ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ವೇತನ ಆಯೋಗ; ಕಚೇರಿಗೆ ಸ್ಥಳ ನಿಗದಿ ಮಾಡಿ ಆದೇಶ

|
Google Oneindia Kannada News

ಬೆಂಗಳೂರು, ಡಿಸೆಂಬರ್ 04; 7ನೇ ವೇತನ ಆಯೋಗ ರಚನೆ ಮಾಡಿರುವ ಕರ್ನಾಟಕ ಸರ್ಕಾರ ಅದರ ಕಚೇರಿಗೆ ತಾತ್ಕಾಲಿಕವಾಗಿ ಸ್ಥಳ ನಿಗದಿ ಮಾಡಿದೆ. ಆಯೋಗಕ್ಕೆ 44 ಹುದ್ದೆಗಳನ್ನು ಸಹ ಸೃಜಿಸಿ ಶುಕ್ರವಾರ ಆದೇಶ ಹೊರಡಿಸಲಾಗಿತ್ತು.

ಸರ್ಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೈಲಾ ಆರ್. ಗೊರವರ ಈ ಕುರಿತು ಆದೇಶ ಹೊರಡಿಸಿದ್ದಾರೆ. 7ನೇ ವೇತನ ಆಯೋಗ ಸಮಿತಿಯು ಕಾರ್ಯ ನಿರ್ವಹಿಸಲು ಔಷಧ ನಿಯಂತ್ರಣ ಇಲಾಖೆಯ ಜಾಗವನ್ನು ತಾತ್ಕಾಲಿಕವಾಗಿ ನೀಡಬೇಕು ಎಂದು ಆದೇಶಿಸಲಾಗಿದೆ.

7ನೇ ವೇತನ ಆಯೋಗ, ಸರ್ಕಾರದ ಮತ್ತೊಂದು ಆದೇಶ 7ನೇ ವೇತನ ಆಯೋಗ, ಸರ್ಕಾರದ ಮತ್ತೊಂದು ಆದೇಶ

ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಏಳನೆಯ ವೇತನ ಆಯೋಗವನ್ನು ರಚಿಸಲಾಗಿರುತ್ತದೆ. ಆಯೋಗವು ಸುಗುಮವಾಗಿ ಕಾರ್ಯನಿರ್ವಹಿಸಲು ಸುಸಜ್ಜಿತವಾದ ಕಟ್ಟಡದ ಅವಶ್ಯಕತೆಯಿದ್ದು, ಸದರಿ ಆಯೋಗವು ಅಧ್ಯಕ್ಷರು, ಇಬ್ಬರು ಸದಸ್ಯರು ಮತ್ತು ಕಾರ್ಯದರ್ಶಿ ಒಳಗೊಂಡಿದ್ದು, ಅವರುಗಳಿಗೆ ಒಂದು ಸಭಾಂಗಣ ಕೊಠಡಿ, ಪ್ರೇಕ್ಷಕರ ಕೊಠಡಿ ಮತ್ತು ಆರು ಕೊಠಡಿಗಳ ಅವಶ್ಯಕತೆ ಇದೆ.

7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರ ನಿರೀಕ್ಷೆಗಳು 7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರ ನಿರೀಕ್ಷೆಗಳು

7th Pay Commission Of Karnataka Office Address

ಸುಸಜ್ಜಿತವಾದ ಕಟ್ಟಡ ಒಳಗೊಂಡ ಕೊಠಡಿಗಳನ್ನು ಮತ್ತು ಇತರೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅವಶ್ಯಕತೆ ಇರುವುದರಿಂದ ಹಳೆಯ Drug Controller ಕಚೇರಿಯನ್ನು ತಾತ್ಕಾಲಿಕವಾಗಿ ಆಯೋಗ ಜಾರಿಯಲ್ಲಿರುವವರೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸರ್ಕಾರಿ ನೌಕರರಿಗೆ ಸಿಹಿಸುದ್ದಿ; 7ನೇ ವೇತನ ಆಯೋಗಕ್ಕೆ ಅಧ್ಯಕ್ಷರ ನೇಮಕ ಸರ್ಕಾರಿ ನೌಕರರಿಗೆ ಸಿಹಿಸುದ್ದಿ; 7ನೇ ವೇತನ ಆಯೋಗಕ್ಕೆ ಅಧ್ಯಕ್ಷರ ನೇಮಕ

ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ ಇವರ ಪತ್ರದಲ್ಲಿ ಬೆಂಗಳೂರು ಔಷಧ ಪರೀಕ್ಷಾ ಪ್ರಯೋಗಾಲಯ, ಕಟ್ಟಡದಲ್ಲಿನ 03ನೇ ಮಹಡಿಯಲ್ಲಿ ಲಭ್ಯವಿರುವ ಸ್ಥಳವಕಾಶದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಮಾಡ್ಯೂಲರ್ ಲ್ಯಾಗ್ 3 ವಿಭಾಗಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿರುತ್ತದೆ.

ಆ ಸಂಬಂಧ ಟೆಂಡರ್ ಪುಕ್ರಿಯೆ ಸಹ ಪ್ರಾರಂಭಿಸಲಾಗಿದೆ. ಆದ್ದರಿಂದ 3ನೇ ಮಹಡಿಯ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿನ ಪೂರ್ವ ಹಾಗೂ ಉತ್ತರಭಾಗದಲ್ಲಿನ ಈ ಹಿಂದಿನ ಔಷಧ ನಿಯಂತ್ರಕರ ಆಡಳಿತ ವಿಭಾಗದಲ್ಲಿನ ಕೊಠಡಿಗಳನ್ನು ಮಾತ್ರ ತಾತ್ಕಾಲಿಕವಾಗಿ 7ನೇ ವೇತನ ಆಯೋಗಕ್ಕೆ ನೀಡುವಂತೆ ಉಲ್ಲೇಖಿಸಿರುತ್ತಾರೆ.

7th Pay Commission Of Karnataka Office Address

ಈ ಹಿನ್ನಲೆಯಲ್ಲಿ ಔಷಧ ನಿಯಂತ್ರಕರ ಹಳೆಯ ಕಚೇರಿ ಕಟ್ಟಡದಲ್ಲಿನ 3ನೇ ಮಹಡಿಯಲ್ಲಿ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಲಭ್ಯವಿರುವ ಸ್ಥಳದಲ್ಲಿ ಪೂರ್ವ ಹಾಗೂ ಉತ್ತರ ಭಾಗದಲ್ಲಿನ 2500 ಚ.ಅಡಿ & Corridor ಹಾಗೂ ಕೊಠಡಿಗಳನ್ನು 7ನೇ ವೇತನ ಆಯೋಗಕ್ಕೆ ತಾತ್ಕಾಲಿಕವಾಗಿ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಹಮತಿಸಿದೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಔಷಧ ನಿಯಂತ್ರಕರ ಹಳೆಯ ಕಚೇರಿ ಕಟ್ಟಡದಲ್ಲಿನ 03ನೇ ಮಹಡಿಯಲ್ಲಿ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಲಭ್ಯವಿರುವ ಸ್ಥಳದಲ್ಲಿ ಪೂರ್ವ ಹಾಗೂ ಉತ್ತರ ಭಾಗದಲ್ಲಿನ 2500 ಚ.ಅಡಿ & Corridor ಹಾಗೂ ಕೊಠಡಿಗಳನ್ನು 7ನೇ ವೇತನ ಆಯೋಗಕ್ಕೆ ತಾತ್ಕಾಲಿಕವಾಗಿ ಈ ಕೆಳಕಂಡ ಷರತ್ತುಗಳೊಂದಿಗೆ ಒದಗಿಸಿ ಆದೇಶ ನೀಡಲಾಗಿದೆ.

ಷರತ್ತುಗಳು

* 7ನೇ ವೇತನ ಆಯೋಗವು ಜಾರಿಯಲ್ಲಿರುವ ತನಕ ಕಚೇರಿಯನ್ನು ಬಳಸಿಕೊಳ್ಳತಕ್ಕದ್ದು.

* ಲೋಕೋಪಯೋಗಿ ಇಲಾಖೆಯು ನಿಗದಿಪಡಿಸುವ ಬಾಡಿಗೆ ದರವನ್ನು ಪಾವತಿಸತಕ್ಕದ್ದು.

English summary
Karnataka government formed 7th pay commission lead by Sudhakar Rao. Now office set up for the commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X