ಕರುನಾಡಿಗೆ ಕೊರೊನಾಘಾತ: ಒಂದೇ ದಿನ 34804 ಮಂದಿಗೆ ಸೋಂಕು!

ಬೆಂಗಳೂರು, ಏಪ್ರಿಲ್ 25: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣ ಕಳೆದುಕೊಂಡಿದೆ. ಕೊವಿಡ್-19 ಸೋಂಕು ಆರಂಭದ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ 34 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ 24 ಗಂಟೆಗಳಲ್ಲಿ 34804 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 143 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಇದೇ ಅವಧಿಯಲ್ಲಿ 6982 ಸೋಂಕಿತರು ಗುಣಮುಖರಾಗಿದ್ದಾರೆ.

ಕೊರೊನಾ ರೋಗಿಗಳಿಗೆ ಮನೆಯಲ್ಲೇ ಆಕ್ಸಿಮೀಟರ್ ತಪಾಸಣೆ ಹೇಗೆ?
ಬೆಂಗಳೂರಿನಲ್ಲೇ ಒಂದು ದಿನದಲ್ಲಿ 20733 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 6,53,656ಕ್ಕೆ ಏರಿಕೆಯಾಗಿದ್ದು, ಈವರೆಗೂ 5800 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲೇ 77 ಮಂದಿ ಪ್ರಾಣ ಬಿಟ್ಟಿದ್ದು, ಬೆಂಗಳೂರಿನಲ್ಲಿ 1,80,542 ಸಕ್ರಿಯ ಪ್ರಕರಣಗಳಿವೆ.

34804 New Coronavirus Cases Reported in Karnataka Today, State Tally Rise to 1339201

Recommended Video

      ಯಥಾಸ್ಥಿತಿಗೆ ಮರಳಿದ ಸಕ್ಕರೆ ನಾಡು ಮಂಡ್ಯ, ಕೊರೊನಾ ನಿಯಮ ಉಲ್ಲಂಘನೆ! | Oneindia Kannada
      ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 1339201ಕ್ಕೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿವೆ. ಈ ಪೈಕಿ 10,62,594 ಸೋಂಕಿತರು ಗುಣಮುಖರಾಗಿದ್ದು, ಸೋಂಕಿಗೆ ಈವರೆಗೂ 14426 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 262162 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

      ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
      ರಾಜ್ಯದಲ್ಲಿ ಒಟ್ಟು 34804 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 390, ಬಳ್ಳಾರಿ 732, ಬೆಳಗಾವಿ 336, ಬೆಂಗಳೂರು ಗ್ರಾಮಾಂತರ 864, ಬೆಂಗಳೂರು 20733, ಬೀದರ್ 406, ಚಾಮರಾಜನಗರ 284, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 247, ಚಿತ್ರದುರ್ಗ 100, ದಕ್ಷಿಣ ಕನ್ನಡ 564, ದಾವಣಗೆರೆ 242, ಧಾರವಾಡ 546, ಗದಗ 76, ಹಾಸನ 768, ಹಾವೇರಿ 99, ಕಲಬುರಗಿ 626, ಕೊಡಗು 1077, ಕೋಲಾರ 782, ಕೊಪ್ಪಳ 152, ಮಂಡ್ಯ 814, ಮೈಸೂರು 700, ರಾಯಚೂರು 643, ರಾಮನಗರ 225, ಶಿವಮೊಗ್ಗ 418, ತುಮಕೂರು 1153, ಉಡುಪಿ 319, ಉತ್ತರ ಕನ್ನಡ 243, ವಿಜಯಪುರ 468, ಯಾದಗಿರಿ 363 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+