BTS-2020: ವರ್ಚುಯಲ್ ಮೇಳಕ್ಕೆ ನಿರೀಕ್ಷೆ ಮೀರಿ ಸ್ಪಂದನೆ!

ಬೆಂಗಳೂರು, ನ. 20: ಇದೇ ಮೊದಲ ಬಾರಿ ವರ್ಚುಯಲ್ ಆಗಿ ನಡೆಯುತ್ತಿರುವ 'ಬೆಂಗಳೂರು ತಂತ್ರಜ್ಞಾನ ಮೇಳ-2020'ಕ್ಕೆ ಮೊದಲ ದಿನ ಗುರುವಾರ (ನ. 19) ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ ಎಂದು ರಾಜ್ಯ ಐಟಿ-ಬಿಟಿ ಇಲಾಖೆ ಮಾಹಿತಿ ನೀಡಿದೆ.

ಬಿಟಿಎಸ್-2020 ಆನ್ ಲೈನ್ ವೇದಿಕೆಯೊಂದರಲ್ಲೇ 7000 ವ್ಯಾಪಾರೋದ್ಯಮಿಗಳು ನೋಂದಣಿ ಮಾಡಿ ಪಾಲ್ಗೊಂಡಿದ್ದಾರೆ. ಇದಲ್ಲದೇ ಇತರ 10,000 ಜನರು ಇದೇ ವೇದಿಕೆ ಮೂಲಕ ಆಸಕ್ತಿಯಿಂದ ಭಾಗವಹಿಸಿದರು. ಒಟ್ಟಾರೆ ಈ ವೇದಿಕೆ ಮೂಲಕ ಪಾಲ್ಗೊಂಡವರ ಸಂಖ್ಯೆ 17,000 ದಾಟಿದೆ. ಕಳೆದ ವರ್ಷ ಮೂರು ದಿನಗಳೂ ಸೇರಿ ಪಾಲ್ಗೊಂಡ ವ್ಯಾಪಾರೋದ್ಯಮಿಗಳ ಸಂಖ್ಯೆ 3,000 ಇತ್ತು ಎಂದು ರಾಜ್ಯ ಐಟಿ-ಬಿಟಿ ಇಲಾಖೆ ಮಾಹಿತಿ ನೀಡಿದೆ.

7000 marketers registered and participated in the BTS 2020 online platform

ಇದಲ್ಲದೇ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕೂಡ 2 ಕೋಟಿಗೂ ಹೆಚ್ಚು ಜನರನ್ನು ಇದು ತಲುಪಿದೆ, ಹೀಗಾಗಿ ಒಟ್ಟಾರೆ ದೇಶ-ವಿದೇಶಗಳ ಕೋಟ್ಯಂತರ ಜನರು ಅತ್ಯಧಿಕ ಸಂಖ್ಯೆಯಲ್ಲಿ ಇದರಲ್ಲಿ ಭಾಗಿಯಾಗಿದ್ದಾರೆ.

7000 marketers registered and participated in the BTS 2020 online platform

ಇದೇ ಮೊತ್ತಮೊದಲ ಬಾರಿಗೆ ವರ್ಚುಯಲ್ ಆಗಿ ನಡೆಯುತ್ತಿರುವ ಮೂರು ದಿನಗಳ 'ಬೆಂಗಳೂರು ತಂತ್ರಜ್ಞಾನ ಮೇಳ' (BTS-2020)ವನ್ನು ಗುರುವಾರ (ನ.19)ದಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಎರಡನೇ ದಿನವಾದ ಇಂದು ಮತ್ತು ನಾಳೆ (ನ.20 ಹಾಗೂ 21) ವಿವಿಧ ಗೋಷ್ಠಿಗಳು ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+