ಮದ್ಯದಿಂದ 700 ಕೋಟಿ ರೂ. ಮೋದಿ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ!

ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಪ್ರಚಾರ ರಂಗೇರುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರ ಹಾಗೂ ಕಾಂಗ್ರೆಸ್‌ ಅನ್ನು ಗುರಿಯಾಗಿಸಿಕೊಂಡು ಭಾರೀ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯ ಸಮಯದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಹರಿಯಾಣ ಪ್ರಚಾರ ಸಭೆಗಳಲ್ಲಿ ಮೋದಿ ಅವರು ಮುಡಾ ಹಗರಣವನ್ನು ಪ್ರಸ್ತಾಪಿಸಿದ್ದರು. ಕೊನೆಯ ಹಂತದ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್‌ಗೆ ಇದು ಭಾರೀ ಹೊಡೆತವನ್ನೇ ಕೊಟ್ಟಿತ್ತು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಅಬಕಾರಿ (ಮದ್ಯ)ಗೆ ಸಂಬಂಧಿಸಿದಂತೆ ಗಂಭೀರವಾದ ವಿಚಾರವೊಂದನ್ನು ಪ್ರಸ್ತಾಪಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಬಕಾರಿ ವಿಚಾರವಾಗಿ ಮೋದಿ ಮಾತಾನಾಡಿದ್ದಾರೆ. ಒಬ್ಬ ಪ್ರಧಾನಿಯಾಗಿ ಇಷ್ಟೊಂದು ಸುಳ್ಳು ಹೇಳೋದು ಆ ಸ್ಥಾನಕ್ಕೆ ತೋರುವ ಅಗೌರವ. ಅಬಕಾರಿಯಲ್ಲಿ 700 ಕೋಟಿ ಮಾಡೋಕೆ ಆಗತ್ತಾ ಅಂತ ಪ್ರಶ್ನೆ ಮಾಡಿದ್ದಾರೆ

700 crore from liquor Modi s statement Siddaramaiah s explosive statement about

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಳ್ಳು ಹೇಳೋಕೆ ಒಂದು ಇತಿಮಿತಿ ಅನ್ನೋದು ಇರಬೇಕು. ಅಬಕಾರಿ ಇಲಾಖೆಯವರು ನಮಗೆ ಯಾಕೆ ದುಡ್ಡು ಕೊಡ್ತಾರೆ. ಬಿಜೆಪಿ ಹಾಗೂ ಮದ್ಯದ ಅಂಗಡಿ ಮಾಲೀಕರು ರಾಜಕೀಯಕ್ಕೆ ಆರೋಪ ಮಾಡಿದ್ದಾರೆ. 17 ಶಾಸಕರನ್ನು ಖರೀದಿ ಮಾಡಿದ್ದು ಯಾವ ದುಡ್ಡು. ಇದು ಕೇವಲ ಮುಖ್ಯಮಂತ್ರಿ ಆಗಬೇಕು ಅಂತ ಬಸನಗೌಡ ಪಾಟೀಲ ಯತ್ನಾಳ ಅವರು ಕೋಟಿ ಕೋಟಿ ರೂಪಾಯಿ ಕೊಡಬೇಕು ಎಂದಿದ್ದರು. ಅದು ಯಾವ ದುಡ್ಡು, ವಿಜಯೇಂದ್ರ ಅಧ್ಯಕ್ಷರಾಗೋಕು ದುಡ್ಡು ಕೊಟ್ಟಿದ್ದಾರೆ ಅಂತಾರೆ. ಇದು ಯಾವ ದುಡ್ಡು ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನು ಮುಡಾ ದಾಖಲೆ ಬಿಡುಗಡೆ ವಿಚಾರ. ಹಣ ಚೆಕ್ ಮೂಲಕ ಕೊಟ್ಟಿದಾರಾ.? ಸ್ನೇಹಮಯಿ ಅವರು ಮಾಡ್ತಿರೋದು ಸುಳ್ಳು ಆರೋಪ ಆಗಿದೆ. ಅವರು ಸುಳ್ಳು ಹೇಳ್ತಿದ್ದಾರೆ ಎಂದಿದ್ದಾರೆ. ದಾನ ಪತ್ರ ಮಾಡೋಕೆ ನನ್ನ ಭಾಮೈದ ಅದನ್ನು ಕೊಟ್ಟಿದ್ದು. ತಹಶೀಲ್ದಾರ್ ಯಾಕೆ ಕೊಡ್ತಾರೆ, ಎಸಿ ಯಾಕೆ ಕೊಡ್ತಾರೆ. ಸುಮ್ಮನೆ ಏನೋ ಹೇಳ್ತಾರೆ ಎಂದು ಈ ಆರೋಪಗಳನ್ನು ಸಹ ತಳ್ಳಿ ಹಾಕಿದ್ದಾರೆ.

ಗೊಡ್ಡು ಬೆದರಿಕೆ ಅಂದ್ರೆ ಏನು ಎಂದ ಸಿದ್ದರಾಮಯ್ಯ

ರಾಜ್ಯದಲ್ಲಿ ಕೋವಿಡ್ ಹಗರಣ ತನಿಖೆ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯಾ ಅವರು, ಅದಿನ್ನು ಕ್ಯಾಬಿನೆಟ್ ಮುಂದೆ ಬಂದಿಲ್ಲ ಎಂದ ಸಬ್ ಕಮಿಟಿ ರಿಪೋರ್ಟ್ ಕೊಡಬೇಕು ಎಂದರು. ಗೊಡ್ಡು ಬೆದರಿಕೆ ಅಂದ್ರೆ ಏನೂ.? ಗೊಡ್ಡು ಬೆದರಿಕೆ ಅಲ್ಲ,ನಾವು ಮೈಕಲ್ ಖುನ್ನಾ ಅಧ್ಯಕ್ಷತೆಯಲ್ಲಿ ‌ಕಮಿಟಿ ಮಾಡಿದ್ದೇವೆ. ಅವರ ವರದಿ ಆಧಾರದ ಮೇಲೆ ತನಿಖೆ. ಇದು ಗೊಡ್ಡು ಬೆದರಿಕೆನಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಹಂಗ ಅಂದ್ರೆ ಏನೂ ಎಂದ ಅವರು ಕ್ರಿಮಿನಲ್ ಆ್ಯಕ್ಷನ್ ತಗೋತಿವಿ ಅಂದಿದಾರೆ. ಲೂಟಿ ಹೊಡೆದು ಗೊಡ್ಡು ಬೆದರಿಕೆ ಅಂದ್ರೆ ಹೇಗೆ ಇದು ಸರಿನಾ ಸಬ್ ಕಮಿಟಿ ರಿಪೋರ್ಟ್ ಬರಲಿ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು. ನ್ಯಾಯಾಂಗ ಯಡಿಯೂರಪ್ಪ ಅವರಿಗೆ ಮಾತ್ರ ಇದೆಯಾ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋಕೆ ನ್ಯಾಯಾಂಗ ಇದೆ. ತಪ್ಪು ಅಂತಾ ಸಾಬೀತದ ಮೇಲೆ‌ ಯಡಿಯೂರಪ್ಪ ಎನ್ಮಾಡ್ತಾರೆ.

ಯಡಿಯೂರಪ್ಪ ಕೊಲೆ ಮಾಡಲು ಪ್ರಯತ್ನ ವಿಚಾರವಾಗಿ ಮಾತನಾಡಿದ ಅವರು ಆಗ ಯಾಕೆ ಕೇಸ್ ಹಾಕಿಲ್ಲ. ಕೇಸ್ ಹಾಕಬೇಕಿತ್ತು ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+