ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ, ಪುನೀತ್‌ಗೆ ಕರ್ನಾಟಕ ರತ್ನ ಸಿದ್ಧತೆ ಕುರಿತು ಸಿಎಂ ವಿವರಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಕರುನಾಡಿನಾಡಿನಾದ್ಯಂತ ಗ್ರಾಮಗಳಲ್ಲಿ, ನಗರಗಳಲ್ಲಿ, ಶಾಲೆ ಹಾಗೂ ಸರ್ಕಾರಿ ಸೇರಿದಂತೆ ಇತರೆ ಸಂಘ-ಸಂಸ್ಥೆಗಳಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಿಸಬೇಕು. ಎಲ್ಲೆಲ್ಲಿಯೂ ಕನ್ನಡದ ಧ್ವಜ ಹಾರಾಡಬೇಕು. ಈ ಮೂಲಕ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಸೋಮವಾರ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ, ಸಂಭ್ರಮದಿಂದ ಆಚರಿಸಲು ಸರ್ಕಾರ ಸಂಕಲ್ಪ ಮಾಡಿದೆ ಎಂದರು.

ಮಂಗಳವಾರ ನವೆಂಬರ್ 1ರ ಸಂಜೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಪ್ರದಾನ ಸಮಾರಂಭವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಲ್ಲಾ ಶ್ರೇಷ್ಠ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಅದ್ಭುತ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.

ಅಪ್ಪುಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ

ಅಪ್ಪುಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ

ಮುಖ್ಯವಾಗಿ ಮಂಗಳವಾರ ಸಂಜೆ 4 ಗಂಟೆಗೆ ರಾಜ್ಯ ಸರ್ಕಾರ ದಿ. ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಿದೆ. ಈ ಸಂಬಂಧ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಡಾ.ರಾಜ್‌ ಕುಟುಂಬ ಸದಸ್ಯರು, ಗಣ್ಯರು ಭಾಗವಹಿಸಲಿದ್ದಾರೆ. ಈ ವೇಳೆ ಅಭಿಮಾನಿ ಕನ್ನಡಿಗರು ಪಾಲ್ಗೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಬೆಂಗಳೂರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ

ಬೆಂಗಳೂರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ

ನವೆಂಬರ್ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಗತ್ತಿನಾದ್ಯಂತ ಪ್ರಮುಖ ಉದ್ಯಮಿಗಳು, ಉದ್ದಿಮೆಯ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ 5 ಲಕ್ಷ ಕೋಟಿ ರೂ.ಗಿಂತಲೂ ಹೆಚ್ವಿನ ಬಂಡವಾಳ ಕರ್ನಾಟಕದ ಮೇಲೆ ಹೂಡಿಕೆಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಈಗಾಗಲೇ ಬಹಳಷ್ಟು ಬಂಡವಾಳದಾರರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅವರ ಯೋಜನೆಗಳ ಅನುಮೋದನೆಯನ್ನೂ ಮಾಡಲಾಗಿದೆ. ಭರವಸೆ ಪತ್ರವನ್ನೂ ನಾಳೆ ವಿತರಿಸಲಿದ್ದೇವೆ.

