7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಬಿಗ್‌ ಗುಡ್‌ ನ್ಯೂಸ್-ಮಾಹಿತಿ ಇಲ್ಲಿದೆ

7th Pay Commission: ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಆಗಿದ್ದ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.

ಸೋಮವಾರ (ಜುಲೈ 15) ನಡೆದ ಸಚಿವ ಸಂಪುಟದಲ್ಲಿ ಆಗಸ್ಟ್ 1ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ಬಗ್ಗೆ ತೀರ್ಮಾನ ಮಾಡಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ನೌಕರರು ಇಷ್ಟು ದಿನ ಕಾತರದಿಂದ ನಿರೀಕ್ಷಿಸುತ್ತಿದ್ದ 7ನೇ ವೇತನ ಆಯೋಗದ ವರದಿ ಶಿಫಾರಸುಗಳ ಅನುಷ್ಠಾನ ಆಗಸ್ಟ್ 1ರಿಂದಲೇ ಜಾರಿಗೆ ಬರಲಿದೆ.

7th Pay Commission Big Good News for State Govt Employees Know details

ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸದಿದ್ದರೆ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರು ರಾಜ್ಯ ಸರ್ಕಾರಕ್ಕೆ ಈಗಾಗಲೇ ವಾರ್ನ್‌ ಮಾಡಿದ್ದು, ಈ ಬೆನ್ನಲ್ಲೇ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಗೆ ಸೂಚಿಸಿದ್ದು, ಇದರಿಂದ ರಾಜ್ಯದ ಲಕ್ಷಾಂತರ ನೌಕರರ ವೇತನ ಶೇಕಡ 27.5ರಷ್ಟು ಹೆಚ್ಚಳ ಆದಂತಾಗಲಿದೆ.

ಶೇಕಡ 27.5ರಷ್ಟು ವೇತನ ಪರಿಷ್ಕರಣೆ ಮಾಡಿದ ವರದಿಯನ್ನು ಮಾರ್ಚ್‌ 16ರಂದು ಕೆ.ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸಿಎಂ ಸಿದ್ದರಾಮಯ್ಯನವರಿಗೆ ನೀಡಿತ್ತು. ಬಳಿಕ ಸಿಎಂ ಇದನ್ನು ಜಾರಿ ಮಾಡುವ ಬಗ್ಗೆ ಹಣಕಾಸು ಇಲಾಖೆಯ ಮಾಹಿತಿ ಕೇಳಿದ್ದ‌ರು. ಇದೀಗ ಹಣಕಾಸು ಇಲಾಖೆ ವರದಿ ಬಳಿಕ ಸಿದ್ದರಾಮಯ್ಯ ಅವರು ಆಗಸ್ಟ್ 1ರಿಂದ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಿದ್ದಾರೆ.

ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ವರದಿ ಜಾರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಈ ಬಗ್ಗೆ ಯಾವುದೇ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯನವರು ತೆಗೆದುಕೊಂಡಿರಲಿಲ್ಲ. ಅಲ್ಲದೆ, ಸಂಪನ್ಮೂಲ ಕೊರತೆ ಹಿನ್ನೆಲೆ ಹಣಕಾಸು ಇಲಾಖೆ ಸಲಹೆಯನ್ನಾಧರಿಸಿ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ತೀರ್ಮಾನವನ್ನು ರಾಜ್ಯ ಸರ್ಕಾರ ಮುಂದೂಡುತ್ತಾ ಬಂದಿತ್ತು.

ನಿವೃತ್ತಿ ವೇತನದ ಕುರಿತು ಸಂಪೂರ್ಣ ಮಾಹಿತಿ

ನಿವೃತ್ತಿ ವೇತನ ನಿಯಮಗಳ ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಗಳು- 1958ರ ಭಾಗ-4ರಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಮಾಹಿತಿಗಳ ಬಗ್ಗೆ ರಾಜ್ಯ ಸರ್ಕಾರಿ ನೌಕರರು ಗಮನಿಸಬೇಕಾದ ಪ್ರಮುಖಾಂಶಗಳು ಇಲ್ಲಿವೆ ನೋಡಿ.

