ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುದ್ಧ ಕುಡಿಯುವ ನೀರು ನೀಡಿದವರಿಗೆ ಅನಂತ ಧನ್ಯವಾದ

|
Google Oneindia Kannada News

ಬಂಗಾರಪೇಟೆ, ಮಾರ್ಚ್, 09: ಬೇಸಿಗೆ ಧಗೆ ಏರುತ್ತಿದೆ. ರಾಜ್ಯದ ಎಲ್ಲ ಕಡೆ ಕುಡಿಯುವ ನೀರಿಗೆ ಸಮಸ್ಯೆ ಆರಂಭವಾಗಿದೆ. ಅದರ ಪರಿಹಾರಕ್ಕೆ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಪ್ರತಿದಿನ ಶ್ರಮಿಸುತ್ತಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನಾಲ್ಕು ಗ್ರಾಮಗಳು ಶುದ್ಧ ಕುಡಿಯುವ ನೀರನ್ನು ಕಂಡಿವೆ. ಜನರ ದಾಹ ತೀರಿಸಲು ಸ್ವಯಂ ಸೇವಾ ಸಂಸ್ಥೆ ಯುನೈಟೆಡ್ ವೇ ಮತ್ತು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮಾಡಿದ ಯತ್ನಗಳು ಅಂತಿಮವಾಗಿ ಫಲ ನೀಡಿವೆ.["ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ"?]

ಬಂಗಾರಪೇಟೆಯ ಎಚ್ ಡಿ ಹೊಸ ಮನೆಗಳು, ರಾಮಸಂದ್ರ, ಆಯನೂರು ಹೊಸಹಳ್ಳಿ, ಕೊಟರಮಗೊಳ್ಳು ಗ್ರಾಮಗಳಿಗೆ ಶುದ್ಧ ಕುಡಿವ ನೀರು ದೊರೆಯುತ್ತಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಮಹಿಳಾ ದಿನದ ವೇಳೆ ಇದು ಮಹಿಳೆಯರಿಗೆ ನೀಡುತ್ತಿರುವ ಕೊಡುಗೆಯಾಗಿದೆ. ಕೇವಲ 5 ರು ಗೆ 20 ಲೀಟರ್ ನೀರು ನೀಡಲಾಗುತ್ತದೆ ಎಂದು ತಿಳಿಸಿದರು.

ಯುಬೈಟೆಡ್ ವೇನ ದವಿದ್ ಕುಮಾರ್ ಮಾತನಾಡಿ, ಕುಡಿಯುವ ನೀರಿನ ಸಮಗ್ರ ಬಳಕೆ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಇಂಥ ಯೋಜನೆ ಹಮ್ಮಿಕೊಳ್ಳಲಾಯಿತು ಎಂದು ತಿಳಿಸಿದರು. ಯುನೈಟೆಡ್ ವೇ ಬೋರ್ಡ್ ಮೆಂಮರ್, ಹರಿಹರನ್, ದೀಪಾ ಸಸಿಧರನ್, ಮಂಗೇಶ್,ಯುನೈಟೆಡ್ ವೇ ಸಂಸ್ಥೆಯ ಪ್ರಶಾಂತ್ ಪ್ರಕಾಶ್ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಬಿಸಿಲ ಬೇಗೆ!

ಬಿಸಿಲ ಬೇಗೆ!

ಬಂಗಾರಪೇಟೆಯ ಎಚ್ ಡಿ ಹೊಸ ಮನೆಗಳು ಗ್ರಾಮದಲ್ಲಿ ಕಂಡು ಬಂದ ದೃಶ್ಯ ಬೇಸಿಗೆಯ ಕತೆ ಹೇಳುತ್ತದೆ. ಊರಿನ ಹಿರಿಯರು ಮರದ ನೆರಳನ್ನು ಆಶ್ರಯಿಸಿದ್ದು ಹೀಗೆ.

ಏರಿದ ಬಿಸಿಲ ಝಳ

ಏರಿದ ಬಿಸಿಲ ಝಳ

ಗ್ರಾಮದಲ್ಲಿ ಕುಡಿಯುವ ನೀರಿಗೆ ಪ್ರತಿನಿತ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದವು. ಇದೆಲ್ಲವನ್ನು ಅರಿತ ಸಂಸ್ಥೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿತು.

