವಿಗಳನ್ನು ಆಯೋಗವು ಸ್ವೀಕರಿಸಿದ. ಕೆಲ ಭತ್ಯೆಗಳನ್ನು ತರ್ಕಬದ್ಧಗೊಳಿಸಲು ಸಹ ಕೆಲವು ಸಲಹೆಗಳು ಬಂದಿರುತ್ತವೆ.
2011ರ ಅಧಿಕಾರಿ ವೇತನ ಸಮಿತಿಯು, ರಾಜ್ಯ ಸರ್ಕಾರಿ ನೌಕರರಿಗೆ ಅಂದು ಜಾರಿಯಲ್ಲಿದ್ದ ಭತ್ಯೆಗಳ ವಿಸ್ತೃತ ಪರಿಷ್ಕರಣೆಯನ್ನು ಕೈಗೊಂಡು, ಭತ್ಯೆ ಅಥವಾ ವಿಶೇಷ ಭತ್ಯೆಗಳನ್ನು ಸಮರ್ಥಿಸುವ ವಿವಿಧ ಪರಿಸ್ಥಿತಿಗಳನ್ನು ಪಟ್ಟಿ ಮಾಡಿರುತ್ತದೆ. ಸಮಿತಿಯು ತಾನು ಗುರುತಿಸಿದ ಮಾನದಂಡಗಳ ಆಧಾರದ ಮೇಲೆ ಕೆಲವು ಭತ್ಯೆಗಳಲ್ಲಿ ಹೆಚ್ಚಳವನ್ನು ಕೆಲವು ಹೊಸ ಭತ್ಯೆಗಳನ್ನು ಮತ್ತು ಸಮರ್ಥನೀಯವಲ್ಲದ ಕೆಲವು ಭತ್ಯೆಗಳನ್ನು ರದ್ದುಗೊಳಿಸಲು ಶಿಫಾರಸ್ಸು ಮಾಡಿರುತ್ತದೆ.
ಸಮಿತಿಯು ಭತ್ಯೆಗಳನ್ನು ಮೂಲ ವೇತನದ ಶೇಕಡಾವಾರು ಅಥವಾ ಅನುಪಾತಕ್ಕನುಸಾರವಾಗಿ ನಿಗದಿಪಡಿಸುವ ಬದಲಾಗಿ ಸ್ಥಿರ ಪ್ರಮಾಣದಲ್ಲಿ ನಿಗದಿಪಡಿಸುವ ಮೂಲಕ ಭತ್ಯೆಗಳ ಮಂಜೂರಾತಿ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿರುತ್ತದೆ. ಇಂದು ಅಸ್ತಿತ್ವದಲ್ಲಿರುವ ಬಹುತೇಕ ಭತ್ಯೆಗಳು 2011ರಲ್ಲಿ ಉಳಿಸಿಕೊಳ್ಳಲಾದ ಅಥವಾ ಹೊಸದಾಗಿ ಜಾರಿಗೊಳಿಸಲಾದವುಗಳೇ ಆಗಿರುತ್ತದೆ. ನಂತರ ಕೆಲವು ಭತ್ಯೆಗಳನ್ನು ಸ್ವತಃ ಸರ್ಕಾರವೇ ಮಂಜೂರು ಮಾಡಿರುತ್ತದೆ. 2011ರ ಸಮಿತಿಯು ನಿರ್ಧರಿಸಿದ ಮಾನದಂಡವನ್ನೇ ಪ್ರಮುಖವಾಗಿ ಉಪಯೋಗಿಸಿಕೊಂಡು 6ನೇ ರಾಜ್ಯ ವೇತನ ಆಯೋಗವು ಕೆಲವು ಪರಿಷ್ಕರಣೆ ಮತ್ತು ಬದಲಾವಣೆಗಳನ್ನು ಶಿಫಾರಸ್ಸು ಮಾಡಿರುತ್ತದೆ.
ಈ ಆಯೋಗವು ತನ್ನ ಶಿಫಾರಸ್ಸುಗಳನ್ನು ರೂಪಿಸುವಲ್ಲಿ ವಿವಿಧ ಭತ್ಯೆಗಳ ಕುರಿತು ವಿಸ್ತೃತ ಪರಿಶೀಲನೆಯನ್ನು ಕೈಗೊಂಡಿರುತ್ತದೆ. ಸಂಬಂಧಪಟ್ಟ ಇಲಾಖೆಗಳ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದರ ಮೂಲಕ ಕೆಲವು ಭತ್ಯೆಗಳು ಮತ್ತು ಸೌಲಭ್ಯಗಳನ್ನು ತರ್ಕಬದ್ಧಗೊಳಿಸಲಾಗಿದೆ. ಆಯೋಗವು ವಿವಿಧ ಭತ್ಯೆಗಳ ದರಗಳ ಪರಿಷ್ಕರಣೆಯ ಶಿಫಾರಸ್ಸನ್ನು ಮಾಡುವಾಗ ಜೀವನ ವೆಚ್ಚ, ವಸತಿ ವೆಚ್ಚ ಮತ್ತು ಸಾರಿಗೆ ದರಗಳಲ್ಲಿನ ಹೆಚ್ಚಳದ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿದೆ.