* ಸಾಮಾನ್ಯ ಜನರಂತೆ ಸರ್ಕಾರಿ ನೌಕರರು ಸಹ ಶಕ್ತಿಯಿರುವವರೆಗೆ ದುಡಿಯುತ್ತಾರೆ.
* ವಯಸ್ಸು ಆದಂತೆ ಕರ್ತವ್ಯ ದಕ್ಷತೆ ಕಡಿಮೆ ಆಗುತ್ತದೆ.
* ಆರಂಭದಲ್ಲಿ ಇದ್ದ ಕೆಸಲದ ಮೇಲಿನ ಉತ್ಸಾಹ ಕೊನೆವರೆಗೂ ಇರುವುದಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬಿಸುತ್ತವೆ
* ಹೊಸತಲೆಮಾರಿಗೆ ಉದ್ಯೋಗದ ಅವಶ್ಯಕತೆ ಇದ್ದು, ಅದಕ್ಕಾಗಿ ನಿವೃತ್ತಿ ಅನಿವಾರ್ಯ ಆಗುತ್ತದೆ.
* ನಿವೃತ್ತಿಯ ವಯಸ್ಸು ಆಯಾ ದೇಶಗಳ ನಿಮಗಳು ಹಾಗೂ ಜೀವಿತಾವಧಿಯನ್ನು ಅವಲಂಬಿಸಿರುತ್ತದೆ. ಯುಎಸ್‌ಎನಲ್ಲಿ ಜೀವಿತಾವಧಿ ವಯಸ್ಸು 65-70, ಬ್ರಿಟನ್‌ನಲ್ಲಿ ಜೀವಿತಾವಧಿ ವಯಸ್ಸು 60-65 ವರ್ಷ ಆಗಿದ್ದರೆ, ಭಾರತದಲ್ಲಿ ಮಾತ್ರ ಜೀವಿತಾವಧಿ ವಯಸ್ಸು 55-60 ವರ್ಷ ಆಗಿದೆ.

ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು

* ಪ್ರತಿಯೊಂದು ದೇಶದಲ್ಲೂ ಸಹ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಹಿಡಿಗಂಟಾಗಿ ಹಣವನ್ನು ಪಾವತಿದಲಾಗುತ್ತಿದೆ. ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ.
* ಈ ರೀತಿಯ ವ್ಯವಸ್ಥೆ ಇಲ್ಲದಿದ್ದರೆ, ನೌಕರನು ಸಾಯುವತನಕ ವಿರಾಮವಿಲ್ಲದೆ ದುಡಿಯಬೇಕಿತ್ತು. ಇನ್ನು ವಯಸ್ಸಾದ ನೌಕರರ ಸಂಖ್ಯೆ ಹೆಚ್ಚಳವಾಗಿ ಆಡಳಿತ ದುರ್ಬಲವಾಗುತ್ತಿದೆ.
* ಅಲ್ಲದೆ ಈ ವ್ಯವಸ್ಥೆಗಳು ಇಲ್ಲದಿದ್ದರೆ, ನೌಕರನ ಜೀವನ ತುಂನಾ ಕಷ್ಟಕರವಾಗುತಿತ್ತು.

ನಿವೃತ್ತಿಯಾದಾಗ ದೊರೆಯುವ ಸೌಲಭ್ಯಗಳು

1.ನಿವೃತ್ತಿ ವೇತನ
2.ಸೇವಾ ಉಪದಾನ
3.ಪರಿವರ್ತಿತ ಪಿಂಚಣಿ
4.ಸೇವಾಂತ್ಯದಲ್ಲಿ ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ
5.ಸಾಮೂಹಿಕ ವಿಮಾ ಯೋಜನೆ ಉಳಿತಾಯ ನಿಧಿ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ನಿವೃತ್ತಿ ಸ್ಥಳಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು

