ರಾಮನಗರದಲ್ಲಿ ಮೂವರು ಹೆದ್ದಾರಿ ದರೋಡೆಕೋರರ ಬಂಧನ
ಕೆ.ಕೆ.ಧರ್ಮ, ಯೋಗೇಶ್ ಮತ್ತು ಶ್ರೀನಿವಾಸ್ ಬಂಧಿತ ದರೋಡೆಕೋರರಾಗಿದ್ದು, ತಲೆಮರೆಸಿಕೊಂಡಿರುವ ಪೃಥ್ವಿ ಮತ್ತು ರಾಜು ಎಂಬಿಬ್ಬರ ಬಗ್ಗೆ ಮಾಹಿತಿಯಿದ್ದು, ಸದ್ಯದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಮಾಗಡಿ, ಮೇ 11: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಐವರ ತಂಡದ ಪೈಕಿ ಮೂವರನ್ನು ಮಾಗಡಿ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರ ಪತ್ತೆಗೆ ಬಲೆಬೀಸಲಾಗಿದೆ.
ಕೆ.ಕೆ.ಧರ್ಮ, ಯೋಗೇಶ್ ಮತ್ತು ಶ್ರೀನಿವಾಸ್ ಬಂಧಿತ ದರೋಡೆಕೋರರಾಗಿದ್ದು, ತಲೆಮರೆಸಿಕೊಂಡಿರುವ ಪೃಥ್ವಿ ಮತ್ತು ರಾಜು ಎಂಬಿಬ್ಬರ ಬಗ್ಗೆ ಮಾಹಿತಿಯಿದ್ದು, ಸದ್ಯದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಐದು ಮಂದಿ ತಂಡ ಕಟ್ಟಿಕೊಂಡು ರಾತ್ರಿ ಹೊತ್ತು ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು, ಪ್ರಯಾಣಿಕರನ್ನು ಬೆದರಿಸಿ ಅವರಿಂದ ಚಿನ್ನ, ಹಣ, ಮೊಬೈಲ್‍ಗಳನ್ನು ಕಿತ್ತುಕೊಳ್ಳುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ರಾತ್ರಿ 9 ಗಂಟೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ದಾಬಸ್‍ಪೇಟೆ ರಸ್ತೆಯ ರಂಗನಬೆಟ್ಟದ ಕ್ರಾಸ್ ಬಳಿ ದರೋಡೆ ಮಾಡಲು ಈ 5 ಮಂದಿ ಹೊಂಚು ಹಾಕುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಹೀಗಾಗಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಐದು ಮಂದಿ ಪೈಕಿ ಇಬ್ಬರು ತಪ್ಪಿಸಿಕೊಂಡು ಮೂವರು ಸಿಕ್ಕಿ ಬಿದ್ದಿದ್ದರು.
ಕೂಡಲೇ ಅವರನ್ನು ವಶಕ್ಕೆ ಪಡೆದು ಅವರಲ್ಲಿದ್ದ ಮೂರು ಚಿನ್ನದ ಸರ, ಮೂರು ಚಿನ್ನದ ಉಂಗುರಗಳು ಮತ್ತು ಹತ್ತು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆ ಕೃತ್ಯಕ್ಕೆ ಬಳಸಿದ್ದ ಕಾರು, ಕಾರಿನಲ್ಲಿದ್ದ ಮಚ್ಚು, ಲಾಂಗು, ಮುಖವಾಡಗಳು, ಕಾರದ ಪುಡಿ ಇತರೆ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications