ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ 2018ರಲ್ಲಿ ರೈಲಿನಡಿ ಸಿಲುಕಿ ಮೃತಪಟ್ಟವರ ಮಾಹಿತಿ

|
Google Oneindia Kannada News

ಬೆಂಗಳೂರು, ಜನವರಿ 22: ರೈಲಿನಡಿ ಸಿಲುಕಿ ಮೃತಪಡುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಚಲಿಸುತ್ತಿರರುವ ರೈಲನ್ನು ಏರುವುದು, ರೈಲು ನಿಲ್ಲುವ ಮುನ್ನವೇ ಇಳಿಯುವ ಸಾಹಸ ಮಾಡುವುದು, ಆಯತಪ್ಪಿ ಕೆಳಗೆ ಬೀಳುವುದು ಹೀಗೆ 2018ರಲ್ಲಿ ಒಟ್ಟು 1555 ಮಂದಿ ಮೃತಪಟ್ಟಿದ್ದಾರೆ.

ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸ್ ಪೇದೆರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸ್ ಪೇದೆ

ಒಟ್ಟು ಮೂರು ವರ್ಷಗಳಲ್ಲಿ 4,559ಮಂದಿ ಕರ್ನಾಟಕದಲ್ಲಿ ಸಾವನ್ನಪ್ಪಿದ್ದಾರೆ.ಸರ್ಕಾರಿ ರೈಲ್ವೆ ಪೊಲೀಸರು ನೀಡಿರುವ ವರದಿ ಇದಾಗಿದೆ.

 ರೈಲು ಹಳಿ ಮೇಲೆ ಮೃತಪಟ್ಟಿರುವವರ ಸಂಖ್ಯೆ

ರೈಲು ಹಳಿ ಮೇಲೆ ಮೃತಪಟ್ಟಿರುವವರ ಸಂಖ್ಯೆ

2016ರಲ್ಲಿ 1525, 2017ರಲ್ಲಿ 1479 ಮಂದಿ, 2018ರಲ್ಲಿ 1555 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ಚಲಿಸುತ್ತಿರುವ ರೈಲಿನಿಂದ ಬಿದ್ದು 337 ಮಂದಿ ಮೃತಪಟ್ಟರೆ, ಪ್ಲಾಟ್‌ಫಾರ್ಮ್ ಹಾಗೂ ರೈಲಿನ ಮಧ್ಯೆ ಸಿಲುಕಿ 117 ಮಂದಿ ಇನ್ನಿತರೆ ಅಪಘಾತಗಳಲ್ಲಿ 2,118 ಮಂದಿ ಮೃತಪಟ್ಟಿದ್ದಾರೆ.

ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ರೈಲಿನಿಂದ ಬಿದ್ದು ಸಾವು ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ರೈಲಿನಿಂದ ಬಿದ್ದು ಸಾವು

 ರೈಲಿನಡಿ ಸಿಲುಕಲು ಹಲವು ಕಾರಣಗಳು

ರೈಲಿನಡಿ ಸಿಲುಕಲು ಹಲವು ಕಾರಣಗಳು

ಅದು ಹೇಗೆ ರೈಲಿನ ಚಕ್ರದಡಿ ಸಿಲುಕುತ್ತಾರೆ ಎನ್ನುವುದಕ್ಕೆ ಕಾರಣ ಇಲ್ಲದೆ, ರೈಲ್ವೆ ಹಳಿಯ ಮೇಲೆ ನಡೆದಾಡುವುದು, ಇಯರ್ ಫೋನ್‌ ಹಾಕಿಕೊಂಡು ಹಾಡು ಕೇಳುತ್ತಾ ಹಳಿಯ ಮೇಲೆ ಚಲಿಸುವುದು, ಚಲಿಸುವ ರೈಲನ್ನು ಓಡಿ ಬಂದು ಹತ್ತುವ ಸಾಹಸಕ್ಕೆ ಕೈ ಹಾಕುವುದರಿಂದ ಅಪಘಾತ ಸಂಭವಿಸುತ್ತದೆ.

 ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ

 ಅತಿ ಹೆಚ್ಚು ರೈಲು ಅಪಘಾತಗಳು ಸಂಭವಿಸಿದ್ದು ಎಲ್ಲಿ?

ಅತಿ ಹೆಚ್ಚು ರೈಲು ಅಪಘಾತಗಳು ಸಂಭವಿಸಿದ್ದು ಎಲ್ಲಿ?

ಅತಿ ಹೆಚ್ಚು ರೈಲು ಅಪಘಾತಗಳು ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ, ಮಂಡ್ಯ-ಪಾಂಡವಪುರ ರೈಲು, ವರದಪುರ-ಕುಪ್ಪಂ ರೈಲಿನಲ್ಲಿ ಸಂಭವಿಸಿದೆ.

 ಬೆಂಗಳೂರಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟವರ ಮಾಹಿತಿ

ಬೆಂಗಳೂರಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟವರ ಮಾಹಿತಿ

1) ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ಕಿರಣ್ ಕುಮಾರ್ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕೆಆರ್‌ಪುರ ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟಿದ್ದರು.ತಮಿಳುನಾಡು ಮೂಲದ ಕಿರಣ್ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕೆಲಸದ ಮೇಲೆ ಸ್ವಿಟ್ಜರ್‌ಲ್ಯಾಂಡ್ ಗೆ ಹೋಗಿದ್ದರು. ಈ ವೇಳೆ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗುವನ್ನು ನೋಡಿ ವಾಪಸಾಗುವ ವೇಳೆ ಈ ಘಟನೆ ಸಂಭವಿಸಿತ್ತು.

2)ರೈಲಿನಿಂದ ಇಳಿಯಲು ಹೋಗಿ ಹೆತ್ತವರ ಎದುರೇ ಟೆಕ್ಕಿ ವಿಕ್ರಮ್ ಮೃತಪಟ್ಟಿದ್ದ.ಮಗನೊಂದಿಗೆ ಸಮಯ ಕಳೆಯಬೇಕು ಎನ್ನುವ ಆಸೆಯಲ್ಲಿ ಪೋಷಕರು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರು ಸುತ್ತಾಡಿಸಿ ಬಳಿಕ ರೈಲು ಹತ್ತಿಸಲು ವಿಕ್ರಂ ತೆರಳಿದ್ದ, ಮಾತನಾಡುತ್ತಲೇ ರೈಲು ಹೊರಟೇ ಬಿಟ್ಟಿತು ಆತುರವಾಗಿ ಇಳಿಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದ.

3) ಯಶವಂತಪುರ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಹುಬ್ಬಳ್ಳಿಯ ಮೂಲದ ಮಹಿಳೆ ಮೃತಪಟ್ಟಿದ್ದರು.

English summary
A 28-year-old techie was killed when he came under a moving train after seeing his parents off at Carmelaram in December. Another techie died after he fell through the platform gap while alighting at KR Puram earlier this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X