ಬೆಂಗಳೂರು, ಮಡಿಕೇರಿ, ತುಮಕೂರಿನಲ್ಲಿ 74.50 ಲಕ್ಷ ವಶಕ್ಕೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 3: ಬೆಂಗಳೂರು, ಮಡಿಕೇರಿ ಹಾಗೂ ತುಮಕೂರಿನಲ್ಲಿ ಶನಿವಾರ ದಾಳಿ ನಡೆಸಿದ ಪೊಲೀಸರು ಒಟ್ಟು 74.50 ಲಕ್ಷ ರುಪಾಯಿ ವಶಪಡಿಸಿಕೊಂಡರು. ಈ ಮೂರು ಪ್ರಕರಣಗಳಲ್ಲಿ ನೋಟು ಬದಲಾವಣೆ ದಂಧೆಯಲ್ಲಿ ಹಣ ಕೈ ಬದಲಾವಣೆ ಯತ್ನ ನಡೆಯುತ್ತಿತ್ತು.

ಬೆಂಗಳೂರಿನಲ್ಲಿ ಎರಡು ಕಡೆ ದಾಖಲೆಗಳು ಇಲ್ಲದ 30 ಲಕ್ಷವನ್ನು ಶುಕ್ರವಾರ ರಾತ್ರಿ ವಶಕ್ಕೆ ಪಡೆದರೆ, ಕೊಡಗಿನಲ್ಲಿ ಶನಿವಾರ 34 ಲಕ್ಷ ಹಾಗೂ ತುಮಕೂರಿನಲ್ಲಿ ಹತ್ತು ಲಕ್ಷ ರುಪಾಯಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ಲಕ್ಷ, ಹೆಬ್ಬಾಳ ವ್ಯಾಪ್ತಿಯಲ್ಲಿ 18 ಲಕ್ಷ ಹೊಸ ನೋಟುಗಳು ಸಿಕ್ಕಿವೆ. ಈ ಸಂಬಂಧ ಆಂಧ್ರ ಮೂಲದ ಮೋಹನ್ ಹಾಗು ಶ್ರೀಧರ್ ಎಂಬುವರನ್ನು ಬಂಧಿಸಲಾಗಿದೆ.[ಹತ್ತು ಲಕ್ಷ ಕೂಡ ಆದಾಯ ದಾಟದ ಇವರ ಬಳಿ ಇದ್ದ ಕಾರೇ ಕೋಟಿಗಟ್ಟಲೆ!]

74.50 lakh new notes, unaccounted money seized

ಮಡಿಕೇರಿಯ ರೆಸಾರ್ಟ್ ನಲ್ಲಿ ಹೊಸ ನೋಟುಗಳಿರುವ ಬಗ್ಗೆ ಮಾಹಿತಿ ಸಿಕ್ಕ ಶುಂಠಿಕೊಪ್ಪ ಪೊಲೀಸರು ಶನಿವಾರ ದಾಳಿ ಮಾಡಿ, 34.40 ಲಕ್ಷ ವಶಕ್ಕೆ ಪಡೆದರು. ಈ ಬಗ್ಗೆ ಶನಿವಾರಸಂತೆಯ ಅನಂತಕುಮಾರ್, ಕುಶಾಲನಗರ ಜಮೀಲ್, ಶ್ರೀಧರ್ ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಹಣಕ್ಕೆ ಸೂಕ್ತ ದಾಖಲೆ ಇಲ್ಲದ ಕಾರಣ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದಾರೆ.[ಜನ್ ಧನ್ ಖಾತೆಯಲ್ಲಿ ಲಕ್ಷಗಟ್ಟಲೆ ಹಣ, ಆದಾಯ ತೆರಿಗೆ ಚಾಟಿ!]

ಇನ್ನು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪೊಲೀಸರು ಹತ್ತು ಲಕ್ಷ ರುಪಾಯಿ ವಶಕ್ಕೆ ಪಡೆದಿದ್ದಾರೆ. 2 ಸಾವಿರ ಮುಖಬೆಲೆಯ ನೂರೈವತ್ತು ಹಾಗೂ ನೂರರ ಮುಖಬೆಲೆಯ ಏಳು ಸಾವಿರ ನೋಟುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮಾಗಡಿಯ ಬಾಲರಾಜ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
74.50 lakh worth of new notes and unaccounted money seized by police in different parts of Karnataka.Tumakauru, Bengaluru and Madikeri police seized money and arrested people.
Please Wait while comments are loading...