ರಾಜ್ಯದ ಐದು ವರ್ಷದ ಭವಿಷ್ಯದ ದಿಕ್ಸೂಚಿ

ರಾಜ್ಯದ ಐದು ವರ್ಷದ ಭವಿಷ್ಯದ ದಿಕ್ಸೂಚಿ

ಮುಂದಿನ 3 ದಿನಗಳ ಕಾಲ ಹಲವಾರು ಕ್ಷೇತ್ರಗಳಲ್ಲಿ ಆಗುತ್ತಿರುವ ಪ್ರಗತಿ ಹಾಗೂ ನವೀಕರಿಸಬಹುದಾದ ಇಂಧನ, ಸೆಮಿ ಕಂಡಕ್ಟರ್, ಏರೋಸ್ಪೇಸ್, ರಕ್ಷಣಾ ಕ್ಷೇತ್ರ ಮುಂತಾದ ಪ್ರಮುಖ ವಲಯಗಳ ಸವಾಲುಗಳು ಹಾಗೂ ಬೆಳವಣಿಗೆಯ ಬಗ್ಗೆ ಚರ್ಚೆಗಳು, ಗೋಷ್ಠಿಗಳು ನಡೆಯಲಿವೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಪರಿಣಿತರು ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬೃಹತ್ ಸಮಾವೇಶವು ಕರ್ನಾಟಕ ರಾಜ್ಯದ ಮುಂದಿನ 5 ವರ್ಷಗಳ ಕಾಲದ ಆರ್ಥಿಕ ಚಟುವಟಿಕೆಗಳ ದಿಕ್ಸೂಚಿ ಆಗಿರಲಿದೆ. ಇದರಲ್ಲಿಯೂ ಆಸಕ್ತರು ಉದ್ಯಮಿಗಳು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳಿಗೆ ಅವಕಾಶವಿದೆ. ಹೆಸರುಗಳನ್ನು ನೋಂದಾಯಿಸಿಕೊಂಡು ಭಾಗವಹಿಸಬೇಕು. ನೋಂದಣಿ ಮೂಲಕ ಮಾತ್ರವೇ ಸಮಾವೇಶಕ್ಕೆ ಪ್ರವೇಶವಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ನವೆಂಬರ್ 11ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್, ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಚೆನ್ನೈ-ಬೆಂಗಳೂರು- ಮೈಸೂರಿಗೆ ಅತೀ ವೇಗವಾಗಹಿ ಸಂಚರಿಸಲಿರುವ 'ವಂದೇ ಭಾರತ್' ರೈಲನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಸಹ ಪ್ರಧಾನಿಗಳೇ ಉದ್ಘಾಟಿಸುತ್ತಿದ್ದಾರೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಕೆಂಪೇಗೌಡರು ಪ್ರಗತಿಯ ಸಂಕೇತವಾಗಿದ್ದರಿಂದ ಕಂಚಿನ ಪ್ರತಿಮಗೆ 'ಪ್ರಗತಿ ಪ್ರತಿಮೆ' ಎಂದು ಹೆಸರಿಡಲಾಗಿದೆ. ಲಕ್ಷಾಂತರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದೇ ವೇಳೆ ಪ್ರಧಾನಮಂಥ್ರಿಗಳು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರು ವಿವರಿಸಿದರು.

ವಿಪಕ್ಷದವರಂತೆ ನಾನು ವ್ಯಾಖ್ಯಾನ ಮಾಡಲ್ಲ: ಬೊಮ್ಮಾಯಿ

ವಿಪಕ್ಷದವರಂತೆ ನಾನು ವ್ಯಾಖ್ಯಾನ ಮಾಡಲ್ಲ: ಬೊಮ್ಮಾಯಿ

ಕಾಂಗ್ರೆಸ್‌ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಾಲ ಪಡೆದಿರುವ ಬಗ್ಗೆ ಪತ್ರಿಕೆಗಳಿಂದ ನನ್ನ ಗಮನಕ್ಕೆ ಬಂದಿದೆ. ಯಾವುದೇ ಆದರೂ ವ್ಯವಸ್ಥಿತವಾಗಿ ತನಿಖೆಯಾಗಬೇಕು. ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಕೊಟ್ಟರೆ ಆ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನಾನು ವಿರೋಧ ಪಕ್ಷದ ರೀತಿಯಲ್ಲಿ ಯಾವುದೇ ವ್ಯಾಖ್ಯಾನ ಮಾಡುವುದಿಲ್ಲ. ಅವರಿಗೆ ಆಧಾರರಹಿತವಾಗಿ ವ್ಯಾಖ್ಯಾನ ಮಾಡುವ ರೂಢಿ ಇದೆ. ನಾನು ಹಾಗೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ಇನ್ನು ಸೋಲಾರ್ ಹಗರಣ ಪ್ರಕರಣವು ತನಿಖೆ ಆಗುತ್ತದೆಯೇ ಎಂಬ ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಮುಖ್ಯಮಂತ್ರಿಗಳು, ತನಿಖೆ ಬಗ್ಗೆ ಕಾದು ನೋಡಿ ಎಂದಷ್ಟೇ ತಿಳಿಸಿದರು.

ವಿಸ್ತೃತ ತನಿಖೆಗೆ ಸೂಚನೆ: ಕೆ.ಆರ್‌.ಪುರಂ ಪೊಲೀಸ್ ಠಾಣೆಯಿಂದ ಅಮಾನತುಗೊಂಡಿದ್ದ ಇನ್ಸಪೆಕ್ಟರ್ ನಂದೀಶ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಪ್ರಾರಂಭಿಸಲು ಡಿಜಿಪಿ ಅವರಿಗೆ ಸೂಚನೆ ನೀಡಲಾಗಿದೆ. ಪ್ರಕರಣ ಬಗ್ಗೆ ಮಾಹಿತಿ ಪಡೆದು ಸಂಪೂರ್ಣ ಮತ್ತು ವಿಸ್ತೃತವಾಗಿ ತನಿಖೆ ಕೈಗೊಳ್ಳಲು ತಿಳಿಸಿದ್ದೇನೆ ಎಂದು ಹೇಳಿದರು.

English summary
What is The CM Basavaraj Bommai reaction about 67th Kannada Rajyotsava, Karnataka Ratna and Rajyotsava Award function and Global Investors meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X