7ನೇ ವೇತನ ಆಯೋಗ: ಪ್ರತಿ ಸರ್ಕಾರದಲ್ಲೂ ಕರ್ನಾಟಕದ ಸರ್ಕಾರಿ ನೌಕರರಿಗೆ ಯಾಕೆ ಹಿನ್ನಡೆ?

ಯಾವುದೇ ಸರ್ಕಾರ ಬಂದರೂ ಸರಿ, ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆ ಮಾಡೋದಕ್ಕೆ ಹಿಂದೆ & ಮುಂದೆ ಯೋಚನೆ ಮಾಡುತ್ತವೆ ಅನ್ನೋದು ರಾಜ್ಯದ ಸರ್ಕಾರಿ ನೌಕರರ ಆರೋಪ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೂಡ ಇದೇ ರೀತಿ ಸರ್ಕಾರಿ ನೌಕರರು ಮುನಿಸಿಕೊಂಡು, ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ತಮ್ಮ ಬಲ ಪ್ರದರ್ಶನ ಮಾಡಿದ್ದರು. ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಅಧಿಕಾರಕ್ಕೆ ಬಂದರೂ ಸರ್ಕಾರಿ ನೌಕರರ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

7th Pay Commission Karnataka Govt Employees May Select A Big Decision

ಕೇಂದ್ರದ ಸರ್ಕಾರಿ ನೌಕರರಿಗೆ ಹೋಲಿಕೆ ಮಾಡಿದರೆ, ಕರ್ನಾಟಕದ ಸರ್ಕಾರಿ ನೌಕರರಿಗೆ ಈ ಹಿಂದಿನಿಂದ ಕೂಡ ಸೂಕ್ತ ಸೌಲಭ್ಯ ಇಲ್ಲ. ಹಾಗೇ ಸೂಕ್ತ ಸಂಬಳ ಅಂದ್ರೆ ವೇತನವು ಕೂಡ ಸಿಗುತ್ತಿಲ್ಲ ಎಂಬುದು ರಾಜ್ಯ ಸರ್ಕಾರಿ ನೌಕರರ ಆರೋಪ. ಇದೇ ಕಾರಣಕ್ಕೆ ಬಿಜೆಪಿ & ಕಾಂಗ್ರೆಸ್ ಎರಡೂ ಪಕ್ಷಗಳ ಸರ್ಕಾರ ಇದ್ದಾಗಲೂ ಸರ್ಕಾರಿ ನೌಕರರು ಭಾರಿ ಆಕ್ರೋಶ ಹೊರ ಹಾಕಿ, ಹೋರಾಟ ಕೂಡ ನಡೆಸಿದ್ದಾರೆ. ಅಲ್ಲದೆ ಈ ಹಿಂದೆ 2023ರಲ್ಲಿ ಬಿಜೆಪಿ ಸರ್ಕಾರ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಲು ಸರ್ಕಾರಿ ನೌಕರರ ಸಿಟ್ಟು ಕೂಡ ಒಂದು ಕಾರಣ ಆಗಿತ್ತು. ಹೀಗಾಗಿ ಹೊಸ ಸರ್ಕಾರದ ಮೇಲೆ ನೌಕರರು ಹಲವು ನಿರೀಕ್ಷೆ ಇಟ್ಟುಕೊಂಡಿದ್ದರು.

ಸರ್ಕಾರಿ ನೌಕರರ ನಿರೀಕ್ಷೆ ಸುಳ್ಳಾಯ್ತಾ?

ಈಗ ಸರ್ಕಾರಿ ನೌಕರರ ಪರಿಸ್ಥಿತಿ ಮುಳ್ಳಿನ ಮೇಲೆ ಸಿಲುಕಿದ ಬಟ್ಟೆಯ ರೀತಿ ಆಗಿದೆ. ಯಾಕೆ ಅಂದ್ರೆ ಒಂದು ಕಡೆ ಸರ್ಕಾರದ ವಿರುದ್ಧ ಹೋರಾಟದ ಹಾದಿಯನ್ನು ನೇರವಾಗಿ ತುಳಿಯಲು ಆಗುತ್ತಿಲ್ಲ. ಇನ್ನೊಂದು ಕಡೆ ತಮ್ಮ ಬೇಡಿಕೆಗಳನ್ನು ಮರೆತು ಕೆಲಸ ಮಾಡುವುದುಕ್ಕೆ ಕೂಡ ಆಗುತ್ತಿಲ್ಲ. ಇದೇ ಕಾರಣಕ್ಕೆ ಈಗ, ಸರ್ಕಾರಿ ನೌಕರರ ನಿರೀಕ್ಷೆ ಸುಳ್ಳಾಯ್ತಾ? ಎಂಬ ಪ್ರಶ್ನೆಯೂ ಕಾಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಸರ್ಕಾರಿ ನೌಕರರು ಪ್ರತಿಭಟನೆ ಮಾಡಿಬಿಟ್ಟಾರು? ಅಂತಾ ಸರ್ಕಾರಕ್ಕೆ ಆತಂಕ ಕೂಡ ಇದೆ.

7th Pay Commission Karnataka Govt Employees May Select A Big Decision

11 ದಿನಕ್ಕೆ 7ನೇ ವೇತನ ಆಯೋಗದ...

