ವಿಕಲಚೇತನರ ಮದುವೆಗೆ ಸಿಎಂ ಸಿದ್ದು ಬಂಪರ್ ಕೊಡುಗೆ

ಈಗಾಗಲೇ ಅಲ್ಪಸಂಖ್ಯಾತರು, ಬಡವರು ಸೇರಿದಂತೆ ಎಲ್ಲರಿಗೂ ಶಾದಿ ಭಾಗ್ಯ ದಯಪಾಲಿಸಿರುವ ಸಿಎಂ ಸಿದ್ದು ಸರಕಾರ ಈಗ ವಿಕಲಚೇತನರನ್ನು ಮದುವೆಯಾದರೆ ಅವರ ಹೆಸರಿನಲ್ಲಿ 50 ಸಾವಿರ ರೂ. ಠೇವಣಿ ಇಡುವ ನೂತನ ಯೋಜನೆಯನ್ನು ಜಾರಿಗೆ ತಂದಿದೆ.
ಶುಭಸ್ಯ ಶೀಘ್ರಂ ಎಂಬಂತೆ ತತ್ ಕ್ಷಣದಿಂದಲೇ ಈ ಯೋಜನೆ ಅನುಷ್ಠಾಣವಾಗುತ್ತಿದೆ. ಇದು ಜಾತ್ಯಾತೀತ. ಅಂದರೆ ಯಾವುದೇ ಜಾತಿಯಲ್ಲಿ ಇಂತಹ ಏರ್ಪಟ್ಟರೂ ಅವರಿಗೆ ಸರಕಾರ 50 ಸಾವಿರ ರೂ ಕೊಡಮಾಡಲಿದೆ.
ಮಾನವೀಯತೆ ದೃಷ್ಟಿಯಿಂದ ವಿಕಲಚೇತನರನ್ನು ಮದುವೆಯಾದರೆ ಭವಿಷ್ಯದಲ್ಲಿ ದಂಪತಿಯ ಬದುಕಿಗೆ ಆಸರೆಯಾಗಲು ಅವರ ಹೆಸರಿನಲ್ಲಿ ರಾಜ್ಯ ಸರಕಾರ 50 ಸಾವಿರ ರೂ ಪ್ರೋತ್ಸಾಹ ಧನ ನೀಡಲಿದೆ. ಈ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಮಾಸಿಕವಾಗಿ ದಂಪತಿಗೆ ಲಭ್ಯವಾಗಲಿದೆ.
ಅಂದರೆ ಅಂಗವಿಕಲ ವ್ಯಕ್ತಿಯನ್ನು ಸಾಮಾನ್ಯ ಯುವಕ/ಯುವತಿ ಮದುವೆಯಾದರೆ ಆ ದಂಪತಿ ಹೆಸರಿನಲ್ಲಿ 5 ವರ್ಷ ಅವಧಿಯ ಫಿಕ್ಸೆಡ್ ಡೆಪಾಸಿಟ್ ಖಾತೆ ತೆರೆಯಲಾಗುವುದು. 5 ವರ್ಷ ಪೂರ್ಣಗೊಂಡ ಬಳಿಕ ಆ ಹಣವನ್ನು ದಂಪತಿ ವಾಪಸ್ ಪಡೆಯಬಹುದು.
ಕಂಡೀಷನ್ಸ್ ಅಪ್ಲೈ: * ಎರಡನೆ ಮದುವೆಯಾದವರಿಗೆ 50 ಸಾವಿರ ರೂ ಭಾಗ್ಯ ಇರುವುದಿಲ್ಲ. * ಯುವಕ/ಯುವತಿಯ ಅಂಗವೈಕಲ್ಯ ಪ್ರಮಾಣ ಶೇ. 40ಕ್ಕಿಂತ ಹೆಚ್ಚಾಗಿರಬೇಕು. * ಜಂಟಿ ಖಾತೆಯ ಪಾಸ್ ಬುಕ್, ಲಗ್ನ ಪತ್ರಿಕೆ, ವಾಸಸ್ಥಳದ ದೃಢೀಕರಣ ಪತ್ರ, ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು.
ಇನ್ನೂ ಏನೆಲ್ಲಾ ಇದೆ: * ಅಂಗವಿಕಲ ದಂಪತಿಗೆ ಹುಟ್ಟುವ 2 ಮಕ್ಕಳಿಗೆ 2 ವರ್ಷದವರೆಗೆ ಪ್ರತಿ ತಿಂಗಳೂ 2 ಸಾವಿರ ರೂ ಸಹಾಯಧನ ರೂಪದಲ್ಲಿ ನೀಡಲಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ರಾಜ್ಯ ಸರಕಾರ ಪ್ರೋತ್ಸಾಹ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅಂಗವಿಕಲರ ಕಲ್ಯಾಣಾಧಿಕಾರಿ 88841 46468.












Click it and Unblock the Notifications