108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ
ಬೆಂಗಳೂರು, ಜೂನ್ 14 : ಕರ್ನಾಟಕದ ಆರೋಗ್ಯ ಇಲಾಖೆ ಆಂಬ್ಯುಲೆನ್ಸ್ ಸೇವೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ. 108 ಆಂಬ್ಯುಲೆನ್ಸ್ ಸೇವೆಗೆ ಹೊಸದಾಗಿ 400 ವಾಹನಗಳನ್ನು ಖರೀದಿ ಮಾಡಲಾಗುತ್ತದೆ.
ಹಾವೇರಿಯಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸಲು ರೋಗಿಯ ಬಳಿ ಲಂಚ ಕೇಳಲಾಗಿದೆ ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಸುಮೋಟೋ ಪ್ರಕರಣ ದಾಖಲಾಗಿದ್ದು, ನ್ಯಾ.ವಿಶ್ವನಾಥ ಶೆಟ್ಟಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಶ್ರೀನಿವಾಸ ಗೌಡ ಅವರು ಲೋಕಾಯುಕ್ತರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. 26 ರಿಂದ 30 ಕಿ.ಮೀ. ವ್ಯಾಪ್ತಿಗೆ ಒಂದು ಅಂಬ್ಯುಲೆನ್ಸ್ ಸೇವೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ 780 ಆಂಬ್ಯುಲೆನ್ಸ್‌ಗಳಿವೆ. 400 ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ. ಮೂರು ತಿಂಗಳಿನಲ್ಲಿ ಅವುಗಳು ರಸ್ತೆಗೆ ಇಳಿಯಲಿವೆ ಎಂದು ಹೇಳಿದ್ದಾರೆ. 108 ಆಂಬ್ಯುಲೆನ್ಸ್‌ಗಳ ಜೊತೆ 'ಮಗು-ನಗು' ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications