ಕರ್ನಾಟಕ ಮಿನಿ ಒಲಂಪಿಕ್ ಗೇಮ್ಸ್ 60 ರಾಜಕಾರಣಿಗಳಿಗೆ ಅತಿಥ್ಯ: ಒಬ್ಬ ಕ್ರಿಡಾ ಸಾಧಕನಿಲ್ಲ!
ಬೆಂಗಳೂರು, ಮೇ. 12: ಕರ್ನಾಟಕ ಸರ್ಕಾರ ಮೇ 16 ರಿಂದ "ಮಿನಿ ಒಲಂಪಿಕ್ ಗೇಮ್ಸ್ 2022 " ಆಯೋಜಿಸಿದೆ. ಈ ಮಿನಿ ಒಲಂಪಿಕ್ಸ್ ಗೇಮ್ಸ್ ಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಬರೋಬ್ಬರಿ 65 ಅಥಿತಿಗಳನ್ನು ಆಹ್ವಾನಿಸಲಾಗಿದೆ. ವಿಶೇಷ ಎಂದರೆ ಇದರಲ್ಲಿ ಒಬ್ಬೇ ಒಬ್ಬ ವ್ಯಕ್ತಿ ಕ್ರೀಡಾಪಟು ಇಲ್ಲ!
ಕರ್ನಾಟಕದ ಯುವ ಜನ ಸೇವಾ ಹಾಗೂ ಕರ್ನಾಟಕ ಸ್ಪೋರ್ಟ್ಸ ಅಥಾರಿಟಿ ಆಫ್ ಕರ್ನಾಟಕ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಮೇ 16 ರಿಂದ ಮಿನಿ ಒಲಂಪಿಕ್ಸ್ ಗೇಮ್ಸ್ 2022 ಆಯೋಜಿಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ಮೇ 16 ರಿಂದ 22 ರ ವರೆಗೆ ನಡೆಯಲಿರುವ ಮಿನಿ ಒಲಂಪಿಕ್ ಗೇಮ್ಸ್ ನ ಉದ್ಘಾಟನೆಯಲ್ಲಿ ಒಬ್ಬೇ ಒಬ್ಬ ಕ್ರೀಡಾಳು ಅತಿಥ್ಯ ವಹಿಸುತ್ತಿಲ್ಲ.
ಒಂದು ವಾರ ನಡೆಯಲಿರುವ ಮಿನಿ ಒಲಂಪಿಕ್ ಗೇಮ್ 2022 ಅಧ್ಯಕ್ಷತೆಯನ್ನು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ವಹಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಚಿವ ಕೆ.ಸಿ. ನಾರಾಯಣಗೌಡ , ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು ಭಾಗವಹಿಸಿದ್ದಾರೆ.

ನಲವತ್ತು ಗಣ್ಯರಲ್ಲಿ ಒಬ್ಬರು ಕ್ರಿಡಾಳು ಇಲ್ಲ:
ಒಲಂಪಿಕ್ ಕ್ರೀಡಾ ಕೂಟದಲ್ಲಿ ಎಲ್ಲಾ ಶಾಸಕರು, ಸಂಸದರೂ ಸೇರಿ ಒಟ್ಟು 65 ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ.
ಈ ಕ್ರೀಡಾಕೂಟಕ್ಕೆ ರಿಜ್ವಾನ್ ಹರ್ಷದ್ ವಹಿಸಿದ್ದು, ವಿಶೇಷ ಅತಿಥಿಗಳಾಗಿ ಶಾಲಿನಿ ರಜನೀಶ್, ಕೆ.ಪಿ. ಪುರುಷೋತ್ತಮ್ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಆರ್. ಅಶೋಕ್, ವಿ. ಸೋಮಣ್ಣ, ಎಸ್.ಟಿ. ಸೋಮಶೇಖರ್, ಡಾ.ಅ ಅಜಯ್ ಧರ್ಮಸಿಂಗ್, ಎಸ್. ಆರ್. ವಿಶ್ವನಾಥ್, ಪ್ರಕಾಶ್ ಕೆ. ರಾಥೋಡ್, ಡಾ. ವೈ.ಎ. ನಾರಾಯಣಸ್ವಾಮಿ, ರಾಮಲಿಂಗಾರೆಡ್ಡಿ ಸೇರಿದಂತೆ ಬೆಂಗಳೂರಿನ ರಾಜಕಾರಣಿಗಳ ದಂಡೇ ಭಾಗಿಯಾಗುತ್ತಿದೆ. ಕ್ರೀಡಾಕೂಟ ಎಂಬ ಕಾರಣಕ್ಕಾದರೂ ಒಬ್ಬೇ ಒಬ್ಬ ಕ್ರೀಡಾಳುಗೆ ಆಹ್ವಾನ ನೀಡದೇ ಕರ್ನಾಟಕ ಕ್ರೀಡಾ ಇಲಾಖೆ ಮಿನಿ ಒಲಂಪಿಕ್ಸ್ ಗೇಮ್ಸ ್2022 ನ್ನು ಆಯೋಜಿಸಿ ನಗೆ ಪಾಟಲಿಗೆ ಗುರಿಯಾಗಿದೆ.

ಬೆಂಗಳೂರಿನ ಮಂಜುಳ ಮಾರಪ್ಪ ಎಂಬುವರು ಈ ಕುರಿತು ಟ್ವಿಟ್ಟರ್ ನಲ್ಲಿ ಪೊಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕ್ರೀಡಾ ಸಚಿವರು ಡಾಕ್ಟರೇಟ್ ಪದವಿ ಪಡೆದಿರುವಂತಹ ಪ್ರತಿಭಾವಂತರು. ಅವರ ಪ್ರತಿಭೆ ಮೆಚ್ಚಿ ವಿವಿಗಳೇ ಡಾಕ್ಟರೇಟ್ ಪದವಿ ನೀಡಿದೆ. ಇಂತಹ ಸಚಿವರು ಒಲಂಪಿಕ್ ಕ್ರೀಡಾಕೂಟದ ಹೆಸರಿನಲ್ಲಿ ರಾಜಕಾರಣಿಗಳ ಜಾಮೂನ್ ಪಾರ್ಟಿ ಆಯೋಜನೆ ಮಾಡಿರುವುದು ಕ್ರೀಡಾ ಸಾಧಕರಲ್ಲಿ ಬೇಸರ ಮೂಡಿಸಿದೆ.












Click it and Unblock the Notifications