320 ಕೈದಿಗಳಿಗೆ ಸ್ವಾತಂತ್ರ್ಯ ದಿಚಾರಣೆಯಂದು ಬಿಡುಗಡೆ ಭಾಗ್ಯ
ಬೆಂಗಳೂರು, ಆಗಸ್ಟ್ 11 : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 320 ಕೈದಿಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಗೂ ವಯೋವೃದ್ಧ ಜೀವಾವಧಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ಸರ್ಕಾರ ಮಾರ್ಗಸೂಚಿ ರಚನೆ ಮಾಡಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ 272 ಪುರುಷ ಮತ್ತು 49 ಮಹಿಳಾ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಯಿತು. [ಕೈದಿಗಳ ಬಿಡುಗಡೆಗೆ ಹೊಸ ಮಾರ್ಗಸೂಚಿ]

ಸನ್ನಡತೆ ಆಧಾರದ ಮೇಲೆ ಒಟ್ಟು 320 ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 14 ವರ್ಷ ಶಿಕ್ಷೆ ಅನುಭವಿಸಿದ ಪುರುಷ ಕೈದಿಗಳು ಮತ್ತು 10 ವರ್ಷದ ಶಿಕ್ಷೆ ಪೂರೈಸಿದ ಮಹಿಳಾ ಕೈದಿಗಳನ್ನು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಡುಗಡೆ ಮಾಡಲಾಗುತ್ತದೆ.[ಪುನಃ ಜೈಲಿಗೆ ಹಾಕಿ ಎನ್ನುವ ಮೈಸೂರು ಮಹಿಳೆ ಗೋಳು ಏನು?]
ನೂತನ ಮಾರ್ಗಸೂಚಿ : ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನದಂತೆ ರಚನೆ ಮಾಡಿರುವ ನೂತನ ಮಾರ್ಗಸೂಚಿಯ ಅನ್ವಯ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಪರಿಚ್ಛೇಧ 433 ಎ ಅನ್ವಯ 14 ವರ್ಷಗಳ ಜೀವಾವಧಿ ಶಿಕ್ಷೆ ಪೂರ್ಣಗೊಳಿಸಿರುವ ಕೈದಿಗಳನ್ನು ಸನ್ನಡತೆಯ ಆಧಾರದ ಮೇರೆಗೆ ಬಿಡುಗಡೆ ಮಾಡಲು ಪರಿಗಣಿಸಬಹುದಾಗಿದೆ.
ಈ ಪರಿಚ್ಛೇಧದ ವ್ಯಾಪ್ತಿಗೆ ಒಳಪಡದ 14 ವರ್ಷಗಳ ಜೀವಾವಧಿ ಶಿಕ್ಷೆಗೆ ಒಳಪಟ್ಟಿರುವ ಪುರುಷ ಕೈದಿಯು ಶಿಕ್ಷಾ ಅವಧಿಯಲ್ಲಿ ಯಾವುದೇ ಕಡಿತವಿಲ್ಲದೆಯೇ ಸತತ 10 ವರ್ಷಗಳ ಕಾರಾಗೃಹ ವಾಸವನ್ನು ಪೂರ್ಣಗೊಳಿಸಿದ್ದಲ್ಲಿ ಹಾಗೂ ಮಹಿಳಾ ಕೈದಿ ಶಿಕ್ಷಾ ಏಳು ವರ್ಷ ಕಾಲ ಕಾರಾಗೃಹ ವಾಸವನ್ನು ಪೂರ್ಣಗೊಳಿಸಿದ್ದಲ್ಲಿ ಅಂತಹ ಕೈದಿಗಳನ್ನು ಬಿಡುಗಡೆ ಮಾಡಬಹುದಾಗಿದೆ.












Click it and Unblock the Notifications