3 New Highway: ಕರ್ನಾಟಕದ ಇಲ್ಲಿ 'ಗ್ರೀನ್ ಫೀಲ್ಡ್ ಕಾರಿಡಾರ್, ಬೈಪಾಸ್ ಮತ್ತು ಚತುಷ್ಪಥ ರಸ್ತೆ' ಯೋಜನೆ
ಬೆಂಗಳೂರು, ಜುಲೈ 31: ಕರ್ನಾಟಕವು ಹೆದ್ದಾರಿ ಸಾರಿಗೆ ಮತ್ತು ರೈಲ್ವೆ ಜಾಲ ವ್ಯಾಪ್ತಿಯಲ್ಲಿ ಅನೇಕ ಯೋಜನೆಗಳನ್ನು ಎದುರು ನೋಡುತ್ತಿದೆ. ಒಂದೊಂದೆ ಸಾಕಾರಗೊಳ್ಳಲಿದ್ದು, ಇದೀಗ 32 ಕಿ.ಮೀ ಚತುಷ್ಪಥ ರಸ್ತೆ ಮತ್ತು 45 ಕಿಲೋ ಮೀಟರ್ ಬೈಪಾಸ್ ರಸ್ತೆ ಕಾಮಗಾರಿ ಸೇರಿದಂತೆ ಮೂರು ಹೆದ್ದಾರಿ ಯೋಜನೆಗಳ ಪ್ರಸ್ತಾವನೆ ಕೇಂದ್ರ ಅಂಗಳದಲ್ಲಿವೆ. ಈ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ. ಹಾಗಾದ್ರೆ ಎಲ್ಲೆಲ್ಲಿ? ಯಾವ ಹೆದ್ದಾರಿ ಯೋಜನೆಗಳು ಬರುತ್ತವೆ ಎಂಬ ವಿವರ ಇಲ್ಲಿದೆ.
ನವದೆಹಲಿಯ ಸಂಸತ್ ಭವನದಲ್ಲಿ ಬುಧವಾರ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಸಚಿವ ವಿ.ಸೋಮಣ್ಣ ಅವರು ಭೇಟಿ ಮಾಡಿ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಇದೇ ವೇಳೆ ಆರ್ಥಿಕ ಗ್ರೀನ್‌ಫೀಲ್ಡ್ ಕಾರಿಡಾರ್ ಕಾಮಗಾರಿ ಸೇರಿದತೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಸಚಿವರಿಗೆ ವಿವರಿಸಿ, ಅನುಷ್ಠಾನಕ್ಕೆ ಒಪ್ಪಿಗೆ ನೀಡಬೇಕು. ಅಗತ್ಯ ಅನುದಾನ ಒದಗಿಸುವಂತೆ ಕೋರಿದರು.

ಪ್ರಮುಖ ಮೂರು ಹೈವೇ ಯೋಜನೆಗೆ ಮನವಿ
ಹೌದು, ವಿ.ಸೋಮಣ್ಣ ಅವರು 114 ಕಿ.ಮೀ ಉದ್ದದ ಹಾಸನ-ಹಿರಿಯೂರು ಆರ್ಥಿಕ ಗ್ರೀನ್‌ಫೀಲ್ಡ್ ಕಾರಿಡಾರ್ ಕಾಮಗಾರಿ
(Hassan-Hiriyur Highway Green Corridor Project), ರಾಷ್ಟ್ರೀಯ ಹೆದ್ದಾರಿ 69ರ (NH 69) ಬಡವನಹಳ್ಳಿ-ಭೈರೆನಹಳ್ಳಿ ಭಾಗದ 32 ಕಿ.ಮೀ ಚತುಷ್ಪಥ ರಸ್ತೆ (Highway 4 Line Project) ಕಾಮಗಾರಿ ಹಾಗೂ ತುಮಕೂರು ನಗರಕ್ಕೆ ನಂದಿಹಳ್ಳಿಯಿಂದ (NH 48) ಮಲ್ಲಸಂದ್ರದವರೆಗೆ ಮತ್ತು ಮಲ್ಲಸಂದ್ರದಿಂದ ವಸಂತನರಾಸಾಪುರದವರೆಗೆ 45 ಕಿ.ಮೀ ಬೈಪಾಸ್ ರಸ್ತೆ (Tumkur Vasanthanarasapura Bypass Project) ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ. ಅವರು ಮನವಿ ಮಾಡಿದರು.
ಈ ಮಾರ್ಗಗಳಲ್ಲಿ ಈ ಮೂರು ಯೋಜನೆಗಳು ಅನುಷ್ಠಾನಗೊಂಡಲ್ಲಿ ಅನೇಕ ಜಿಲ್ಲೆಗಳ ಸಂರ್ಪಕ ತ್ವರಿತವಾಗುತ್ತದೆ. ಕೈಗಾರಿಕೆ, ಪ್ರಾಸೋದ್ಯಮ, ವ್ಯಾಪಾರ, ವಹೀವಾಟುಗಳಿಗೆ ಉತ್ತೇಜನ ಸಿಗುತ್ತದೆ. ಪ್ರಯಾಣ ಸಮಯ ಇಳಿಕೆ ಆಗುತ್ತದೆ. ಸಾರಿಗೆ ವ್ಯವಸ್ಥೆ ಸುಧಾರಿಸುತ್ತದೆ ಎಂದು ರಾಜ್ಯ ಸಚಿವರು ವಿವರಿಸಿ, ಅನುಮೋದನಗೆ ಕೋರಿದರು.
ಭೂಮಿ ಸ್ವಾಧೀನ ತೊಂದರೆ..
ಇಷ್ಟು ಮಾತ್ರವಲ್ಲದೇ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್‌ಗೆ ವ್ಯಾಪ್ತಿಯಲ್ಲಿ ಭೂಸ್ವಾಧಿನದಲ್ಲಾದ ತೊಂದರೆಯನ್ನು ನಿವಾರಿಸಬೇಕು. ಭೂಮಿ ಮಾಲಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಕೇಂದ್ರ ಸಚಿವರು ತುಮಕೂರಿನ ಅಭಿವೃದ್ದಿ ವಿಚಾರವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿ.ಸೋಮಣ್ಣ ಅವರು ತಿಳಿಸಿದ್ದು, ಶೀಘ್ರವೇ ಯೋಜನೆಗಳ ಕುರಿತು ಸಿಹಿ ಸುದ್ದಿ ಸಿಗುವ ವಿಶ್ವಾಸ ಅವರು ವ್ಯಕ್ತಪಡಿಸಿದ್ದಾರೆ.
ವಿ.ಸೋಮಣ್ಣ ಅವರು ಇತ್ತೀಚೆಗೆ ತುಮಕೂರು ಮತ್ತು ಬೆಂಗಳೂರು ಮಧ್ಯದ 70 ಕಿಲೋ ಮೀಟರ್ ರೈಲ್ವೆ ಹಳಿಯನ್ನು ನಾಲ್ಕು ಪಥಗಳಾಗಿ ಮೇಲ್ದರ್ಜೆಗೆ ಏರಿಸಲು ಪ್ಲಾನ್ ಮಾಡಲಾಗಿದೆ. ಈ ಸಂಬಂಧ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಿದ್ದೇವೆ ಎಂದು ಮಾಹಿತಿ ನೀಡಿದ್ದರು.












Click it and Unblock the Notifications