ಬೆಂಗಳೂರಿಗರಿಗೆ ಆಘಾತ; ಒಂದೇ ದಿನ 337 ಮಂದಿಗೆ ಕೊರೊನಾವೈರಸ್!

ಬೆಂಗಳೂರು, ಜೂನ್.19: ಕೊರೊನಾವೈರಸ್ ಸೋಂಕು ಹರಡುವಿಕೆಯ ಆರಂಭಿಕ ಹಂತದಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರೇ ಕರ್ನಾಟಕದ ಪಾಲಿಗೆ ಆತಂಕವನ್ನು ಹುಟ್ಟು ಹಾಕುತ್ತಿದ್ದರು. ಆದರೆ ಸಿಲಿಕಾನ್ ಸಿಟಿಯಲ್ಲಿ ಪರಿಸ್ಥಿತಿ ಬದಲಾಗಿದೆ.

Recommended Video

      ಸರ್ವಪಕ್ಷಗಳ ಸಭೆ, ಎರಡು ಪ್ರಮುಖ ಪಕ್ಷಗಳಿಗೆ ಅವಮಾನ ಮಾಡಿದ ಮೋದಿ | Oneindia Kannada

      ರಾಜ್ಯ ರಾಜಧಾನಿ ಜನರ ಎದೆಯಲ್ಲಿ ನಡುಕ ಹುಟ್ಟಿಸುವಂತಾ ಅಂಕಿ-ಅಂಶಗಳು ಶುಕ್ರವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಹೊರ ಬಿದ್ದಿದೆ. ಬೆಂಗಳೂರು ಒಂದರಲ್ಲೇ 138 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ.

      ಕರ್ನಾಟಕದಲ್ಲಿ ಒಂದೇ ದಿನ 337 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು ಬರೋಬ್ಬರಿ 8281ಕ್ಕೆ ಏರಿಕೆಯಾಗಿದೆ. ಇನ್ನು, ಮಹಾಮಾರಿಗೆ ಬಲಿಯಾದವರ ಸಂಖ್ಯೆಯೂ ಏರುಮುಖವಾಗುತ್ತಿದೆ. ಇದುವರೆಗೂ ಕರ್ನಾಟಕದಲ್ಲಿ ಕೊರೊನಾವೈರಸ್ ಗೆ 124 ಮಂದಿ ಬಲಿಯಾಗಿದ್ದಾರೆ.

      ಸಿಲಿಕಾನ್ ಸಿಟಿ ಜನರಿಗೆ ಕೊರೊನಾವೈರಸ್ ಆಘಾತ

      ಸಿಲಿಕಾನ್ ಸಿಟಿ ಜನರಿಗೆ ಕೊರೊನಾವೈರಸ್ ಆಘಾತ

      ಬೆಂಗಳೂರಿನ ಜನರಿಗೆ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಒಂದೇ ದಿನ ಶತಕದ ಗಡಿ ದಾಟಿದೆ. ರಾಜ್ಯದಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಪೈಕಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಬೆಂಗಳೂರು ಒಂದರಲ್ಲೇ ಪತ್ತೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ 138 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ.

      ಕರ್ನಾಟಕದಲ್ಲಿ ಕೊವಿಡ್-19 ಮಾರಿಗೆ 10 ಮಂದಿ ಬಲಿ

      ಕರ್ನಾಟಕದಲ್ಲಿ ಕೊವಿಡ್-19 ಮಾರಿಗೆ 10 ಮಂದಿ ಬಲಿ

      ಕೊರೊನಾವೈರಸ್ ಸೋಂಕಿನಿಂದ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಎಂಟು ಮಂದಿ ಪ್ರಾಣ ಬಿಟ್ಟಿದ್ದರು. ಶುಕ್ರವಾರ ಕೂಡಾ ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಯ ಅಟ್ಟಹಾಸಕ್ಕೆ ಏಳು ಜನರು ಉಸಿರು ಚೆಲ್ಲಿದ್ದಾರೆ. ವಿಜಯಪುರದಲ್ಲಿ 66 ವರ್ಷದ ಮಹಿಳೆ, ಬೀದರ್ ನಲ್ಲಿ 45 ವರ್ಷದ ಪುರುಷ ಹಾಗೂ 70 ವರ್ಷದ ಮತ್ತೊಬ್ಬ ಪುರುಷ ಸೇರಿದಂತೆ ಒಟ್ಟು 10 ಮಂದಿ ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಗೆ ಬಲಿಯಾದವರ ಸಂಖ್ಯೆಯು 124ಕ್ಕೆ ಏರಿಕೆಯಾಗಿದೆ.

      ರಾಜ್ಯದಲ್ಲಿ 337 ಮಂದಿಗೆ ಕೊವಿಡ್-19 ಸೋಂಕು

      ರಾಜ್ಯದಲ್ಲಿ 337 ಮಂದಿಗೆ ಕೊವಿಡ್-19 ಸೋಂಕು

      ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ 8281 ಏರಿಕೆಯಾಗಿದ್ದು, ರಾಜ್ಯದಲ್ಲಿ ಒಂದೇ ದಿನ 337 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರ -138, ಕಲಬುರಗಿ -52, ಬಳ್ಳಾರಿ - 37, ಹಾಸನ - 18, ದಕ್ಷಿಣ ಕನ್ನಡ - 13, ದಾವಣಗೆರೆ - 12, ಉಡುಪಿ - 11, ಮೈಸೂರು -6, ಕೊಪ್ಪಳ -6, ಯಾದಗಿರಿ - 4, ಕೋಲಾರ -4, ಬೆಂಗಳೂರು ಗ್ರಾಮಾಂತರ -4, ಧಾರವಾಡ - 3, ಮಂಡ್ಯ -3, ಚಿಕ್ಕಬಳ್ಳಾಪುರ - 3, ಬಾಗಲಕೋಟೆ - 3, ರಾಮನಗರ - 3, ತುಮಕೂರು - 2, ಚಿಕ್ಕಮಗಳೂರು - 2, ಬೆಳಗಾವಿ -1, ಉತ್ತರ ಕನ್ನಡ -1, ಶಿವಮೊಗ್ಗ -1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

      ಶುಕ್ರವಾರ 230 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್

      ಶುಕ್ರವಾರ 230 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್

      ಇನ್ನು, ರಾಜ್ಯದಲ್ಲಿ 337 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ, ಒಂದೇ ದಿನ 230 ಸೋಂಕಿತರು ಗುಣಮುಖರಾಗಿದ್ದಾರೆ. ರಾಯಚೂರು - 61, ದಕ್ಷಿಣ ಕನ್ನಡ -46, ಕಲಬುರಗಿ -40, ಬೆಳಗಾವಿ - 25, ಮಂಡ್ಯ - 14, ಯಾದಗಿರಿ - 11, ಬೆಂಗಳೂರು ನಗರ -8, ವಿಜಯಪುರ -8, ಉಡುಪಿ - 4, ಬೀದರ್ - 3, ರಾಮನಗರ - 3, ಧಾರವಾಡ -2, ಬಾಗಲಕೋಟೆ - 2, ಇತರೆ - 3 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+