ಸೇವೆಯಲ್ಲಿ ಮರಣ ಹೊಂದಿದಾಗ ಸಿಗುವ ಸೌಲಭ್ಯಗಳು

1.ಕುಟುಂಬ ನಿವೃತ್ತಿ ವೇತನ
2.ಮರಣ ಉಪದಾನ
3.ಮರಣ ಹೊಂದಿದ ದಿನದಂದು ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ
5.ಸಾಮೂಹಿಕ ವಿಮಾ ಯೋಜನೆ ವಿಮಾನಿಧಿ & ಉಳಿತಾಯ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ಸ್ವಗ್ರಾಮಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು

ಸಾಮಾನ್ಯ ನಿವೃತ್ತಿ ವೇತನದ ನಿಯಮಗಳು

* ನಿವೃತ್ತಿ ವೇತನ ಎಂದರೆ ನಿವೃತ್ತಿ ವೇತನ ಹಾಗೂ ಸೇವಾ ಉಪದಾನ ಸೇರಿರುತ್ತದೆ.
* ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿ ಮುಖ್ಯಸ್ಥರಾಗಿರುತ್ತಾರೆ.
* ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರ ಒಳ್ಳೆಯ ನಡತೆಯನ್ನು ಹೊಂದಿರಬೇಕು.
* ನಿವೃತ್ತಿ ವೇತನ ಪಡೆಯುವ ನೌಕರನು ಅಪರಾಧಿ ಅಥವಾ ತಪ್ಪಿತಸ್ಥನೆಂದು ತಿಳಿದು ಬಂದರೆ ಅಂತಹವರಿಗೆ ನಿವೃತ್ತಿ ವೇತನವನ್ನು ತಡೆಯಿಡಿಯಬಹುದು ಅಥವಾ ಭಾಗಶಃ ಅಥವಾ ಸಂಪೂರ್ಣ ಹಿಂತೆಗೆದುಕೊಳ್ಳಬಹುದು.
* ದುರ್ವತ್ರನೆಗಾಗಿ ಅಥವಾ ನಿರ್ಲಕ್ಷ್ಯಕ್ಕಾಗಿ ನಿವೃತ್ತಿ ವೇತನವನ್ನು ತಡೆಯಿಡಿಯಬಹುದು.
* ಕಡ್ಡಾಯ ನಿವೃತ್ತಿ ವಯಸ್ಸನ್ನು ತಲುಪಿ ಅಥವವಾ ನಿವೃತ್ತಿ ದಿನಾಂಕದಂದು ಅಮಾನತ್ತು ಆದರೆ ಅವರಿಗೆ ತಾರ್ತ್ತೂತಿಕ ಪಿಂಚಣಿ ಮಂಜೂರು ಮಾಡಬೇಕು.

ನಿವೃತ್ತಿ ವೇತನ ಪಾವತಿ ಸಿದ್ದಾಂತಗಳು

* ಪ್ರಸ್ತಾಪಿಸಿದ ಸಿದ್ದಾಂತಗಳು ಆಯಾ ರಾಷ್ಟ್ರದ ಸಂವಿಧಾನದ ಆಧಾರದ ಮೇಲೆ ಬಗೆಹರಿಸಲ್ಪಡುತ್ತವೆ.
* ಕೆಲವೊಂದು ರಾಷ್ಟ್ರಗಳಲ್ಲಿ ಪಿಂಚಣಿಯನ್ನು ಹಕ್ಕೆಂದು ನ್ಯಾಯಲಯಗಳಲ್ಲಿ ಪ್ರತಿಪಾದಿಸಲಾಗುತ್ತಿದೆ.
* ನಮ್ಮ ದೇಶದಲ್ಲಿ ಅನುಮೋದಿತ ಸರ್ಕಾರಿ ಸೇವೆಗೆ ಪಿಂಚಣಿ ನೀಡುವ ಕುರಿತು ಸರ್ಕಾರ ತನ್ನ ಆಧಿಕಾರವನ್ನು ಕಾಯ್ದಿರಿಸಿಕೊಂಡಿದೆ
* ವಿವಿಧ ತರಬೇತಿಗಳಲ್ಲಿ ಕಳೆದ ಅವಧಿಯನ್ನು ಅರ್ಹತಾದಾಯಕ ಸೇವೆಗೆ ಪರಿಗಣಿಸಬೇಕು.
* ಅಮಾನತ್ತಿನ ಅವಧಿಯನ್ನು ಅಮಾನತ್ತು ಎಂದು ಪರಿಗಣಿಸಿದ್ದಲ್ಲಿ ಅದನ್ನು ಅರ್ಹತಾದಾಯಕ ಸೇವೆಯಿಂದ ಕಡಿತಗೊಳಿಸಬೇಕು.
* ರಾಜೀನಾಮೆ, ಸೇವೆಯಿಂದ ವಜಾ ಮತ್ತು ತೆಗೆದು ಹಾಕಿರುವ ಅವಧಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ
* ಮುನ್ಸಿಫ್ ಹುದ್ದೆಗೆ ನೇಮಕಗೊಂಡಾಗ 25 ವರ್ಷ ವಯಸ್ಸು ಮೀರಿದ್ದಾಗ ನೇಮಕವಾಗಿದ್ದರೆ, ಗರಿಷ್ಟ 5 ವರ್ಷವನ್ನು ಅರ್ಹತಾದಾಯಕ ಸೇವೆಗೆ ಸೇರಿಸಬೇಕು.

