ಚಿಕ್ಕಮಗಳೂರು: ಮರಳು ದಂಧೆಗೆ ಸಾಥ್, 5 ಅಧಿಕಾರಿಗಳ ಬಂಧನ
ಚಿಕ್ಕಮಗಳೂರು, ಫೆಬ್ರವರಿ 28: ಮಂಗಳೂರು - ಉಡುಪಿ ನಡೆದಿರುವ ಅಕ್ರಮ ಮರಳು ಮಾಫಿಯಾಗೆ ಸಾಥ್ ನೀಡಿದ್ದ ಐವರು ಪಿಡಬ್ಲುಡಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಿಂದ ಉಡುಪಿ ಹಾಗೂ ಮಂಗಳೂರು ಮರಳು ಮಾಫಿಯಾಕ್ಕೆ ಇಲ್ಲಿನ ಇಲಾಖೆಯ ಅಧಿಕಾರಿಗಳ ಸಹಿ ಹಾಗೂ ಸೀಲ್ ಹಾಕಿ ಪರವಾನಗಿ ಬೆಳಕಿಗೆ ಬಂದಿದೆ.
ಈ ಐವರು ಅಧಿಕಾರಿಗಳು ನಕಲಿ ಬಿಲ್‌ಗಳನ್ನು ಬಳಸಿ 10 ಕೋಟಿಗೂ ಅಧಿಕ ಹಣ ದುರುಪಯೋಗ ಹಾಗೂ ನಷ್ಟ ಮಾಡಿದ್ದಾರೆ, ನಾಲ್ಕು ಸಾವಿರಕ್ಕೂ ಅಧಿಕ ನಕಲಿ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶಪ್ಪ, ಸಹಾಯಕ ಎಂಜಿನಿಯರ್ ಲೋಕೇಶ್, ಎಇ ಚಿರಂಜೀವಿ ಜೊತೆಗೆ ಇನ್ನೂ ಇಬ್ಬರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಹಾಗಾಗಿ ಲೋಕೋಪಯೋಗಿ ಇಲಾಖೆಯ ಇನ್ನೂ ಇತರ ಸಿಬ್ಬಂದಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.












Click it and Unblock the Notifications