ಮುಂದುವರೆದ ಕೊರೊನಾ ಅಟ್ಟಹಾಸ, ಹೊಸದಾಗಿ 48 ಸೋಂಕಿತರು ಪತ್ತೆ!
ಬೆಂಗಳೂರು, ಮೇ 08: ರಾಜ್ಯದಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 48 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯಾದ್ಯಂತ ಒಟ್ಟಾರೆ 753 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಕಳೆದ ಒಂದು ದಿನದಲ್ಲಿ ದಾವಣಗೆರೆಯಲ್ಲಿ ಅತಿಹೆಚ್ಚು 14 ಸೋಂಕಿತರು ಪತ್ತೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಜನರಿಗೆ ಬೆಳಗಾವಿಯಲ್ಲಿ 11 ಮಂದಿಗೆ ಹಾಗೂ ಬೆಂಗಳೂರಿನಲ್ಲಿ 07 ಮತ್ತು ಚಿತ್ರದುರ್ಗದಲ್ಲಿ ಹೊಸದಾಗಿ 3 ಜನರಿಗೆ ಹಾಗೂ ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
Recommended Video
ರಾಜ್ಯದಲ್ಲಿ ಇಂದು ದೃಢಪಟ್ಟಿರುವ ಪ್ರಕರಣಗಳ ಪೈಕಿ 11 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಸೋಂಕಿಗೆ ತುತ್ತಾಗಿರುವರಲ್ಲಿ 5 ತಿಂಗಳಿನ ಹೆಣ್ಣು ಕೂಸು ಸೇರಿದೆ ಎಂಬುದು ಆತಂಕದ ವಿಚಾರ. ದಾವಣಗೆರೆಯೊಂದರಲ್ಲೆ 6 ಮಕ್ಕಳಿಗೆ ಸೋಂಕು ತಗುಲಿದೆ.
ಕೊರೊನಾ ವೈರಸ್ ಸೋಂಕಿಗೆ ಈವರೆಗೆ ರಾಜ್ಯದಲ್ಲಿ ಒಟ್ಟು 30 ಜನರು ಬಲಿಯಾಗಿದ್ದಾರೆ. ಜೊತೆಗೆ ಕೊರೊನಾ ವೈರಸ್ ದೃಢಪಟ್ಟು ಕೊರೊನಾ ಅಲ್ಲದ ಕಾರಣಕ್ಕೆ ಒಬ್ಬರು ಬಲಿಯಾಗಿದ್ದಾರೆ. 376 ಸೋಂಕಿತರು ಗುಣಮುಖರಾಗಿದ್ದು, ಉಳಿದ 346 ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

ಉಳಿದ 6 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಇನ್ನು ಇವತ್ತು ಪತ್ತೆಯಾಗಿರುವ ಸೋಂಕಿತರಲ್ಲಿ ಪ್ರವಾಸದ ಇತಿಹಾಸ ಇಲ್ಲದಿದ್ದರೂ ಬಳ್ಳಾರಿಯಲ್ಲಿ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಅಹಮದಾಬಾದ್‌ಗೆ ಪ್ರಯಾಣ ಮಾಡಿರುವ 3 ಜನರಲ್ಲಿ ಸೋಂಕು ಪತ್ತೆಯಾಗಿದೆ.












Click it and Unblock the Notifications