ಅನ್ನಭಾಗ್ಯ ಎಂಬ ಸಿದ್ದರಾಮಯ್ಯ ಅವರ ರಾಜಕೀಯ ಸೀರೀಸ್‌ನ 5 ಎಪಿಸೋಡುಗಳು: ಬಿಜೆಪಿ
ಬೆಂಗಳೂರು, ಜುಲೈ 11: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಅನುಗುಣವಾಗಿ ರಾಜ್ಯದ ಬಿಪಿಎಲ್ ಕಾರ್ಡುದಾರರಿಗೆ ತಲಾ 10 ಕೆಜಿ ಅಕ್ಕಿ ನೀಡಲು ವಿಫಲವಾಗಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಘಟಕವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಸೀರಿಸ್‌ನ 5 ಎಪಿಸೋಡುಗಳನ್ನು ಬಿಡುಗಡೆ ಮಾಡಿದೆ.
ರಾಜ್ಯ ವಿಧಾನಸಭೆಯ ಚುನಾವಣಾ ಪ್ರಣಾಳಿಕೆಯ ಭಾಗವಾಗಿ ಜನರಿಗೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಕಾಂಗ್ರೆಸ್ ಗ್ಯಾರಂಟಿ ನೀಡಿತ್ತು, ಇದು ಸರ್ಕಾರ 5 ಪ್ರಮುಖ ಗ್ಯಾರಂಟಿಗಳಲ್ಲೂ ಒಂದಾಗಿತ್ತು. ರಾಜ್ಯ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಭಾರತೀಯ ಆಹಾರ ನಿಗಮದಿಂದ ಉಳಿದ ಅಕ್ಕಿ ಖರೀದಿಸಲು ಬಿಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಈಗ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಕ್ಕಿ ಬದಲಿಗೆ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಹಾಕುವುದಾಗಿ ಹೇಳಿದೆ. ಇದು ಸಹಜವಾಗಿ ಬಿಜೆಪಿಯಿಂದ ಟೀಕೆಗೆ ಗುರಿಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಬಿಜೆಪಿ ಸಿರೀಸ್‌ನಂತೆ ಬಿಡುಗಡೆ ಮಾಡಿದೆ. ಅದು ಇಂತಿದೆ.
ಅನ್ನಭಾಗ್ಯ ಎಂಬ @siddaramaiah ರವರ ರಾಜಕೀಯ ಸೀರೀಸ್‌ನ 5 ಎಪಿಸೋಡುಗಳು:
— BJP Karnataka (@BJP4Karnataka) July 11, 2023
🎬 ಮೊದಲ ಎಪಿಸೋಡ್: ಎಲ್ಲರಿಗೂ 10 ಕೆಜಿ ಅಕ್ಕಿ ಫ್ರೀ.
🎬 ಎರಡನೇ ಎಪಿಸೋಡ್: ಮೋದಿ ಸರ್ಕಾರ ನಮಗೆ ಅಕ್ಕಿ ಕೊಡ್ತಾ ಇಲ್ಲ.
🎬 ಮೂರನೇ ಎಪಿಸೋಡ್: ನಾವು ಕೊಡ್ತೀವಿ ಅಂದಿದ್ದೇ ಬರೀ ಐದು ಕೆಜಿ ಅಕ್ಕಿ, ಮೋದಿ ಸರ್ಕಾರ ಈಗಾಗಲೇ ಐದು ಕೆಜಿ ಅಕ್ಕಿ ಕೊಡುತ್ತಿದೆ.
🎬…
ಅನ್ನಭಾಗ್ಯ ಎಂಬ ಸಿದ್ದರಾಮಯ್ಯ ಅವರ ರಾಜಕೀಯ ಸೀರೀಸ್‌ನ 5 ಎಪಿಸೋಡುಗಳು:
1. ಮೊದಲ ಎಪಿಸೋಡ್: ಎಲ್ಲರಿಗೂ 10 ಕೆಜಿ ಅಕ್ಕಿ ಫ್ರೀ.
2. ಎರಡನೇ ಎಪಿಸೋಡ್: ಮೋದಿ ಸರ್ಕಾರ ನಮಗೆ ಅಕ್ಕಿ ಕೊಡ್ತಾ ಇಲ್ಲ.
