ಬೀದರ್‌: ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ಒಂಟೆಗಳ ರಕ್ಷಣೆ, ನಾಲ್ವರ ಬಂಧನ

Posted By:
Subscribe to Oneindia Kannada

ಬೀದರ್‌, ನವೆಂಬರ್ 21 : 13 ಒಂಟೆಗಳನ್ನು ಕಳ್ಳಸಾಗಾಣೆ ಮಾಡಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 4 ಜನ ಆರೋಪಿಗಳನ್ನು ಬೀದರ್‌ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

4 arrested for allegedly being camels transported for slaughter in Bidar

ನಾಥನ್ ಖಾನ್‌, ಅಮ್ಜದ್‌ ಖಾನ್‌, ಬಕ್ಕಾಜಿ ಹಾಗೂ ದಿನೇಶ್‌ ಎಂಬುವರ ವಿರುದ್ಧ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಗುಜರಾತ್‌ನಿಂದ ಒಂಟೆಗಳನ್ನು ಕಳ್ಳಸಾಗಾಣೆ ಮಾಡಿ ಬೀದರ್‌ ನ ಸುಲ್ತಾನ್‌ ಪುರ ಕಸಾಯಿಖಾನೆಗೆ ಸಾಗಿಸುತ್ತಿದ್ದರು.

ಒಂಟೆಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಬೀದರ್‌ ಪೊಲೀಸರು, ಒಂಟೆಗಳನ್ನು ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿ, 13 ಒಂಟೆಗಳನ್ನು ವಶಪಡಿಸಿಕೊಂಡರು. ನಂತರ ಅವುಗಳನ್ನು ಬೀದರ್‌ ಜಿಲ್ಲೆಯ ರಾಂಪೂರ್ ಕಾಲೋನಿಯ ಗೋ ಶಾಲೆಗೆ ಹಸ್ತಾಂತರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bidar Police rescued 13 camels, which were allegedly being transported for slaughter. 4 men also arrested.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