ಕೆಂಪೇಗೌಡರ ಪ್ರತಿಮೆ, ಮೋದಿಯ ಸಾರ್ವಜನಿಕ ಸಭೆ, ವ್ಯವಸ್ಥೆಗೆ ಒಟ್ಟು ₹48.44 ಕೋಟಿ ಖರ್ಚು
ಬೆಂಗಳೂರು, ನವೆಂಬರ್ 11: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ ಮಾಡಿದರು. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸರಣಿ ಕಾರ್ಯಕ್ರಮ ಹಾಗೂ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಟ್ಟು 48.44 ಕೋಟಿ ರೂ. ವ್ಯಯಿಸಿದೆ ಎಂದು ತಿಳಿದು ಬಂದಿದೆ.
ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿಗಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಇಲ್ಲಿನ ವಿವಿಧ ಕಾರ್ಯಕ್ರಮಗಳು ಪಾಲ್ಗೊಂಡರು. ಎರಡು ವಿಶೇಷ ರೈಲುಗಳಿಗೆ ಚಾಲನೆ ನೀಡಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ 2ಅನ್ನು ಲೋಕಾರ್ಪಣೆ ಗೊಳಿಸುವ ಜೊತೆಗೆ ಕೆಂಪೇಗೌಡರ 108ಅಡಿ ಪ್ರಗತಿ ಪ್ರತಿಮೆಯನ್ನು ಅನಾವರಣ ಮಾಡಿದರು.
ಈ ಸಂಬಂಧ ಹಮ್ಮಿಕೊಂಡ ಕಾರ್ಯಕ್ರಮಗಳಿಗೆ, ಅಗತ್ಯ ವ್ಯವಸ್ಥೆಗಳಿಗೆ ರಾಜ್ಯ ಸರ್ಕಾರದ ಭೊಕ್ಕಸದಿಂದ ಕೋಟಂತರ ರು. ವ್ಯಯಿಸಲಾಗಿರುವ ಬಗ್ಗೆ 'ದಿ ಫೈಲ್' ನ್ಯೂಸ್ ವರದಿ ಮಾಡಿದೆ. ಅದರ ಪ್ರಕಾರ 48.44 ಕೋಟಿ ರೂ ಹಣ ಖರ್ಚು ಮಾಡಿದ್ದರ ಅಂಕಿ ಅಂಶಗಳು ಲಭ್ಯವಾಗಿವೆ. ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ 108 ಅಡಿ ಕಂಚಿನ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದರು.

ಪ್ರಧಾನಿ ಕಾರ್ಯಕ್ರಮಕ್ಕೆ ಅಂದಾಜು 45.73 ಕೋಟಿ ರೂ. ಖರ್ಚು
ಲಭ್ಯ ಅಂಕಿಸಂಖ್ಯೆಗಳ ಪ್ರಕಾರ ಬೃಹತ್ ಪ್ರಗತಿ ಪ್ರತಿಮೆ ಅನಾವರಣ, ಸಾರ್ವಜನಿಕ ಸಭೆ ಕಾರ್ಯಕ್ರಮ ಸೇರಿದಂತೆ ಎಲ್ಲ ಸಮಾರಂಭ, ವ್ಯವಸ್ಥೆಗಳಿಗೆ ಅಂದಾಜು 45.73 ಕೋಟಿ ರೂ. ಖರ್ಚಾಗಿದೆ. ಪ್ರಧಾನಿ ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ 2.75 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ವರದಿ ಆಗಿದೆ.

ಮೋದಿ ಸಾರ್ವಜನಿಕ ಸಭೆಗೆ 2.75 ಕೋಟಿ ರೂ. ಖರ್ಚು
ಒಟ್ಟು ವ್ಯವಸ್ಥೆಗೆ ಬೇಕಾದ ಅಂದಾಜು 45.73ಕೋಟಿ ರೂ. ಅನ್ನು ಬಿಡುಗಡೆ ಮಾಡುವಂತೆ ಹಾಗೂ ಲೋಕೋಪಯೋಗಿ ಕಾಮಗಾರಿಗಳು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಕೆಟಿಪಿಪಿ ಕಾಯ್ದೆಯಡಿ 4(ಜಿ) ಅಡಿ ಲೋಕೋಪಯೋಗಿ ಇಲಾಖೆಗೆ ವಿನಾಯಿತಿ ನೀಡಬೇಕು. ಬೃಹತ್ ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಮಾರಂಭಕ್ಕಾಗಿ ಅಂದಾಜಿರ್ಕ್ಸ್ ಕಂಪನಿಯಿಂದ ಕೆಲಸ ಕಾರ್ಯಗತಗೊಳಿಸಲು ಕೆಟಿಪಿಪಿ ಕಾಯ್ದೆಯಡಿ 4(ಜಿ) ವಿನಾಯಿತಿ ನೀಡಬೇಕು ಎಂದು ರಾಜ್ಯ ಹಣಕಾಸು (ಆರ್ಥಿಕ) ಇಲಾಖೆಗೆ ಕೋರಿ ಮಂಡಿಸಲಾದ ಕಡತದಲ್ಲಿ ಉಲ್ಲೇಖಿಸಲಾಗಿದೆ.