ಉದ್ಘಾಟನೆ

ಉದ್ಘಾಟನೆ

ಸಮರ್ಥನಮ್ ಸಂಸ್ಥೆಯ ಮಹಾಂತೇಶ್ ಎಚ್ ಡಿ ಹೊಸ ಮನೆಗಳು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿದರು.

ಚಿಕ್ಕ ಸನ್ಮಾನ

ಚಿಕ್ಕ ಸನ್ಮಾನ

ಸಮರ್ಥನಮ್ ಸಂಸ್ಥೆಯ ಮಹಾಂತೇಶ್ ಅವರಿಗೆ ಗ್ರಾಮಸ್ಥರಿಂದ ಚಿಕ್ಕ ಸನ್ಮಾನ.

ಹೇಗಿದೆ ಪರಿಸ್ಥಿತಿ

ಹೇಗಿದೆ ಪರಿಸ್ಥಿತಿ

ಇದೊಂದು ಫೋಟೋ ಸಾಕು ಗ್ರಾಮದ ವಾಸ್ತವ ಸ್ಥಿತಿಯನ್ನು ಅರಿಯಲು.

ಅಬ್ಬಾ ನೀರು ಬಂತು

ಅಬ್ಬಾ ನೀರು ಬಂತು

ವರುಷಗಳ ನಂತರ ಶುದ್ಧ ಕುಡಿಯುವ ನೀರು ಕಂಡ ಮಹಿಳೆಯ ಸಂತಸ ಕಣ್ಣಿಕೆ ಕಾಣದಿದ್ದರೂ ಮನಸ್ಸಿಗೆ ಅರ್ಥವಾಗುತ್ತದೆ.

ಸಂತಸದ ಕ್ಷಣ ಮತ್ತೊಂದಿಲ್ಲ

ಸಂತಸದ ಕ್ಷಣ ಮತ್ತೊಂದಿಲ್ಲ

ವೃದ್ಧೆಯೊಬ್ಬರಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಿಸಲಾಯಿತು.

ಸಾಧಿಸಿದಿರಿ

ಸಾಧಿಸಿದಿರಿ

ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಊರ ಗ್ರಾಮಸ್ಥರು ಬರಮಾಡಿಕೊಂಡ ಬಗೆ.

ನೀರು ಬಂತು ನೀರು

ನೀರು ಬಂತು ನೀರು

ಶುದ್ಧ ಕುಡಿಯುವ ನೀರು ಕಂಡ ಜನರಲ್ಲಿನ ಧನ್ಯತಾ ಭಾವವನ್ನು ಪದಗಳಲ್ಲಿ ವಿವರಿಸಲು ಸಾದ್ಯವಿಲ್ಲ.

ಬಾಲಕಿಯರ ಸಂಭ್ರಮ

ಬಾಲಕಿಯರ ಸಂಭ್ರಮ

ಕುಡಿಯುವ ನೀರು ಘಟಕ ಉದ್ಘಾಟನೆ ವೇಳೆ ದೇಶದ ಭವಿಷ್ಯವನ್ನು ನಿರ್ಮಾಣ ಮಾಡಲಿರುವ ಮಕ್ಕಳ ಕಣ್ಣಲ್ಲಿನ ಹೊಳಪು.

ಶಾಸಕರ ಮಾತು

ಶಾಸಕರ ಮಾತು

ಕುಡಿಯುವ ನೀರು ಘಟಕ ಕಾರ್ಯಕ್ರಮದ ಉದ್ಘಾಟನೆ ನಂತರ ಮಾತನಾಡಿದ ಶಾಸಕರು ಪ್ರಯತ್ನಗಳನ್ನೆಲ್ಲ ವಿವರಿಸಿದರು.

English summary
Kolar: Finally Kolar District Bangarpet Taluk 4 villages got drinking water. Total Four Drinking Water units inaugurated on 8th March. SN Narayanswamy, MLA, Bangapet applauds the safe drinking water initiative in Bangarpet initiated by Applied materials and United Way Bengaluru. Mr. Hariharam, Board member United Way Bengaluru was also present on this occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X