ಈ ಆಯೋಗದ ಹೊಸ ವೇತನ ರಚನೆಯ ಶಿಫಾರಸ್ಸಿನ ಪರಿಣಾಮವಾಗಿ ಆಗುವ ವೇತನ ಮತ್ತು ಉಪಲಬ್ಧಗಳ ಪ್ರಮಾಣದಲ್ಲಿನ ಹೆಚ್ಚಳ, ಭತ್ಯೆ ಮಂಜೂರು ಮಾಡಿದ ಮತ್ತು ಹಿಂದಿನ ಪರಿಷ್ಕರಣೆಯ ದಿನಾಂಕ, ನೆರೆಯ ರಾಜ್ಯಗಳಲ್ಲಿ ಮತ್ತು ಭಾರತ ಸರ್ಕಾರದಲ್ಲಿ ಸಮಾನ ಭತ್ಯೆಗಳ ಪ್ರಚಲಿತ ದರಗಳು, ಜಾರಿಯಲ್ಲಿರುವ ಭತ್ಯೆಯ ಪ್ರಮಾಣದ ಸಮರ್ಪಕತೆ ಮತ್ತು ಪರಿಷ್ಕರಣೆಯಿಂದ ರಾಜ್ಯ ಸರ್ಕಾರದ ಮೇಲೆ ಉಂಟಾಗಬಹುದಾದ ಆರ್ಥಿಕ ಪರಿಣಾಮವನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಹೊಸ ರೀತಿಯ ಭತ್ಯೆಗಳ ಮಂಜೂರಾತಿ ಮತ್ತು ಕೆಲವು ಜಾರಿಯಲ್ಲಿರುವ ಭತ್ಯೆಗಳನ್ನು ಹೊಸ ವರ್ಗದ ನೌಕರರಿಗೆ ವಿಸ್ತರಿಸುವ ಕುರಿತು ಸ್ವೀಕರಿಸಲಾದ ಮನವಿಗಳನ್ನು ಪ್ರತ್ಯೇಕವಾಗಿ ಪರಾಮರ್ಶಿಸಲಾಗಿದೆ ಮತ್ತು ಪ್ರತಿ ಇಲಾಖೆಗಳ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಶಿಫಾರಸ್ಸು ಮಾಡಿರುವ ಸಂದರ್ಭದಲ್ಲಿ ಚರ್ಚಿಸಲಾಗಿದೆ.
ಭತ್ಯೆಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಮತ್ತು ವಿಶೇಷ ಭತ್ಯೆಗಳ ಸಂದರ್ಭದಲ್ಲಿ ನಿರ್ದಿಷ್ಟವಾಗಿ ವಿಷಯಕ್ಕೆ ಸಂಬಂಧ ಪಟ್ಟಂತೆ ಗಣನೀಯ ತಾರ್ಕಿಕ ಕಾರಣಗಳಿಲ್ಲದೆ ಮತ್ತು ಆಯಾ ವೃಂದದ ಕಾರ್ಯಸ್ವರೂಪಕ್ಕೆ ನಿರ್ದಿಷ್ಟವಾಗಿ ಸಂಬಂಧಿಸದ ಕೆಲವು ಭತ್ಯೆಗಳನ್ನು ಜಾರಿ ಮಾಡಿರುವುದು ಆಯೋಗವು ಗಮನಿಸಿದೆ. ಅವುಗಳ ಅಸ್ತಿತ್ವವು ಸಾಕಷ್ಟು ಬಾರಿ, ಆಯಾ ನೌಕರರ ಸಂಘಗಳು ಆಡಳಿತದ ಮೇಲೆ ಬೀರುವ ಒತ್ತಡಕ್ಕೆ ನೇರ ಸಂಬಂಧ ಹೊಂದಿರುವುದು ಕಂಡುಬರುತ್ತದೆ. ನಿರಂತರವಾಗಿ ವಿಸ್ತರಣೆಗೊಳ್ಳುತ್ತಿರುವ ಭತ್ಯೆಗಳ ಫಲಾನುಭವಿಗಳ ಪಟ್ಟಿಗೆ ಯಾವುದೇ ವೇತನ ಆಯೋಗ/ ಸಮಿತಿಗಳ ಶಿಫಾರಸ್ಸುಗಳಿಲ್ಲದ ಸ್ವತಂತ್ರವಾಗಿ ಕಾರ್ಯಕಾರಿ ಆದೇಶಗಳ ಮೂಲಕ ಹೊಸ ಸೇರ್ಪಡೆಗಳಾಗುತ್ತಿರುವುದು ಕಂಡು ಬಂದಿರುತ್ತದೆ.
