ಬಿಜೆಪಿ ಸರ್ಕಾರ ಬಂದ ಮೇಲೆ 500 ರೈಡ್ ಆಗಿದೆ, ಅದಕ್ಕೂ ಕಾಂಗ್ರೆಸ್ ಸಂಬಂಧ ಇಲ್ಲ: ಸತೀಶ್ ಜಾರಕಿಹೊಳಿ
ಬೆಂಗಳೂರು, ಅಕ್ಟೋಬರ್ 13: ಪಂಚರಾಜ್ಯಗಳ ಚುನಾವಣೆಗೆ ಗುತ್ತಿಗೆದಾರರ ಮೂಲಕ ಹಣ ಸಂಗ್ರಹ ಎಂದು ಮುನಿರತ್ನ ಆರೋಪಕ್ಕೆ ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಮುನಿರತ್ನ ಅವರು ಆರೋಪ ಮಾಡಿದ್ರೆ ಮಾಡಬಹುದು. ಐಟಿ ರೇಡ್ ಗೂ, ಸರ್ಕಾರಕ್ಕೂ ಏನು ಸಂಬಂಧ ಬಿಜೆಪಿ ಸರ್ಕಾರ ಬಂದ ಮೇಲೆ 500 ರೈಡ್ ಆಗಿದೆ, ಅದಕ್ಕೂ ಕಾಂಗ್ರೆಸ್ ಸಂಬಂಧ ಇಲ್ಲ. ಐಟಿ ಡಿಪಾರ್ಟ್ಮೆಂಟ್ ಇದೆ, ರೈಡ್ ಆದವರು ಇದಾರೆ. ಅವರವರ ಮಧ್ಯೆವಿರುವ ವ್ಯವಸ್ಥೆ ಅದು, ಅದನ್ನ ನಮಗೆ ಕನೆಕ್ಟ್ ಮಾಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.

ಯಾರ ಮನೆ ಮೇಲೆ ರೈಡ್ ಆಗಿದೆ ಎಂದು ಪ್ರಶ್ನೆ. ಗುತ್ತಿಗರದಾರರಾ ಅವರು? ಗುತ್ತಿಗೆದಾರರ ಮೇಲೆ ಆಗಿರಬಹುದು, ಸಾಕಷ್ಟು ಜನ ಗುತ್ತಿಗೆದಾರರು ಎಕೋ ಫ್ರೆಂಡ್ಲಿ ಇರ್ತಾರೆ. ಎಲ್ಲಾ ಪಕ್ಷಗಳ ಜೊತೆ ಗುತ್ತಿಗೆದಾರರು ಚೆನ್ನಾಗಿ ಇರ್ತಾರೆ, ಅದಕ್ಕೂ ನಮಗೂ ಸಂಬಂಧ ಇಲ್ಲ. ಡಿಪಾರ್ಟ್ಮೆಂಟ್ ಹಾಗೂ ಅವರ ಮಧ್ಯೆ ಇರುವ ವಿಚಾರ. ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.
