ಕರ್ನಾಟಕದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಪೂರ್ಣ ಮಾಹಿತಿ

ಬೆಂಗಳೂರು, ಆಗಸ್ಟ್.03: ಕರ್ನಾಟಕದಲ್ಲಿ ಕೊರೊನಾವೈರಸ್ ಮಹಾಸ್ಫೋಟಕ್ಕೆ ಮುಂದುವರಿದಿದೆ. ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 5532 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟು ಸಂಖ್ಯೆಯು 139571ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 4077 ಮಂದಿ ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ 98 ಮಂದಿ ಉಸಿರು ಚೆಲ್ಲಿದ್ದಾರೆ.

ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದೆ. ಅದರಿಂದ ರಾಜ್ಯದಲ್ಲಿ ಒಟ್ಟು 139571 ಸೋಂಕಿತ ಪ್ರಕರಣಗಳ ಪೈಕಿ ಇದುವರೆಗೂ 62500 ಮಂದಿ ಸೋಂಕಿತರು ಗುಣಮುಖರಾಗಿದ್ದು, 74469 ಸಕ್ರಿಯ ಪ್ರಕರಣಗಳಿವೆ. ಇನ್ನು, ಮಹಾಮಾರಿಗೆ ಬಲಿಯಾದವರ ಸಂಖ್ಯೆ 2594ಕ್ಕೆ ಏರಿಕೆ ಆಗಿರುವುದು ಕಂಡು ಬಂದಿದೆ.

ಒಂದೇ ದಿನ ರಾಜ್ಯದಲ್ಲಿ ಎಷ್ಟು ಜನರ ತಪಾಸಣೆ?

ಒಂದೇ ದಿನ ರಾಜ್ಯದಲ್ಲಿ ಎಷ್ಟು ಜನರ ತಪಾಸಣೆ?

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 18074 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 9915 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 27989 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 1446558 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ1497 ಮಂದಿಗೆ ಕೊರೊನಾವೈರಸ್

ಸಿಲಿಕಾನ್ ಸಿಟಿಯಲ್ಲಿ1497 ಮಂದಿಗೆ ಕೊರೊನಾವೈರಸ್

ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಕೊಂಚ ತಗ್ಗಿದಂತೆ ಕಾಣುತ್ತಿದೆ. ಏಕೆಂದರೆ ನಿತ್ಯ 2,000ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದ ರಾಜ್ಯ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲೇ 1497 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 60998ಕ್ಕೆ ಏರಿಕೆಯಾಗಿದೆ. ಒಂದೇ ದಿನ 27 ಜನರು ಕೊವಿಡ್-19 ನಿಂದ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1104ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ 4752 ಮಂದಿಗೆ ಕೊರೊನಾವೈರಸ್ ಸೋಂಕು

ಕರ್ನಾಟಕದಲ್ಲಿ 4752 ಮಂದಿಗೆ ಕೊರೊನಾವೈರಸ್ ಸೋಂಕು

ರಾಜ್ಯದಲ್ಲಿ ಒಟ್ಟು 4752 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 1497, ಮೈಸೂರು 372, ಬಳ್ಳಾರಿ 305, ಬಾಗಲಕೋಟೆ 209, ಧಾರವಾಡ 191, ಕಲಬುರಗಿ 170, ಕೊಪ್ಪಳ 157, ಶಿವಮೊಗ್ಗ 155, ದಕ್ಷಿಣ ಕನ್ನಡ 153, ಮಂಡ್ಯ 152, ಹಾಸನ 131, ಉಡುಪಿ 126, ತುಮಕೂರು 122, ರಾಯಚೂರು 115, ಗದಗ 100, ಹಾವೇರಿ 99, ವಿಜಯಪುರ 92, ಯಾದಗಿರಿ 86, ರಾಮನಗರ 68, ಬೆಳಗಾವಿ 60, ಚಿಕ್ಕಬಳ್ಳಾಪುರ 58, ಚಾಮರಾಜನಗರ 52, ಬೀದರ್ 50, ಚಿಕ್ಕಮಗಳೂರು 46, ದಾವಣಗೆರೆ 41, ಕೋಲಾರ 40, ಕೊಡಗು 39, ಚಿತ್ರದುರ್ಗ 33, ಉತ್ತರ ಕನ್ನಡ 31, ಬೆಂಗಳೂರು ಗ್ರಾಮಾಂತರ 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ಗಂಟೆಗಳಲ್ಲಿ 4776 ಮಂದಿ ಡಿಸ್ಚಾರ್ಜ್

ಕಳೆದ 24 ಗಂಟೆಗಳಲ್ಲಿ 4776 ಮಂದಿ ಡಿಸ್ಚಾರ್ಜ್

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗುತ್ತಿದೆ. ರಾಜ್ಯದಲ್ಲಿ ಗುಣಮುಖರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 4776 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರ 2693, ಮೈಸೂರು 374, ಕಲಬುರಗಿ 369, ರಾಯಚೂರು 141, ದಕ್ಷಿಣ ಕನ್ನಡ 124, ಉಡುಪಿ 122, ಬೆಂಗಳೂರು ಗ್ರಾಮಾಂತರ 116, ಚಿಕ್ಕಬಳ್ಳಾಪುರ 90, ಬೀದರ್ 90, ಧಾರವಾಡ 88, ದಾವಣಗೆರೆ 82, ಉತ್ತರ ಕನ್ನಡ 64, ಬಾಗಲಕೋಟೆ 64, ಚಿಕ್ಕಮಗಳೂರು 53, ಹಾವೇರಿ 53, ಮಂಡ್ಯ 44, ಗದಗ 40, ಕೊಡಗು 32, ಚಾಮರಾಜನಗರ 31, ಬೆಳಗಾವಿ 29, ತುಮಕೂರು 20, ಕೊಪ್ಪಳ 18, ಯಾದಗಿರಿ 12, ವಿಜಯಪುರ 9 ಮಂದಿ ಗುಣಮುಖರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+