ಅದೇ ರೀತಿ, ವೇತನ ಆಯೋಗ/ ಸಮಿತಿಗಳ ವರದಿಗಳ ನಡುವಿನ ಅಂತರದಲ್ಲಿ ಸರ್ಕಾರವು ಕೆಲ ನಿರ್ದಿಷ್ಟ ವರ್ಗಗಳ ನೌಕರರಿಗೆ ಭತ್ಯೆಗಳನ್ನು ಪರಿಷ್ಕರಣೆ ಮಾಡಿರುತ್ತದೆ ಮತ್ತು ಹೊಸ ಭತ್ಯೆಗಳನ್ನು ಜಾರಿಗೊಳಿಸಿರುತ್ತದೆ. ಈ ಕಾರಣಕ್ಕಾಗಿ, ನಾವು ಯಾವುದೇ ವಿಶೇಷ ಭತ್ಯೆಯನ್ನು ಮುಂದುವರೆಸಲು ಅಥವಾ ರದ್ದುಗೊಳಿಸುವ ಅಗತ್ಯತೆ ಬಗ್ಗೆ ಚರ್ಚಿಸಿರುವುದಿಲ್ಲ. ಆದರೆ, ಈ ಹಿಂದೆ ನಂತರದಲ್ಲಿ ಆಗಿರುವ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಚಲಿತ ಭತ್ಯೆಗಳ ದರವನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ.
ಯಾವುದೇ ಭತ್ಯೆಯನ್ನು ಜಾರಿಗೊಳಿಸಲು ಅಥವ ಪರಿಷ್ಕರಿಸಲು ನಿರ್ದಿಷ್ಟ ಕಾರ್ಯ ವಿಧಾನ ಇಲ್ಲದೇ ಇರುವಂತೆಯೇ ಪ್ರಸ್ತುತ ಜಾರಿಯಲ್ಲಿದ್ದು, ಈಗ ಅವಶ್ಯಕತೆ ಇಲ್ಲದಿರುವಂತಹ ಭತ್ಯೆಗಳು ಹಾಗೂ ಸೌಲಭ್ಯಗಳನ್ನು ರದ್ದುಗೊಳಿಸಲು ಸಹ ಯಾವುದೇ ವ್ಯವಸ್ಥೆ ಕಂಡು ಬರುತ್ತಿಲ್ಲ. ಆರ್ಥಿಕ ಇಲಾಖೆ, ಸಿಆಸುಇಲಾಖೆ ಮತ್ತು ಸಂಬಂಧಪಟ್ಟ ಆಡಳಿತಾತ್ಮಕ ಇಲಾಖೆಗಳನ್ನು ಒಳಗೊಂಡ ಸ್ಥಾಯಿ ಸಮಿತಿಯು ಸಂಬಂಧಪಟ್ಟ ಇಲಾಖೆಯಲ್ಲಿ ಜಾರಿಯಲ್ಲಿರುವ ಭತ್ಯೆಗಳನ್ನು ನಿಯತವಾಗಿ ಪುನರ್ ವಿಮರ್ಶೆ ಮಾಡಿ ಅಗತ್ಯವಲ್ಲದವುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂಬುದು ಆಯೋಗದ ಅಭಿಪ್ರಾಯವಾಗಿದೆ. ಯಾವುದೇ ಸಂದರ್ಭದಲ್ಲಿ ಈ ಸಮಿತಿಯು ನಿರ್ದಿಷ್ಟ ಶಿಫಾರಸಿನ ಹೊರತು ಯಾವುದೇ ಹೊಸ ಭತ್ಯೆಯನ್ನು ಜಾರಿಗೊಳಿಸತಕ್ಕದ್ದಲ್ಲ ಎಂದು ವರದಿ ಶಿಫಾರಸು ಮಾಡಿದೆ.
-
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್












Click it and Unblock the Notifications