3. ಮೂರನೇ ಎಪಿಸೋಡ್: ನಾವು ಕೊಡ್ತೀವಿ ಅಂದಿದ್ದೇ ಬರೀ ಐದು ಕೆಜಿ ಅಕ್ಕಿ, ಮೋದಿ ಸರ್ಕಾರ ಈಗಾಗಲೇ ಐದು ಕೆಜಿ ಅಕ್ಕಿ ಕೊಡುತ್ತಿದೆ.
4. ನಾಲ್ಕನೇ ಎಪಿಸೋಡ್: ನಮಗೆ ಮಾರುಕಟ್ಟೆಯಲ್ಲಿ ಅಕ್ಕಿ ಸಿಗುತ್ತಿಲ್ಲ, ಬೇರೆ ರಾಜ್ಯಗಳಿಂದ ಖರೀದಿಸಿ ಕೊಡುತ್ತೇವೆ. ಹೊಟ್ಟೆಗೆ ದುಡ್ಡು ತಿನ್ನೋಕ್ಕೆ ಆಗತ್ತಾ?
5. ಐದನೇ ಎಪಿಸೋಡ್: ಮೋದಿ ಸರ್ಕಾರ 5 ಕೆಜಿ ಅಕ್ಕಿ ಕೊಡ್ತಿದೆ. ಆದರೆ, ನಾವು ಅಕ್ಕಿ ಕೊಡಲ್ಲ. ಬೇಕಾದ್ರೆ ತಿಂಗಳಿಗೆ ₹170 ತಿಂದು ಹೊಟ್ಟೆ ತುಂಬಿಸಿಕೊಳ್ಳಿ.

To be continued...
6. ಆರನೇ ಎಪಿಸೋಡ್: ಮುಂದಿನ ತಿಂಗಳು ಹಣ ನೀಡದಿರಲು ಸರ್ವರ್ ಹ್ಯಾಕ್ ಕಾರಣ ನೀಡಲಾಗುವುದು.
7. ಏಳನೇ ಎಪಿಸೋಡ್: ಆ ನಂತರ ಮತ್ತೂ ಒಂದು ತಿಂಗಳೂ ಆಗಲ್ಲ, ಲೆಕ್ಕ ಬರೆದಿಟ್ಕೊಳಿ ಅನ್ನುತ್ತೆ ಸರ್ಕಾರ.
ನುಡಿದಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗದೆ ಇದಕ್ಕೆ ಹೊಸ ಎಪಿಸೋಡುಗಳು ಮಾತ್ರವಲ್ಲ, ಹೊಸ ಸೀಸನ್ ಆರಂಭವಾದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದಂತೆ ಜುಲೈ 10 ಅನ್ನಭಾಗ್ಯ ಯೋಜನೆಗೆ ಸೋಮವಾರ ಚಾಲನೆ ನೀಡಿದೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣವೇ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಲ್ಲಿಸಿದೆ. ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಅದು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ಕೇಂದ್ರ ಸರ್ಕಾರವೇನು ಪುಕ್ಕಟ್ಟೆ ಕೊಡುತ್ತಿರಲಿಲ್ಲ. ಕೆಜಿಗೆ 34 ರೂ ನಮ್ಮಿಂದ ತೆಗೆದುಕೊಳ್ಳುತ್ತಿದ್ದರು. 4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170ರೂ ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು- ಮಧ್ಯಮ ವರ್ಗದವರು ಎರಡು ಹೊತ್ತು ತಿಂದರೆ ಬಿಜೆಪಿಗೆ ಏನು ಹೊಟ್ಟೆಯುರಿ ಎಂದು ಸಿಎಂ ಪ್ರಶ್ನಿಸಿದರು. ನಿಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಿರ್ವಹಿಸಿ ಎಂದು ಜನರಿಗೆ ಕರೆ ನೀಡಿದರು. ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ 50ನೇ ದಿನಕ್ಕೇ ಅನ್ನಭಾಗ್ಯಕ್ಕೆ ಚಾಲನೆ ನೀಡಲಾಯಿತು. ಇದು ಸಿದ್ದರಾಮಯ್ಯನವರ ಮಹತ್ವದ ಯೋಜನೆಯಾಗಿದೆ.












Click it and Unblock the Notifications