ಕುಟುಂಬ ಪಿಂಚಣಿ ಪಾವತಿ ಕಾರ್ಯವಿಧಾನ

* ಅವಳಿ ಮಕ್ಕಳಿಗೆ ಕುಟುಂಬ ಪಿಂಚಣಿ ಸಂದಾಯ ಮಾಡಬೇಕಾದಲ್ಲಿ ಅದನ್ನು ಸಮವಾಗಿ ಪ್ರತಿಯೊಂದು ಮಗುವಿಗೂ ಹಂಚಬೇಕು
* ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರಿದ ತಕ್ಷಣ ತನ್ನ ಕುಟುಂಬದ ವಿವರಗಳನ್ನು ನಮೂನೆ -ಎನಲ್ಲಿ ನೀಡಬೇಕು
* ಸೇವೆಗೆ ಸೇರುವಾಗ ಕುಟುಂಬವಿಲ್ಲದಿದ್ದರೆ, ಮದುವೆಯಾದ ತಕ್ಷಣ ವಿವರಗಳ ಸಲ್ಲಿಸಬೇಕು
* ಮಾನಸಿಕ, ದೈಹಿಕ, ವಿಕಲತೆಯ ಮಕ್ಕಳಿದ್ದರೆ ಅದರ ವಿವರವನ್ನು ವೈದ್ಯಾಧಿಕಾರಿಗಳ ದೃಢೀಕರಣವನ್ನು ನಮೂನೆ-ಇ ನಲ್ಲಿ ಪಡೆದು ಸೇವಾವಹಿಗೆ ಲಗತ್ತಿಸಬೇಕು.

ನಿವೃತ್ತಿಯ ನಂತರ ವಿವಾಹ

* ನಿವೃತ್ತಿ ನಂತರ ಮದುವೆ ಮತ್ತು ಜನಿಸಿದ ಮಕ್ಕಳ ಕುರಿತು ನಮೂನೆ- ಎಫ್‌ನಲ್ಲಿ ಮಾಹಿತಿಯನ್ನು ಕಚೇರಿ ಮುಖ್ಯಸ್ಥರಿಗೆ ತಿಳಿಸಬೇಕು. ಇದರ ಜೊತೆ ಮದುವೆಯಾದ ಪ್ರಮಾಣ ಪತ್ರಗಳು ಜೋಡಿ ಭಾವ ಚಿತ್ರಗಳನ್ನು ಲಗತ್ತಿಸಿರಬೇಕು.
* ಕಚೇರಿ ಮುಖ್ಯಸ್ಥರು ಈ ಕುರಿತು ಮಾಹಾಲೇಖಪಾಲರಿಗೆ ಮಾಹಿತಿ ನೀಡಬೇಕು.
* ನಿವೃತ್ತಿ ಸಂದಾಯ ಆದೇಶದಲ್ಲಿ ತಿದ್ದುಪಡಿಗಳನ್ನು ಮಹಾಲೇಖಪಾಲರು ನಮೂದು ಮಾಡಿಕೊಂಡು ಹೊಸ ಸಂದಾಯ ಆದೇಶ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+