ರೈಡ್ ಆದ ತಕ್ಷಣ ಆ ಪಕ್ಷ ಈ ಪಕ್ಷ ಅನ್ನೋದಕ್ಕೆ ಆಗುತ್ತಾ.ಎಲ್ಲದಕ್ಕೂ ರಾಜಕೀಯ ಕಲ್ಪಿಸೋದಕ್ಕೆ ಆಗಲ್ಲ, ಕೆಲವೊಂದು ಸಲ ಸ್ವಾಭಾವಿಕವಾಗಿ ರೈಡ್ ನಡೆದಿರುತ್ತೆ, ಕೆಲವೊಂದು ಆರೋಪ ಬಂದಿರುತ್ತೆ ಆಗ ರೈಡ್ ಆಗುತ್ತೆ. ಕೆಲವು ಬಾರಿ ಐಟಿ ನೋಟೀಸ್ ಕೊಟ್ಟಿರುತ್ತೆ, ಅದಕ್ಕೆ ಗುತ್ತಿಗೆದಾರರು ಉತ್ತರ ಕೊಟ್ಟಿರಲ್ಲ, ಡೀಟೇಲ್ಸ್ ಆಗಿ ಹೋದಾಗಲೇ ಗೊತ್ತಾಗೋದು ಯಾಕೆ ರೈಡ್ ಮಾಡಿದ್ದು ಅಂತ ಹೇಳಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಟಿ ವಿಚಾರವಾಗಿ ಮಾತನಾಡಿ, ಬಾಕಿ ಬಿಲ್ ಬಿಡುಗಡೆ ಆಗಿಲ್ಲ ಅಂದ್ರೆ ನಾವು ಕಾರಣ ಅಲ್, ಅದಕ್ಕೆ ಬಿಜೆಪಿ ಸರ್ಕಾರ ಕಾರಣ. ಅದನ್ನ ನೀವು ಹೈಲೆಟ್ ಮಾಡೋದು ಬೇಡ. ಅನೇಕರು ಹೇಳ್ತಾರೆ ದುಡ್ಡೆಲ್ಲಾ ಗ್ಯಾರಂಟಿ ಹೋಗಿದೆ ಅಂತಾರೆ. ಹಿಂದಿನ ಸರ್ಕಾರ ಅನುದಾನ ಬಿಟ್ಟು ಮೂರು ಪಟ್ಟು ಕಾಮಗಾರಿಗೆ ಹಣ ಖರ್ಚು ಮಾಡಿದ್ದಾರೆ
1500 ಕೋಟಿ ಅನುದಾನ ಇದ್ರೆ, 5000 ಕೋಟಿ ವರೆಗೂ ಕಾಮಗಾರಿಗೆ ಅನುಮತಿ ನೀಡಿದ್ರು. ನನ್ನ ಇಲಾಖೆಲೂ ಇದು ಆಗಿದೆ. ಹಣ ಎಲ್ಲಿಂದ ಬರುತ್ತೆ ಹಾಗಾದ್ರೆ, ನನ್ನ ಇಲಾಖೆಲೇ ಇದು ಆಗಿದೆ ಎಂದರು.
ಕೆಂಪಣ್ಣನ್ನ ಹೇಳಿಕೆಯನ್ನ ಹಿಂದೆ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದ್ದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅವರು ಬಿಲ್ ಕೊಡಿ ಅಂತಿದ್ದಾರೆ ಅಷ್ಟೆ. ಬಿಲ್ ಕೋಡೋದಿಕ್ಕೂ ಹಿಂದಿನ ಆರೋಪ ಮಾಡೋಕು ವ್ಯತ್ಯಾಸ ಇದೆ. ಬಿಲ್ ಕೊಡೋಕೆ ಸಮಸ್ಯೆ ಇದು, ಅವರಿಗೆ ಜಾಸ್ತಿ ಕೊಡೋದಿಕ್ಕೆ ಸಿಎಂ ಬಳಿ ಕೇಳಿದ್ದೇವೆ. ಪಾರದರ್ಶಕ ಇದ್ರೆ ಹಣ ಬಿಡುಗಡೆಗೆ ಅನುಕೂಲ, ಕಮಿಷನ್ ಬಗ್ಗೆ ವಿಪಕ್ಷ ಆರೋಪ ಮಾಡಿದ್ದಾವೆ ಅಂದ್ರೆ ಅದಕ್ಕೆ ಸಾಬೀತು ಮಾಡಬೇಕು. ಅವರು ಡಿಮ್ಯಾಂಡ್ ಇರೋದು ಬಿಲ್ ಬೇಗ ಕೊಡಿ ಅಂತ. ಆರ್ಥಿಕ ಇಲಾಖೆಯಿಂದ ಕೊಡೋದು 1500 ಕೋಟಿ ಮಾತ್ರ, ಉಳಿದ 3500 ಕೋಟಿ ಅವರು ಕೊಡೋದಿಲ್ಲ. ಈಗಾಗಿ ವ್ಯತ್ಯಾಸ ಆಗ್ತಾ ಇದೆ, ಸರಿಪಡಿಸುವ ಕೆಲಸ ಕೂಡ ಆಗುತ್ತಿದೆ ಎಂದು ಹೇಳಿದರು.












Click it and Unblock the Notifications