ಸಭೆಗೆ 2.75 ಕೋಟಿ ಹಣ ಅಂದಾಜು
ಕೆಂಪೇಗೌಡರ ಪ್ರತಿಮೆ ಅನಾವರಣ ಸಂಬಂಧ ರಾಜ್ಯಾದ್ಯಂತ ಮೃತ್ತಿಕೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. 20ಕ್ಕೂ ಹೆಚ್ಚು ವಾಹನಗಳು ರಾಜ್ಯಾದ್ಯಂತ ಸಂಚರಿಸಿದ ನವೆಂಬರ್ 7ರವರೆಗೆ ಮಣ್ಣು ಸಂಗ್ರಹಿಸಿ ನಗರಕ್ಕೆ ಮರಳಿಸಿದ್ದವು. ಈ ಸಂಬಂಧ ನಡೆದ ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರ ನೇತೃತ್ವದ ಸಭೆಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ತಗುಲುವ 2.75 ಕೋಟಿ ಹಣವನ್ನು ಅಂದಾಜಿಸಲಾಗಿತ್ತು.
ರಾಜ್ಯ ಸರ್ಕಾರಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಕೆಂಪೇಗೌಡರ ಪ್ರತಿಮೆ ಅನಾವರಣವು ಪ್ರತಿಷ್ಠಿತ ಕಾರ್ಯಕ್ರಮವಾಗಿತ್ತು. ಜೊತೆಗೆ ಅನಾವರಣದ ನಂತರ ಪ್ರಧಾನಿಗಳು ಪಾಲ್ಗೊಳ್ಳುವ ಸಮಾರಂಭವು ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿತ್ತು. ಈ ಕಾರ್ಯಕ್ರಮಗಳಿಗಾಗಿ ಬಳಸಲು ವಿವಿಧ ವೆಚ್ಚಗಳಿಗೆ ಅನುಮೋದನೆ ನೀಡಿ ಬಿಡುಗಡೆ ಮಾಡಬೇಕು. 4ಜಿ ವಿನಾಯಿತಿ ಅಡಿ ಹಣ ನೀಡುವಂತೆ ಕೋರಲಾಗಿದೆ.

4ಜಿ ವಿನಾಯತಿಯಡಿ ಹಣ ಬಿಡುಗಡೆಗೆ ಕೋರಿಕೆ
ಅದರಂತೆ ಹಣ ಬಿಡುಗಡೆ ಮಾಡುವಾಗ ಆರ್ಥಿಕ ಇಲಾಖೆಗೆ ಸಲ್ಲಿಕೆಯಾಗಿದ್ದ ಪತ್ರದ ಟಿಪ್ಪಣಿ 9ರಲ್ಲಿ ಉಲ್ಲೇಖವಾದಂತೆ ಮೊತ್ತವನ್ನು 4ಜಿ ವಿನಾಯತಿಯಡಿ ಲೋಕೋಪಯೋಗಿ ಇಲಾಖೆಗೆ ಹಾಗೂ ಕೆಂಪೇಗೌಡರ ಪ್ರಾಧಿಕಾರಕ್ಕೆ ನೀಡಲು ಅನುವಾಗುವಂತೆ ಕಂದಾಯ ಇಲಾಖೆಗೆ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ಬೇಟಿಗೂ ಮುನ್ನ ನವೆಂಬರ್ 8ರಂದು ಕೋರಲಾಗಿತ್ತು.
ಪತ್ರ ನೋಡಿದ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರಸಾದ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಜೊತೆಗೆ ಚರ್ಚಿಸಿದ್ದರು. ಬಳಿಕ ಕೋರಲಾಗಿದ್ದ ಅಂದಾಜು ವೆಚ್ಚವನ್ನು ಪರಿಷ್ಕರಿಸುವಂತೆ ಸೂಚಿಸಿದ್ದರ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಹಣ ಬಳಸಿ ಪ್ರತಿಮೆ ಸ್ಥಾಪಿಸುವುದು ಅಪರಾಧ ಎಂದಿದ್ದ ಡಿಕೆ ಶಿವಕುಮಾರ್ ಕೆಐಎಎಲ್‌ಗೆ ಭೂಮಿ, ಹಣ ನೀಡಿದ್ದೇವೆ. 4,200 ಎಕರೆ ಪ್ರದೇಶದಲ್ಲಿ 2000ಎಕರೆಯನ್ನು ಪ್ರತಿ ಎಕರೆಗೆ ಕೇವಲ ಆರು ಲಕ್ಷ ರೂ. ಹಣದ ಷೇರುಗಳು ಇವೆ. ಆ ಹಣ ಬಳಸಬೇಕಿತ್ತು. ಸರ್ಕಾರದ ಹಣ ಬಳಸಿದ್ದೇಕೆ ಎಂದು ಅವರು ಪ್ರಶ್ನಿಸಿದ್ದರು.












Click it and Unblock the Notifications