7ನೇ ರಾಜ್ಯ ವೇತನ ಆಯೋಗದ ಅವಧಿ, 2023 ನವೆಂಬರ್‌ ತಿಂಗಳಲ್ಲಿ ಕೊನೆ ಆಗಬೇಕಿತ್ತು. ಆದ್ರೆ ಕೆ. ಸುಧಾಕರ್ ನೇತೃತ್ವದ ತ್ರಿ ಸದಸ್ಯರ 7ನೇ ರಾಜ್ಯ ವೇತನ ಆಯೋಗ ಅವಧಿ, ಅಂದಿನ ಸರ್ಕಾರ ಮುಂದೂಡಿಕೆ ಮಾಡಿತ್ತು. ಹೀಗೆ ವೇತನ ಆಯೋಗ ಮುಂದೂಡಿಕೆ ಆದ ನಂತರ, 7ನೇ ವೇತನ ಆಯೋಗ ಅವಧಿ 15/3/2024 ರ ತನಕ ವಿಸ್ತರಣೆ ಮಾಡಲಾಗಿತ್ತು. ಇದೀಗ, ಇನ್ನೇನು ಕೇಲವೇ ದಿನದಲ್ಲಿ ವೇತನ ಆಯೋಗದ ಅವಧಿ ಮುಗಿಯಲಿದ್ದು ವರದಿ ಸಲ್ಲಿಸುವ ನಿರೀಕ್ಷೆ ಇದೆ. ಆದರೆ ಅದಕ್ಕೂ ಮೊದಲೇ ಸರ್ಕಾರಿ ನೌಕರರ ಅಸಮಾಧಾನವೂ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಯಾಕೆ ಅಂದ್ರಾ? ಮುಂದೆ ಓದಿ.

ಲೋಕಸಭೆ ಚುನಾವಣೆಗೆ ಮೊದಲೇ ಘೋಷಣೆ?

ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಕ್ಕರೆ ಈಗಲೇ ಸಿಗಬೇಕು. ಇಲ್ಲವಾದ್ರೆ ಮಾರ್ಚ್ 10ರ ಬಳಿಕ ಸರ್ಕಾರಿ ನೌಕರರ ನಿರೀಕ್ಷೆ ಚೂರು ಚೂರು ಆಗುವ ಸಾಧ್ಯತೆ ದಟ್ಟವಾಗಿದೆ. ಯಾಕೆ ಅಂದ್ರೆ, ಮಾರ್ಚ್ 10ರ ಬಳಿಕ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ 7ನೇ ವೇತನ ಆಯೋಗದ ವರದಿಯನ್ನ ಆದಷ್ಟು ಬೇಗ ತರಿಸಿಕೊಳ್ಳಿ. ಹಾಗೇ ಅದನ್ನ ಜಾರಿಗೆ ತನ್ನಿ ಎಂಬ ಒತ್ತಾಯ ಕೇಳಿಬಂದಿದೆ. ಅಕಸ್ಮಾತ್ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ರೆ, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ಆಗ ಸರ್ಕಾರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಡಲು ಆಗಲ್ಲ.

ಹೀಗೆ ಕರ್ನಾಟಕದಲ್ಲಿ ಇದೀಗ 7ನೇ ವೇತನ ಆಯೋಗದ ವರದಿ ವಿಚಾರ ದೊಡ್ಡ ಮಟ್ಟಿನಲ್ಲಿ ಸದ್ದು ಮಾಡುತ್ತಿದೆ. ಮತ್ತೊಂದು ಕಡೆ 7ನೇ ವೇತನ ಆಯೋಗದ ಅವಧಿ ಮುಗಿಯಲು ಈಗ ಕೇವಲ 11 ದಿನ ಬಾಕಿ ಉಳಿದಿದೆ. ಹೀಗಾಗಿಯೇ ಎಲ್ಲಾ ಪ್ರಶ್ನೆಗಳಿಗೆ ಇನ್ನು ಕೆಲವೇ ದಿನದಲ್ಲಿ ಪಕ್ಕಾ ಉತ್ತರ ಸಿಗುವ ನಿರೀಕ್ಷೆ ಇದೆ.

ಸರ್ಕಾರಿ ನೌಕರರ ನಿರೀಕ್ಷೆ ಸುಳ್ಳಾಯ್ತಾ?

ಈಗ ಸರ್ಕಾರಿ ನೌಕರರ ಪರಿಸ್ಥಿತಿ ಮುಳ್ಳಿನ ಮೇಲೆ ಸಿಲುಕಿದ ಬಟ್ಟೆಯ ರೀತಿ ಆಗಿದೆ. ಯಾಕೆ ಅಂದ್ರೆ ಒಂದು ಕಡೆ ಸರ್ಕಾರದ ವಿರುದ್ಧ ಹೋರಾಟದ ಹಾದಿಯನ್ನು ನೇರವಾಗಿ ತುಳಿಯಲು ಆಗುತ್ತಿಲ್ಲ. ಇನ್ನೊಂದು ಕಡೆ ತಮ್ಮ ಬೇಡಿಕೆಗಳನ್ನು ಮರೆತು ಕೆಲಸ ಮಾಡುವುದುಕ್ಕೆ ಕೂಡ ಆಗುತ್ತಿಲ್ಲ. ಇದೇ ಕಾರಣಕ್ಕೆ ಈಗ, ಸರ್ಕಾರಿ ನೌಕರರ ನಿರೀಕ್ಷೆ ಸುಳ್ಳಾಯ್ತಾ? ಎಂಬ ಪ್ರಶ್ನೆಯೂ ಕಾಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಸರ್ಕಾರಿ ನೌಕರರು ಪ್ರತಿಭಟನೆ ಮಾಡಿಬಿಟ್ಟಾರು? ಅಂತಾ ಸರ್ಕಾರಕ್ಕೆ ಆತಂಕ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+