Get Updates
Get notified of breaking news, exclusive insights, and must-see stories!

7th Pay Commission: ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ರಾಜ್ಯವ್ಯಾಪಿ ಮುಷ್ಕರ: ಸರ್ಕಾರಕ್ಕೆ ಎಚ್ಚರಿಕೆ

ಬೆಂಗಳೂರು, ಫೆಬ್ರವರಿ 28: ಕರ್ನಾಟಕದ ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಇಟ್ಟಿರುವ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗದ (7th Pay Commission) ಜಾರಿ ಕುರಿತು ಭರವಸೆಗಳನ್ನು ಕೊಟ್ಟಿದ್ದಾರೆ. ಈ ಆಯೋಗ ಜಾರಿ ಮಾಡುವ ನಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 'ರಾಜ್ಯ ಸರ್ಕಾರಿ ನೌಕರರ ಸಮ್ಮೇಳನ'ದಲ್ಲಿ ಸಂಘದ ಅಧ್ಯಕ್ಷರು ಮಾತನಾಡಿದರು. ಏಳನೇ ವೇತನ ಜಾರಿ ಕುರಿತು ಆಗ್ರಹಿಸಿರುವ ಅವರು, ನೌಕರರು ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಸರ್ಕಾರ ನಮಗೆ ನೀಡಿರುವ ಗಡುವಿನ ವರೆಗೂ ನಾವು ಶಾಂತರಾಗಿ ಕಾಯೋಣ ಎಂದರು.

7th Pay Commission Karnataka Govt Employees Decide to Strike If not Fulfill Demands

ಗುಡುವಿನೊಳಗೆ ಬೇಡಿಕೆ ಈಡೇರಿಕೆಗೆ ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊಳ್ಳದಿದ್ದರೆ ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ ಸಂದೇಶವನ್ನು ಅವರು ಈ ಮೂಲಕ ರವಾನಿಸಿದರು.

ಹೋರಾಟಕ್ಕೆ ಸಮ್ಮೇಳನ ಮೊದಲ ಹೆಜ್ಜೆ-ಮುನ್ನೂಡಿ

ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಸದರಿ ಸಮ್ಮೇಳನ ಮೂಲಕ ಪ್ರಾಥಮಿಕ ಹೆಜ್ಜೆ ಇಡಲಾಗಿದೆ. ಮುನ್ನೂಡಿ ಬರೆಯಲಾಗಿದೆ. ನೌಕರರ ಹೋರಾಟಕ್ಕೆ ಇಲ್ಲಿಯವರೆಗೆ ಸೋಲು ಆಗಿಲ್ಲ ಎಂದು ನೌಕರರಿಗೆ ಅವರು ಧೈರ್ಯ ತುಂಬಿದರು.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗ ಜಾರಿಯ ಭರವಸೆ ನೀಡಿದ್ದಾರೆ. ಗಡುವಿನೊಳಗೆ ನಮ್ಮ ಬೇಡಿಕೆಗಳು ಈಡೇರಿಸದಿದ್ದಲ್ಲಿ, ಕರ್ನಾಟಕದಾದ್ಯಂತ ಮುಂದಿನ ದಿನಗಳಲ್ಲಿ ಮೊದಲು ಅನಿರ್ದಿಷ್ಟಾವಧಿಗೆ ಪ್ರತಿಭಟನೆ ಆರಂಭಿಸಲಾಗುವುದು. ಅದಕ್ಕೂ ಸರ್ಕಾರ ಜಗ್ಗದಿದ್ದಲ್ಲಿ ರಾಜ್ಯವ್ಯಾಪಿ ಮುಷ್ಕರ ಹೂಡಲಾಗುವುದು ಭವಿಷ್ಯದ ತಮ್ಮ ನಿರ್ಧಾರ ಕುರಿತು ಅವರು ಸಮ್ಮೇಳನದಲ್ಲಿ ಪ್ರಕಟಿಸಿದರು.

7th Pay Commission Karnataka Govt Employees Decide to Strike If not Fulfill Demands

ನೌಕರರ ಆಸೆ ನಿರಾಸೆ: ಆಕ್ರೋಶ

ಸಮ್ಮೇಳನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಏಳನೇ ವೇತನ ಆಯೋಗದ ವರದಿ ಜಾರಿ, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಲಕ್ಷಾಂತರ ನೌಕರರು ಆಶಯ ಹೊಂದಿದ್ದರು. ಆದರೆ ಅವರ ಆಸೆ ನಿರಾಸೆಯಾಗಿದೆ. ಸಿಎಂ ಭರವಸೆ ನೀಡಿದ್ದಾರೆ ಹೊರತು ಘೋಷಣೆ ಮಾಡಲಿಲ್ಲ.

ಸಮ್ಮೇಳನದಲ್ಲಿ ಸುಮಾರು ಎರಡು ಲಕ್ಷ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಜಾರಿ ಬಗ್ಗೆ ಮಾತನಾಡದೇ ಭರವಸೆ ಕೊಡುತ್ತಿದ್ದಂತೆ ಈ ಬಗ್ಗೆ ನಂಬಿಕೆ ಇಲ್ಲ ಎಂದು ಸಭಾಂಗಣದಿಂದ ಅನೇಕ ನೌಕರರು ಹೊರ ನಡೆದರು. ಸ್ಪಷ್ಟ ಭರವಸೆ, ನಿರ್ಧಾರ ಬಗ್ಗೆ ತಿಳಿಸದ ಮುಖ್ಯಮಂತ್ರಿಗಳ ವಿರುದ್ಧ ಆಕ್ರೊಶ ಹೊರ ಹಾಕಿದ ಘಟನೆ ನಡೆಯಿತು.

ಸಮ್ಮೇಳನದಲ್ಲಿ ರಾಜ್ಯ ಸರ್ಕಾರ ನೀಡಿರುವ ಭರವಸೆ ನೌಕರರಲ್ಲಿ ಸಮಾಧಾನ ತಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ರಾಜ್ಯವ್ಯಾಪಿ ಮುಷ್ಕರದ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರಿ ನೌಕರರ ಪೈಕಿ ಪುರುಷ ನೌಕರರ ಜೊತೆಗೆ ಮಹಿಳಾ ನೌಕರರು ತಮ್ಮದೇ ಆದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮುಂದೆ ಇಟ್ಟಿದ್ದಾರೆ.

ಸದ್ಯ ಏಳನೇ ರಾಜ್ಯ ವೇತನ ಆಯೋಗದ ಅವಧಿಯು ಇನ್ನೇನು ಪೂರ್ಣಗೊಳ್ಳುತ್ತದೆ. ಅಷ್ಟರಲ್ಲಿ ನಮ್ಮ ಬೇಡಿಕೆ ಈಡೇರಲಿ ಎಂಬ ಆಶಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+