ಒಂದೇ ದಿನ 51 ಎಂಜಿನಿಯರ್‌ಗಳ ವರ್ಗಾವಣೆ ಆದೇಶಕ್ಕೆ ಸಚಿವ ರೇವಣ್ಣ ಸಹಿ
ಒಂದೇ ದಿನದಲ್ಲಿ 51 ಎಂಜಿನಿಯರ್‌ಗಳ ವರ್ಗಾವಣೆ ಮಾಡಿದ ಸಚಿವ ರೇವಣ್ಣ
ಬೆಂಗಳೂರು, ಜೂನ್ 09: ಲೋಕೋಪಯೋಗಿ ಖಾತೆ ದೊರೆತ 24 ಗಂಟೆಯಲ್ಲಿಯೇ ಸಚಿವ ಎಚ್.ಡಿ.ರೇವಣ್ಣ ಅವರು 51 ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪಿಡಬ್ಲುಡಿ ಮತ್ತು ಒಳನಾಡು ಜನ ಸಾರಿಗೆ ಇಲಾಖೆಯ 51 ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಲಾಗಿದ್ದು, ಪ್ರಮುಖವಾಗಿ ಪಿಡಬ್ಲುಡಿಯ ಮುಖ್ಯ ಎಂಜಿನಿಯರ್ ರವೀಂದ್ರ ಬಾಬು ಅವರ ಸ್ಥಾನಕ್ಕೆ ಶಿವಕುಮಾರ್ ಎಂಬುವರನ್ನು ನೇಮಿಸಲಾಗಿದೆ.

ಇಲಾಖೆಗೆ ಚುರುಕು ಮುಟ್ಟಿಸಲು ಈ ವರ್ಗಾವಣೆ ಆಗಿದೆಯೋ ಅಥವಾ ಸಚಿವರ ಅನುಕೂಲಕ್ಕಾಗಿ ಆಗಿರುವ ವರ್ಗಾವಣೆಗಳೋ ಎಂಬುದು ಪ್ರಶ್ನೆ. ಒಟ್ಟಿನಲ್ಲಿ ಒಂದೇ ಬಾರಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವರ್ಗಾವಣೆ ನಡೆದಿರುವುದು ಇಲಾಖೆ ಸಿಬ್ಬಂದಿಯಲ್ಲಿ ಸಂಚನ ಹುಟ್ಟಿಸಿರುವುದು ನಿಜ.
ಈ ಹಿಂದೆ ಕೆಎಂಎಫ್ ಅಧ್ಯಕ್ಷರಾಗಿದ್ದ ಇದೇ ರೀತಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು. ಸಿಬ್ಬಂದಿ ನೇಮಿಸಿಕೊಳ್ಳುವುದಕ್ಕೆ ರೇವಣ್ಣ ಅವರು ಖ್ಯಾತರಾಗಿದ್ದರು. ತಮ್ಮ ಸುತ್ತಲೂ ತಮಗೆ ಅನುಕೂಲವಾಗಿ ನಡೆದುಕೊಳ್ಳುವವರನ್ನೇ ಇಟ್ಟುಕೊಳ್ಳುತ್ತಾರೆ ಎಂಬ ಆರೋಪ ರೇವಣ್ಣ ಅವರ ಮೇಲಿದೆ. ಹಾಗಾಗಿ ಈ ವರ್ಗಾವಣೆಯನ್ನು ಅನುಮಾನದಿಂದ ನೋಡಲಾಗುತ್ತಿದೆ.











Click it and Unblock the Notifications