7th Pay Commission: ಸರ್ಕಾರಿ ನೌಕರರಿಗೆ ಲೋಕಸಭೆ ಚುನಾವಣೆ ಬಳಿಕ ಭರ್ಜರಿ ಸಿಹಿಸುದ್ದಿ!
ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಸರ್ಕಾರದ ಎದುರು ಪದೇ, ಪದೇ ಡಿಮ್ಯಾಂಡ್ ಇಡುತ್ತಿದ್ದಾರೆ. ಅದರಲ್ಲೂ ಈ ವಿಚಾರದಲ್ಲಿ ಹಲವು ಹೋರಾಟಗಳು ನಡೆದು ಹೋಗಿವೆ. ಹೀಗಿದ್ದರೂ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ಸೌಲಭ್ಯ ಸಿಗುತ್ತಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಈ ವಿಚಾರದಲ್ಲಿ ಅನ್ಯಾಯ ಆಗುತ್ತಿದೆ ಎಂಬ ಆರೋಪ ಇದೆ. ಇಷ್ಟೆಲ್ಲದರ ನಡುವೆ ಸರ್ಕಾರಿ ನೌಕರರಿಗೆ ಲೋಕಸಭೆ ಚುನಾವಣೆ ಬಳಿಕ ಭರ್ಜರಿ ಸಿಹಿ ಸುದ್ದಿ ಸಿಗುವುದು ಗ್ಯಾರಂಟಿ ಆಗುತ್ತಿದೆ!
ಜೀವನದಲ್ಲಿ ಒಂದು ಬಾರಿ ಸರ್ಕಾರಿ ನೌಕರಿ ಸಿಕ್ಕರೆ ಲೈಫ್ ಸೆಟಲ್, ಜೀವನ ಸ್ವರ್ಗದ ರೀತಿ ಅಂತಾ ಜನ ಹೇಳುತ್ತಾರೆ. ಆದ್ರೆ ಸರ್ಕಾರಿ ನೌಕರರು ಎದುರಿಸುವ ಸಮಸ್ಯೆಗಳು ಅವರಿಗೆ ಮಾತ್ರ ಗೊತ್ತು. ಹೀಗಿದ್ದಾಗ ವೇತನದ ವಿಚಾರದಲ್ಲಿ ಕೂಡ ಸರ್ಕಾರಿ ನೌಕರರಿಗೆ ಅನ್ಯಾಯ ಆಗ್ತಿದೆ, ಸರ್ಕಾರಿ ನೌಕರರಿಗೆ ಸೂಕ್ತ ವೇತನ ನೀಡಿ ಅನ್ಯಾಯ ಸರಿ ಮಾಡಿ ಎಂಬ ಬೇಡಿಕೆ ಹಲವಾರು ವರ್ಷಗಳಿಂದಲೂ ಇದೆ. ಇದೇ ಸಮಯದಲ್ಲಿ 2024ರ ಲೋಕಸಭೆ ಚುನಾವಣೆಯ ನಂತರ, ಸರ್ಕಾರಿ ನೌಕರರಿಗೆ ಭಾರಿ ಭರ್ಜರಿ ಸುದ್ದಿ ಸಿಗುವುದು ಗ್ಯಾರಂಟಿ ಆಗುತ್ತಿದೆ.

7ನೇ ವೇತನ ಆಯೋಗದ...
ಅಂದಹಾಗೆ ಇದೀಗ 7ನೇ ವೇತನ ಆಯೋಗದ ವಿಚಾರದಲ್ಲಿ ಗುಡ್ ನ್ಯೂಸ್ ಸಿಗುತ್ತಿರುವುದು, ರಾಜ್ಯ ಸರ್ಕಾರಿ ನೌಕರರಿಗೆ ಅಲ್ಲ ಆದರೆ ಕೇಂದ್ರ ಸರ್ಕಾರಿ ನೌಕರರಿಗೆ. ಯಾಕಂದ್ರೆ ಕೇಂದ್ರ ಸರ್ಕಾರಿ ನೌಕರರಿಗೆ 2024ರ ಲೋಕಸಭೆ ಚುನಾವಣೆಯ ನಂತರ ಮತ್ತೊಂದು ಗುಡ್ ನ್ಯೂಸ್ ಕೊಡಲು ಸಜ್ಜಾಗಿದೆ ಸರ್ಕಾರ. ಕೆಲ ದಿನಗಳ ಹಿಂದೆ ಡಿಎ ಹೆಚ್ಚಿಸಿ ಕೇಂದ್ರ ಸರ್ಕಾರಿ ನೌಕರರ ಬೆನ್ನಿಗೆ ನಿಂತಿದ್ದ ಕೇಂದ್ರ ಸರ್ಕಾರ ಈಗ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದೆ.
ಕೇಂದ್ರ ಸರ್ಕಾರ ಇದೇ ವರ್ಷ ಅಂದರೆ 2024ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಅಂದ್ರೆ ಡಿಎ ಶೇಕಡಾ 4ರಷ್ಟು ಹೆಚ್ಚಿಸಿತ್ತು. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 50ಕ್ಕೆ ಏರಿತ್ತು. ದೇಶಾದ್ಯಂತ ಲಕ್ಷ ಲಕ್ಷ ಕೇಂದ್ರ ಸರ್ಕಾರಿ ನೌಕರರು ಸೇರಿದಂತೆ, ಪಿಂಚಣಿದಾರರಿಗೆ ಇದರಿಂದ ಸಿಹಿಸುದ್ದಿ ಸಿಕ್ಕಿತ್ತು. ಇದೀಗ, ವೇತನದಲ್ಲೂ ಏರಿಕೆ ಮಾಡಲು ಕೇಂದ್ರ ಸರ್ಕಾರದಿಂದ ಸಿದ್ಧತೆ ನಡೆದಿದೆಯಂತೆ!
20 ಲಕ್ಷದಿಂದ 25 ಲಕ್ಷಕ್ಕೆ...
ಹಾಗೇ ಇನ್ನೊಂದು ಕಡೆ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 50ಕ್ಕೆ ಏರಿದ ನಂತರ ಭಾರಿ ಬದಲಾವಣೆ ಮಾಡಿತ್ತು ಕೇಂದ್ರ ಸರ್ಕಾರ. ಇದರ ಭಾಗವಾಗಿ ಕೇಂದ್ರ ನೌಕರರ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಹೆಚ್ಚಿಸಿತ್ತು. ಅಲ್ಲದೆ ಗ್ರಾಚ್ಯುಟಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಿತ್ತು. ನಿವೃತ್ತಿ ಅಥವಾ ಉದ್ಯೋಗಿ ಮರಣದ ಸಂದರ್ಭದಲ್ಲಿ, ಅವರ ಕುಟುಂಬ ಹೆಚ್ಚಿನ ಗ್ರಾಚ್ಯುಟಿ ಹಣ ಪಡೆಯುವುದು, ಇದರಿಂದ ಸಾಧ್ಯವಾಗಿತ್ತು. ಇದೀಗ ಲೋಕಸಭೆ ಚುನಾವಣೆ ಮುಗಿದ ನಂತರ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೂ ಸಿದ್ಧತೆಯ ಮಾಡಿಕೊಂಡಿದೆ ಕೇಂದ್ರ ಸರ್ಕಾರ ಎನ್ನಲಾಗುತ್ತಿದೆ.












Click it and Unblock the Notifications